ಕುಕನೂರು ತಾಲೂಕಿನ ತಳಬಾಳ ಗ್ರಾಮದ ವಿಶೇಷ ಆರ್ಥಿಕ ವಲಯದಲ್ಲಿ ೫ ಸಾವಿರ ಕೋಟಿ ರೂ. ವೆಚ್ಚದ ಆಟಿಕೆ ಕ್ಲಸ್ಟರ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೂಮಿಪೂಜೆ ನೆರೆವೇರಿಸಲಿದ್ದಾರೆ. ಏಕಸ್ ಇಂಡಿಯಾ ಕಂಪನಿ ರೈತರ ಜಮೀನು ಖರೀದಿಸಿದ್ದು, ಅತ್ಯಾಧುನಿಕ ಆಟಿಕೆ ಸಾಮಗ್ರಿ ಸೇರಿದಂತೆ ನಾನಾ ಗೊಂಬೆಗಳನ್ನು ತಯಾರಿಸಲಾಗುವುದು. ೪೦ ಸಾವಿರ ಜನರಿಗೆ ಉದ್ಯೋಗ ಹಾಗೂ ವಾರ್ಷಿಕ 2,300 ಕೋಟಿ ರೂ. ವಹಿವಾಟಿನ ಗುರಿ ಹೊಂದಲಾಗಿದೆ. ೨೦೨೩ ಕ್ಕೆ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಕಂಪನಿ ಎಂಡಿ ಅರವಿಂದ ಮೆಳ್ಳಿಗೇರಿ ತಿಳಿಸಿದ್ದಾರೆ.
ಏಷ್ಯಾದ ಅತಿ ದೊಡ್ಡ ಆಟಿಕೆ ಕ್ಲಸ್ಟರ್ ಇದಾಗಿದ್ದು, ಕೌಶಲ ತರಬೇತಿ ನೀಡಲು ತಳಕಲ್ ಎಂಜಿನಿಯರಿಗ್ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಲಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್ ತಿಳಿಸಿದರು.
Courtesyg: Google (photo)