Category: ಹಂಗಾಮ

ಹಂಗಾಮ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ದನಿಗಳನ್ನು ಬೇರೆ ಬೇರೆ ಆಯಾಮಗಳ ನೆಲೆಯಿಂದ ಒಂದೆಡೆಗೆ ತರುವ ಉದ್ದೇಶದ್ದು. ಕವಿತೆ, ಕಥೆ, ಪ್ರಬಂಧ, ಪುಸ್ತಕ ಪ್ರಸ್ತಾಪ ಅಲ್ಲದೆ, ಮಹತ್ವದ ಅಭಿಪ್ರಾಯಗಳ ಮಂಡನೆ ಈ ವಿಭಾಗದಲ್ಲಿರುತ್ತದೆ.

ನೋರಾ

ವಿಜಯಲಕ್ಷ್ಮೀ ದಾನರಡ್ಡಿ   “ನಿನ್ನಲ್ಲಿ ಶಕ್ತಿ ಇಲ್ಲ ಎಂದು ಹೇಳಲಿಲ್ಲ. ಬರಹವನ್ನು ಗಂಭೀರವಾಗಿ ತೆಗೆದುಕೊಳ್ಳಲು ಸೂಚಿಸಿದೆ. ಒಳ್ಳೆಯ ಬರಹಕ್ಕೆ ಹೆಚ್ಚು ಶ್ರಮ ಹಾಕಬೇಕು” ಇವೇ ಸಾಲುಗಳು ಹಗಲು-ರಾತ್ರಿಯೆನ್ನದೆ ನನ್ನನ್ನು ಕಾಡಿ ನಿದ್ರಾಹೀನಳನ್ನಾಗಿ ಮಾಡಿದ್ದವು. ನಾನು ಮಾಡಿದ ಬರಹದ ಬಗ್ಗೆ ನನಗೇ ತೃಪ್ತಿ ಇಲ್ಲವೆಂದಾಗ ನನ್ನ ಗುರುಗಳಿಂದ ಅದನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ! ಯೋಚಿಸುತ್ತಲೇ ಮನಸ್ಸಿಲ್ಲದ ಮನಸ್ಸಿನಿಂದ ತಟ್ಟೆಯಲ್ಲಿ ಅನ್ನ ಸಾರು ಹಾಕಿಕೊಂಡು ಊಟಕ್ಕೆ ಕುಳಿತೆನು. ನನ್ನ ಗುರುಗಳು ನನ್ನ ಮೇಲೆ ಅಷ್ಟು ನಂಬಿಕೆ ಇಟ್ಟು ನೀಡಿದ ಒಂದೇ […]

ಭ್ರಷ್ಟಾಚಾರದ ಅನಿರ್ವಾಯತೆ-ಶಿವ್‌ ವಿಶ್ವನಾಥನ್‌ ಅನುವಾದ:ಶಶಿಧರ ಡೋಂಗ್ರೆ

ಭ್ರಷ್ಟಾಚಾರದ ಅನಿವಾರ್ಯತೆ ಮೂಲ: ಶಿವ್ ವಿಶ್ವನಾಥನ್ ಅನುವಾದ: ಶಶಿಧರ ಡೋಂಗ್ರೆ ಭ್ರಷ್ಟಾಚಾರದ ಬಗೆಗಿನ ನನ್ನ ನಿಲುವು ವೆಬರ್ ನಂತರದಲ್ಲಿ ಚಾಲ್ತಿಯಲ್ಲಿರುವ `ಆಧುನಿಕತೆ ಎಂದರೆ ಭ್ರಷ್ಟಾಚಾರವಿಲ್ಲದಿರುವುದು’ ಎಂಬ ಕಲ್ಪನೆಗೆ ಸವಾಲು ಎಸೆಯುವಂಥದ್ದು. ಆಧುನಿಕತೆಯ ಬಗೆಗಿನ ಪಾಶ್ಚಿಮಾತ್ಯ ಸಿದ್ಧಾಂತದ ಪ್ರಕಾರ, ಆಧುನಿಕ ಮತ್ತು ಹಿಂದಿನ ಕಾಲಗಳು ಒಂದಕ್ಕೆ ಇನ್ನೊಂದು ಹೆಣೆದುಕೊಂಡಿರದೆ, ಪ್ರತ್ಯೇಕವಾಗಿರುತ್ತದೆ. ಆದರೆ, ನಮ್ಮ ಸಮಾಜದಲ್ಲಿ ಹೊಸತು ಮತ್ತು ಹಳೆಯದೆರಡೂ ಒಟ್ಟಿಗೆ ಇದ್ದು ಒಂದಕ್ಕೊAದು ಬೆಸೆದುಕೊಂಡಿರುತ್ತದೆ ಮತ್ತು ಭ್ರಷ್ಟಾಚಾರವೆಂಬುದು ಈ ಹೆಣಿಗೆಯ ಒಂದು ಸೂಚಿಯಾಗಿದೆ. ಪಶ್ಚಿಮ ಕೂಡ ಸಂಪೂರ್ಣವಾಗಿ ಆಧುನಿಕವಾಗಿಲ್ಲ […]

ಕಾರಣವಿಲ್ಲದ ಭಯ ಭೀತಿಗಳು

ಆಂಟನ್ ಚೆಕಾವ್ ಅನು: ನಾಗರೇಖಾ ಗಾಂವಕರ ಈ ಜಗದಲ್ಲಿ ಇಷ್ಟು ವರ್ಷಗಳ ಬದುಕಿನುದ್ದಕ್ಕೂ ನಾನು ಬರಿಯ ಮೂರು ಬಾರಿ ಮಾತ್ರ ಭಯಗೊಂಡಿದ್ದೆ. ಮೊದಮೊದಲ ಭಯ ಹೇಗಿತ್ತೆಂದರೆ ಅದು ನನ್ನ ರೋಮಗಳು ನೆಟ್ಟಗಾಗುವಂತೆ ಮಾಡಿತ್ತು. ಇಡೀ ದೇಹವನ್ನು ಥರಥರ ಕಂಪಿಸುವಂತೆ ಮಾಡಿತ್ತು. ಅದು ತೀರಾ ಕ್ಷುಲಕವಾದ ಭಯ. ಆದರೆ ಒಂದು ಬಗೆಯಲ್ಲಿ ವಿಚಿತ್ರವಾಗಿತ್ತು. ಜುಲೈ ತಿಂಗಳ ಒಂದು ಸಂಜೆ ಮಾಡಲು ಏನೂ ಕೆಲಸವಿಲ್ಲದ್ದರಿಂದ ಪತ್ರಿಕೆ ತರೋಣವೆಂದು ನಾನು ನಿಲ್ದಾಣಕ್ಕೆ ಗಾಡಿ ಚಲಾಯಿಸಿದೆ. ಜುಲೈ ತಿಂಗಳ ಒಂದೇ ನಮೂನೆಯ ಸಂಜೆಗಳಂತೆ […]

ಬೆಳಕಿನಲಿ ಪ್ರಕಾಶಿಸುವ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’

ಶಾಂತಾರಾಮ ನಾಯಕ, ಹಿಚಕಡ ಹಸಿರು ಸಿರಿಯ ಕಣಜ ಅಚವೆಯ ಸುಂದರ ಪರಿಸರದ ರಸ ರೋಮಾಂಚನಗೊಳಿಸುವ ವಿಭೂತಿ ಜಲಪಾತದ ಧುಮ್ಮಿಕ್ಕುವ ಬೆಳ್ನೊರೆಯ ಜಲಧಾರೆಯ ನಡುವಿಂದ ಕವಿ ಫಾಲ್ಗುಣ ಗೌಡರ ಕಾವ್ಯಧಾರೆ ಹರಿದು ಬಂದು ಓದುಗರ ಮನ ತಣಿಸಿದೆ. ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ನಾಡಿನ ಹೆಮ್ಮೆಯ ಕವಿ ಪ್ರಿಯ ಜಯಂತ ಕಾಯ್ಕಿಣಿಯವರು ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನಕ್ಕೆ ಮನ್ನುಡಿಯ ಕಿರೀಟ ತೊಡಿಸಿ ‘ಬಿಡುಗಡೆ ಮಾಡಿ ತುಂಬಾ ಪ್ರೀತಿ ಅಭಿಮಾನದಿಂದ ಮುನ್ನುಡಿಯ ಶಿಫಾರಸು ನೀಡಿರುವರು. ಅದು ಒಂದು ಮೋಹಕ […]

ನೋಟವೊಂದೆ ಸಾಕು

ಮಾಧವಿ ಭಂಡಾರಿ ಕೆರೆಕೋಣ ಬಿಸಿಲ ಜಳ ಜಾಸ್ತಿಯಾದಂತೆ ರೈಲಿನ ಹೊರಗಡೆಯಿಂದ ಕಿತ್ತ ಕಣ್ಣನ್ನು ಪುಸ್ತಕದಲ್ಲಿ ನೆಟ್ಟೆ. ಎದುರಿನ ಬರ್ತ್‍ನ ಕಿಟಕಿ ಸೀಟ್ ಖಾಲಿಯಾಗೇ ಇತ್ತು. ಯಾರೋ ಕುಳಿತು ಎದ್ದುದರ ಗುರುತಾಗಿ ಒಂದು ನ್ಯೂಸ್ ಪೇಪರ್ ಅಲ್ಲಿ ಇತ್ತು. ಎತ್ತಿ ಒಗೆಯುವ ಬಸ್ಸಿನಲ್ಲೇ ಓದುವ ನನಗೆ ರೈಲು ಆರಾಮ ಖುರ್ಚಿಯಲ್ಲಿ ಕುಳಿತಂತೆ ಭಾಸವಾಯಿತು. ಓದು ನಿರಾತಂಕವಾಗಿ ಸಾಗಿತು. ಒಂದಿಷ್ಟು ಸಮಯದ ನಂತರ ಧಡಕ್ಕನೆ ಯಾರೋ ಬಂದು ಕುಳಿತ ಸದ್ದು ನನ್ನ ಧ್ಯಾನಸ್ಥ ಓದಿಗೆ ಭಂಗ ತಂದರೂ ಒಂದು ಕ್ಷಣ […]

ದಂಡೆ ಹೂ

ಎಂ.ಜಿ ತಿಲೋತ್ತಮೆ, ಭಟ್ಕಳ ಸೆರಗ ತುಂಬಾ ಕೊಯ್ದು ತರುತ್ತಿದ್ದ ಹೂ ಮಾಲೆಯಾಗಿಸಿ ಬಿಡುತ್ತಿದ್ದಳು ಇಲ್ಲ ದಂಡೆಯಾಗುತ್ತಿದ್ದವು ಅವಳ ಬೆರಳುಗಳಿಗಷ್ಟೇ ಗೊತ್ತು ಎನ್ನುವಷ್ಟು ನಾಜೂಕು ದಾರ ಮತ್ತು ಹೂಗಳ ನಡುವೆ ಸಲೀಸಾಗಿ ದಂಡೆ ಮೂಡುತ್ತಿದ್ದವು ತುಂಬಾ ಬಿಗಿದರೆ ನಲುಗುವುದೆಂಬ ಭಯ ಸೂಕ್ಷ್ಮ ಹೆಣಿಗೆ ಅಪ್ಪಟ ಕಲೆ ಅವಳಿಗೆ ಮಾತ್ರ ಕರಗತ ತೋಟದ ತುಂಬಾ ರಂಗೇರುತ್ತಿದ್ದ ಅಬ್ಭಲಿ ಮುತ್ತುಮಲ್ಲಿ ಸೇವಂತಿಗೆ ನೀರು ಸೇದು ಹೋಯ್ದಾಗಲೆಲ್ಲಾ ಗಿಡಗಳ ಉಸಿರಾಟ ಅವಳಿಗೆ ಕೇಳಿಸುತ್ತಿತ್ತು ದಂಡೆ ಹೂವು ಅವಳ ಕೈ ಬಳೆ ಸದ್ದು ಮೂಗುತಿಯ […]

ಮೀರುವುದು ಕ್ರಿಯಾಪದ

ವೆಂಕಟ್ರಮಣ ಗೌಡ ಬರೆಯುವುದಿದೆ ಕಥೆಯೊಂದನು ಅವಳೆದೆಯೊಳಗಿನ ಹೂದೋಟವ ತಂದಿರಿಸಿ ಸುಡು ಹಗಲಲಿ ಮೆರೆಸಿ ಮಧುರಾತ್ರಿಯನು ಎಲ್ಲ ಮರೆಯುವಂತೆ ಆಹಾ ಎನ್ನಬೇಡ ರಮ್ಯತೆಯ ಅಧಿದೇವತೆಯೆ, ಮರೆಯುವುದೆಂದರೆ ಇಲ್ಲಿ ನೆನಪುಗಳ ಅಗ್ನಿಪರೀಕ್ಷೆ ಕೇಳು ರಮ್ಯದೇವತೆಯೆ, ಸುಂದರ ಸುಳ್ಳುಗಳ ಹೊದ್ದ ನಿನ್ನಂತಲ್ಲ ಅವಳು ಅವಳೊಳಗಿವೆ ನಿನ್ನ ಬಿನ್ನಾಣವನೆಲ್ಲ ಬಯಲಿಗಿಳಿಸುವ ನಿಗಿನಿಗಿ ಕ್ರಿಯಾಪದಗಳು ಕಥೆ ಬರೆಯುವುದೆಂದರೂ ಹೀಗೆಯೇ ಕ್ರಿಯಾಪದಗಳ ನಡುವೆ ಕನಲುವುದು ಮೊಗೆಮೊಗೆದು ನೆನಪುಗಳೊಳಗೆ ಬಂಧಿಯಾಗುವುದು ವಿಫಲ ಪ್ರೇಮದ ಅಸಹನೀಯತೆಯಲ್ಲಿ ಬೆಳಗುವುದು ಬರೆಯುವುದಿದೆ ಕಥೆಯೊಂದನು ಬರೆಯಲನುವಾಗುವುದನ್ನೇ ಕಾದು ಮೀರುವುದನ್ನು

ಮೋಹಕತೆಯಾಚೆಗಿನ ಕವಿತೆಗೆ ಕೈಚಾಚಿದ ಧ್ಯಾನ

ವೆಂಕಟ್ರಮಣ ಗೌಡ “ಈ ಚಿಟ್ಟೆ ಕಾಡಿದ ಹಾಗೆ” ಸುಚಿತ್ರಾ ಹೆಗಡೆ ಅವರ ಕವಿತೆಗಳ ಮೊದಲ ಸಂಕಲನ. ಅದೇ ಹೆಸರಿನ ಕವಿತೆಯ ಪ್ರಸ್ತಾಪದೊಂದಿಗೆ ಈ ಪುಸ್ತಕದ ಕುರಿತು ಕೆಲವು ಮಾತುಗಳನ್ನು ಹೇಳಲು ನನಗೆ ಇಷ್ಟ. ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ’ ಕನ್ನಡ ಕಾವ್ಯವನ್ನು ಎಂದೆಂದೂ ಆವರಿಸಿಕೊಂಡೇ ಇರುವ ದಿವ್ಯ. ‘ಪಾತರಗಿತ್ತಿ ಪಕ್ಕ ನೋಡಿದ್ಯೇನ ಅಕ್ಕ’ ಎಂದು ಶುರುವಾಗುವ ಅದು, ‘ಗಾಳಿ ಕೆನೀಲೇನ ಮಾಡಿದ್ದಾರ ತಾನ’ ಎಂದು ವಿಸ್ತರಿಸಿಕೊಳ್ಳುತ್ತ, ಕೊನೆಗೆ ‘ಇನ್ನು ಎಲ್ಲಿಗೋಟ? ನಂದನದ ತೋಟ!’ ಎಂದು ಅನೂಹ್ಯವಾದುದರ, ಅತೀತವಾದುದರ ಕಡೆಗೆ […]

ಉಮೇಶ ನಾಯ್ಕರ ಕವಿತೆಗಳು: ನಿಷ್ಕಳಂಕ ಜಗಳದಲ್ಲಿನ ನಿಶ್ಚಯ

ವೆಂಕಟ್ರಮಣ ಗೌಡ ‘ಕತ್ತಲ ಧ್ಯಾನಿಸಿದ ನಂತರ’ ಉಮೇಶ ನಾಯ್ಕ ಅವರ ಎರಡನೇ ಕವನ ಸಂಕಲನ (ಪ್ರಕಟಣೆ ವರ್ಷ: 2021). ಇದಕ್ಕೂ 9 ವರ್ಷಗಳ ಕೆಳಗೆ ಅವರ ಮೊದಲ ಸಂಕಲನ ‘ಪೂರ್ಣ ಸತ್ಯವಲ್ಲ ರಸ್ತೆಗಳು’ (2012) ಪ್ರಕಟವಾಗಿತ್ತು. ಮೊದಲನೆಯದರಲ್ಲಿ 40 ಮತ್ತು ಎರಡನೆಯ ಸಂಕಲದಲ್ಲಿ 45 ಕವಿತೆಗಳಿವೆ. ‘ಲೆಕ್ಕಕ್ಕೆ ಅಷ್ಟಾಗಿವೆ’ ಎಂದು ತಮ್ಮನ್ನು ತಾವೇ ಅಣಕಿಸಿಕೊಂಡು ನಕ್ಕುಬಿಡುವ ಜಾಯಮಾನ ಅವರದು. ಹೊಸ ಸಂಕಲನದ ನೆಪದಲ್ಲಿ ಅವರ ಒಟ್ಟಾರೆ ಕವಿತೆಗಳ ಬಗ್ಗೆ ಬರೆಯುವುದು ಇಲ್ಲಿ ನನ್ನ ಉದ್ದೇಶ. ನನ್ನ ಮತ್ತು […]

Back To Top