ವೇಮುಲ, ತಡ್ವಿ, ಸಾಹಿಲ್;‌ ಸಾಂಸ್ಥಿಕ ಹತ್ಯೆಗಳ ಮುಂದುವರಿಕೆ

ಐಐಟಿ ಬಾಂಬೆಯ ಎನರ್ಜಿ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದ 2ನೇ ವರ್ಷದ ವಿದ್ಯಾರ್ಥಿ ಸಾಹಿಲ್‌ ವಾಕೋಡೆ ಸೆಪ್ಟೆಂಬರ್‌ 18,2026 ರಂದು ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ತಕ್ಷಣ ಕಣಕ್ಕಿಳಿದ ಕೆಸರು ಎರಚುವ ಪಡೆ, ʻಸಾಹಿಲ್‌ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದರುʼ ಎಂದು ಮಿಥ್ಯಾರೋಪ ಹೊರಿಸಿ, ವಿಡಿಯೋ ಬಿಡುಗಡೆ ಮಾಡಿತು. ಅಂಬೇಡ್ಕರ್‌, ಪೆರಿಯಾರ್‌, ಫುಲೆ ಸ್ಟಡಿ ಸರ್ಕಲ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಐಐಟಿ ತನ್ನ ಹಿಂದಿನ ಹೇಳಿಕೆ ಹಿಂಪಡೆಯಿತು. ಆದರೆ, ಅಷ್ಟರಲ್ಲಿ ʻಪರೀಕ್ಷೆಯಲ್ಲಿ ನಕಲುʼ ನರೇಟಿವ್‌ ವ್ಯಾಪಕವಾಗಿ ಹರಡಿತ್ತು. […]

ʻಮರಳಿ ಕೃಷಿಗೆʼ ಸಂಭ್ರಮಿಸುವ ಸಂಗತಿಯಲ್ಲ

ಕೋವಿಡ್‌ ನಂತರ ನಡೆದ ಉದ್ಯೋಗ ನಷ್ಟ ಪರ್ವದಲ್ಲಿ ಕೆಲಸ ಕಳೆದುಕೊಂಡವರು ಹಳ್ಳಿಗೆ ವಾಪಸಾಗಿ, ಕೃಷಿಯಲ್ಲಿ ತೊಡಗಿಸಿಕೊಂಡ ಹಲವಾರು ನಿದರ್ಶನಗಳು ವರದಿಯಾಗಿವೆ. ದೇಶದಲ್ಲಿ ಶೇ.86ರಷ್ಟು ಸಣ್ಣ ಮತ್ತು ಅಂಚಿನ ಕೃಷಿಕರಿದ್ದು, ಇವರು 2 ಎಕರೆಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. ಪ್ರತಿವರ್ಷ 8ರಿಂದ 15 ದಶಲಕ್ಷ ಪದವೀಧರರು ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. 25 ವರ್ಷಕ್ಕಿಂತ ಕೆಳಗಿನ ಶೇ.40ರಷ್ಟು ಪದವೀದರರು ನಿರುದ್ಯೋಗಿಗಳಾಗಿದ್ದಾರೆ. ಸಂಕಷ್ಟ ಕಾಲದಲ್ಲಿ ಗ್ರಾಮೀಣ ಜನರಿಗೆ ನೆರವಾಗುತ್ತಿದ್ದ ಉದ್ಯೋಗ ಖಾತ್ರಿ ಯೋಜನೆಯನ್ನು ತಿರುಚಲಾಗಿದೆ. ಇಂಥ ಸನ್ನಿವೇಶದಲ್ಲಿ ʻಮರಳಿ ಕೃಷಿಗೆʼ ಸಂಭ್ರಮಿಸುವ […]

ಓಜೋನ್‌ ಮಾಲಿನ್ಯ: ಜನಾರೋಗ್ಯಕ್ಕೆ ಹಾನಿ, ಕೃಷಿಗೆ ಧಕ್ಕೆ

ಮಳೆಗಾಲದ ಅಂತ್ಯಕ್ಕೆ ಮುನ್ನವೇ ಬೆಂಗಳೂರು ಕಾದ ಹಂಚಿನಂತೆ ಸುಡುತ್ತಿದ್ದು, ತಾಪಮಾನ 34 ಡಿಗ್ರಿ ದಾಟಿದೆ. ಋತುಮಾನಗಳ ನಡುವೆ ವ್ಯತ್ಯಾಸವೇ ಇಲ್ಲದಂತೆ ಆಗಿದ್ದು, ಚಳಿಗಾಲಕ್ಕೆ ಮೊದಲೇ ಬೇಸಿಗೆ ಆರಂಭವಾದಂತೆ ಭಾಸವಾಗುತ್ತಿದೆ. ಉತ್ತರ ಭಾರತದ ರಾಜ್ಯಗಳನ್ನು ಚಳಿಗಾಲದಲ್ಲಿ ಮುಚ್ಚುವ ಕಾವಳ, ಹೊಂಜು(ಹೊಗೆ+ಮಂಜು) ಶಾಲೆಗಳನ್ನು ಬಂದ್‌ ಮಾಡಿಸುತ್ತದೆ; ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳ್ಳುತ್ತದೆ; ವಾಹನಗಳಿಗೆ ಸಮ-ಬೆಸ ದಿನಗಳ ಮೀಸಲು ಆರಂಭವಾಗುತ್ತದೆ. ಕೂಳೆ ದಹನ, ಪಳೆಯುಳಿಕೆ ಇಂಧನಗಳಿಂದ ಹೊರಬರುವ ಕೊಳೆ ಗಾಳಿ ಹಾಗೂ ಸೂಕ್ಷ್ಮಕಣಗಳಿಂದ ಪರಿಸ್ಥಿತಿ ಹದಗೆಡುತ್ತದೆ. ಇದು ಪ್ರತಿವರ್ಷದ ಕತೆ; ಮರುಕಳಿಸುತ್ತಲೇ […]

ಉದ್ಯಾನ ಕಾಯಿದೆ: ನಗರದ ನಾಶಕ್ಕೆ ಮುನ್ನುಡಿ

ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆ ನಡುವೆಯೇ ಸರ್ಕಾರ ರಾಜ್ಯದ ಉದ್ಯಾನಗಳ ನಾಶಕ್ಕೆ ಮುನ್ನುಡಿ ಬರೆಯುವ ಕರ್ನಾಟಕ ಸರ್ಕಾರಿ ಉದ್ಯಾನ ಗಳ(ಸಂರಕ್ಷಣೆ) ಕಾಯಿದೆ 1975ರ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಜೊತೆಗೆ, ಬೆಂಗಳೂರು ಮೆಟ್ರೋಪಾಲಿಟನ್‌ ಲ್ಯಾಂಡ್‌ ಟ್ರಾನ್ಸ್‌ಪೋರ್ಟ್‌ ಅಥಾರಿಟಿ (ತಿದ್ದುಪಡಿ) ಕಾಯಿದೆ 2026ರ ಮೂಲಕ ಅಧಿಕ ವೆಚ್ಚದ ಮೂಲಸೌಲಭ್ಯ ಯೋಜನೆಗಳಿಗೆ ವಿನಾಯಿತಿ ನೀಡಲು ಮುಂದಾಗಿದೆ; ಮೂರು ಸುರಂಗ ಯೋಜನೆ, 9 ಫ್ಲೈಓವರ್‌ ಹಾಗೂ 2 ಎತ್ತರದ ಕಾರಿಡಾರ್‌ ಯೋಜನೆಗಳಿಗೆ ಈ ಕಾಯಿದೆಯಿಂದ ವಿನಾಯಿತಿ ದೊರೆಯಲಿದೆ. […]

ಇವಿ ಆಂದೋಲನ: ಗ್ರಾಹಕ ಜಾಗೃತಿ, ಕಾರ್ಯನೀತಿ ಬೆಂಬಲ ಅಗತ್ಯ

ದೆಹಲಿ ಸರ್ಕಾರ ಏಪ್ರಿಲ್‌ 2026ರಲ್ಲಿ ಪರಿಷ್ಕೃತ ಇವಿ(ವಿದ್ಯುತ್‌ ವಾಹನ) ಕಾರ್ಯನೀತಿಯ ಕರಡು ಪ್ರಕಟಿಸಿತು. ಅದರ ಪ್ರಕಾರ, ಜನವರಿ 1,2027ರಿಂದ ಅಂತರ್ದಹನ ಎಂಜಿನ್‌(ಐಸಿಇ)ನ ಮೂರು ಚಕ್ರದ ವಾಹನಗಳು ಹಾಗೂ ಏಪ್ರಿಲ್‌ 1,2028ರಿಂದ ದ್ವಿಚಕ್ರ ವಾಹನಗಳ ನೋಂದಣಿಯನ್ನು ಸಂಪೂರ್ಣ ನಿಲ್ಲಿಸಲಾಗುತ್ತದೆ. ಜೊತೆಗೆ, 2030ರೊಳಗೆ ಶಾಲಾ ವಾಹನಗಳು, ಕ್ಯಾಬ್‌ಗಳು, ವಿತರಣೆ ಸೇ ವೆಗಳು ಹಾಗು ಸರ್ಕಾರಿ ವಾಹನಗಳು ಶೇ.30ರಷ್ಟು ವಿದ್ಯುದೀಕರಣ ಆಗಬೇಕಿದೆ. 2020ರ ಇವಿ ಕಾರ್ಯನೀತಿ ಜಾರಿ ಬಳಿಕ ರಾಜಧಾನಿಯಲ್ಲಿ ಇವಿಗಳ ಸಂಖ್ಯೆ ಶೇ.14 ಆಗಿದೆ(2025ರಲ್ಲಿ). ನೋಂದಣಿ ಯಾದ ಒಟ್ಟು ವಾಹನಗಳಲ್ಲಿ […]

ಕೆನ್-ಬೆಟ್ವಾ ಯೋಜನೆ ಮತ್ತು ಹನೂರಿನ ಹತ್ಯೆಗಳು

ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯ ಸಂತ್ರಸ್ಥರಿಗೆ ಸಮರ್ಪಕ ಪರಿಹಾರ ನೀಡುವುದಾಗಿ ಸರ್ಕಾರ ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆಕಾರರು ನಿರಶನ ಅಂತ್ಯಗೊಳಿಸಿದ್ದಾರೆ. ಅತ್ಯಂತ ಪ್ರಗತಿಪರ ಕಾನೂನು ಎಂಬ ಶ್ಲಾಘನೆಗೊಳಗಾದ ಪರಿಶಿಷ್ಟ ವರ್ಗಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯಿದೆ 2006 ಅಥವಾ ಎಫ್‌ಆರ್‌ಎಯನ್ನು ನ್ಯಾಯಾಲಯಗಳು ಸಮರ್ಪಕವಾಗಿ ವ್ಯಾಖ್ಯಾನಿಸದೆ ಇರುವುದರಿಂದ ಅರಣ್ಯವಾಸಿಗಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅರಣ್ಯವಾಸಿಗಳು ಮತ್ತು ಕಾ ಡಂಚಿನಲ್ಲಿ ವಾಸಿಸುವ ಜನರ ಕುರಿತ ನಿರ್ಲಕ್ಷ್ಯದ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮೂವರು ಬಲಿಯಾಗಿದ್ದಾರೆ. ಏನಿದು ನದಿ […]

ಅನ್ನದ ಬಟ್ಟಲಿಗೆ ಕೈ ಹಾಕುವ ಇ20

ಕೇಂದ್ರ ಸಚಿವ ನಿತಿನ್‌ ಗಡ್ಕರಿ ವಾಹನಗಳಲ್ಲಿ ಶೇ.100ರಷ್ಟು ಎಥನಾಲ್‌ ಬಳಕೆಗೆ ಅನುಮತಿ ನೀಡುವುದಾಗಿ ಜೂನ್‌ 13, 2026ರಂದು ಘೋಷಿಸಿದರು; ಆನಂತರ, ಎಥನಾಲ್‌ನ್ನು ಜೈವಿಕ ಇಂಧನ, ಐಸೋಬ್ಯುಟನಾಲ್‌ ಆಗಿ ಪರಿವರ್ತಿಸಿ, ಡೀಸೆಲ್‌ ಜೊತೆಗೆ ಮಿಶ್ರಗೊಳಿಸುವ ಯೋಜನೆ ಚಾಲ್ತಿಯಲ್ಲಿದೆ ಎಂದು ಜುಲೈನಲ್ಲಿ ಹೇಳಿದರು. ಜೂನ್‌ 2, 2026ರಂದು ಸಚಿವ ಹರ್ದೀಪ್‌ ಸಿಂಗ್‌ ಪುರಿ ದಿಲ್ಲಿಯಲ್ಲಿ ಇ85 ಇಂಧನ ಬಳಕೆಗೆ ಚಾಲನೆ ನೀಡಿದರು. ಅಷ್ಟಲ್ಲದೆ, ಎಥನಾಲ್‌ ಎಲ್‌ಪಿಜಿ ಮತ್ತು ಪಿಎನ್‌ಜಿಗೆ ಪರ್ಯಾಯವಾಗಿ ಅಡುಗೆ ಮನೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಎಥನಾಲ್‌ ಮಿಶ್ರಿತ […]

ವಸ್ತೆಗುನೆ ಹೋಯಾ, ಕೈಸಿ ಸರ್ಕಾರ್‌ ಹೈ ಯೆ ಮತ್ತು ಸಾಂಸ್ಥಿಕ ವೈಫಲ್ಯ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಬಳಸಿದ ʻಜಿರಳೆಗಳುʼ ಎಂಬ ಪದದಿಂದ ಜಂತರ್‌ಮಂತರ್‌ನಲ್ಲಿ ಆರಂಭಗೊಂಡ ಆಂದೋಲನವು ಶಿಕ್ಷಣ ಸಚಿವ ಪ್ರಧಾನ್‌ ಅವರ ರಾಜೀನಾಮೆಯಿಂದ ಒಂದು ಹಂತ ತಲುಪಿದೆ. ಪ್ರತಿಭಟನೆ ವೇಳೆ ಪ್ರಧಾನಿಯನ್ನು ಟೀಕಿಸಿದ ಬಾಲಕಿ ರುಚಿಕಾ ಸಿಂಗ್‌ಳನ್ನು ಬೆದರಿಸಿ ತಪ್ಪೊಪ್ಪಿಗೆ ಪಡೆದಿರುವುದಲ್ಲದೆ, ರಾಜೀನಾಮೆ ಬಳಿಕ ಸದನಕ್ಕೆ ಆಗಮಿಸಿದ ಧರ್ಮೇಂದ್ರ ಪ್ರಧಾನ್‌ ಅವರಿಗೆ ಹಾರ ಹಾಕಿ ಸಂಭ್ರಮಿಸಲಾಗಿದೆ. ಪ್ರತಿಭಟನೆಗೆ ಕಾರಣವಾದ ಶಿಕ್ಷಣದ ವ್ಯಾಪಾರೀಕರಣ, ಬಡತನ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಯಾವುದೇ ಪ್ರಾಯೋಗಿಕ ಕಾರ್ಯನೀತಿ ರೂಪಿಸಿಲ್ಲ; ಸುಳ್ಳು ಹಾಗೂ […]

Back To Top