Category: ಸುದ್ದಿ – ಸಮಾಚಾರ

ಚಿಕ್ಕಮಗಳೂರಿನಲ್ಲಿ ಭಾರೀ ಮಳೆ: ಸೌಂದರ್ಯ ಹೆಚ್ಚಿಸಿಕೊಂಡ ಚಾರ್ಮಾಡಿ ಘಾಟ್

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸತತ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತದಲ್ಲಿದೆ. ಕಳಸ ಪಟ್ಟಣದಿಂದ ಹೊರನಾಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಇದಾಗಿದ್ದು, ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ.ಕುದುರೆಮುಖ ಸುತ್ತಮುತ್ತ ಬಿಟ್ಟು ಬಿಡದೆ ಮುಂಗಾರು ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಪಶ್ಚಿಮ ಘಟ್ಟ ನದಿಗಳು ಜೀವ ಕಳೆ ಪಡೆದಿವೆ. ಆದರೆ ಧಾರಾಕಾರ ಮಳೆಯಿಂದಾಗಿ ಮಲೆನಾಡು ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸೌಂದರ್ಯದ […]

ಜಿಎಸ್‍ಟಿ ವ್ಯವಸ್ಥೆ: ವಿಶ್ವಾಸಾರ್ಹತೆಗೆ ಧಕ್ಕೆ

43ನೇ ಜಿಎಸ್‍ಟಿ ಮಂಡಳಿ ಸಭೆ ಮುಗಿದಿದೆ. ಕರ್ನಾಟಕ ಸರ್ಕಾರ ತನಗೆ ಬರಬೇಕಿರುವ 11,000 ಕೋಟಿ ರೂ.ಗಳನ್ನು ಕೊಡಬೇಕೆಂದು “ಮನವಿ’ ಸಲ್ಲಿಸಿದೆ! ತಮಿಳುನಾಡು ಹಣಕಾಸು ಸಚಿವ ಪಳನಿವೇಲು ತ್ಯಾಗರಾಜನ್ “ಜಿಎಸ್‍ಟಿ ಸಮಿತಿ ಒಂದು ರಬ್ಬರ್ ಸ್ಟ್ಯಾಂಪ್’ ಎಂದು ಖಂಡಿಸಿದ್ದಾರೆ. ಜಿಎಸ್‍ಟಿ ಪಾಲು ಪಡೆಯುವುದು ರಾಜ್ಯಗಳ ಹಕ್ಕು. ಅದು ಕೇಂದ್ರದ ಭಿಕ್ಷೆಯಲ್ಲ. ರಾಜ್ಯಗಳಿಗೆ ಪಾಲು ಸಲ್ಲಿಸಲು ಕೇಂದ್ರ ಅಂದಾಜು 1.58 ಲಕ್ಷ ಕೋಟಿ ರೂ. ಸಾಲ ಎತ್ತಬೇಕಿದೆ. ಜಿಎಸ್‍ಟಿ ವ್ಯವಸ್ಥೆಯನ್ನು ಜಾರಿಗೊಳಿಸಿದ ರೀತಿ ಹಾಗೂ ಆ ವ್ಯವಸ್ಥೆಯೇ ದೋಷಪೂರಿತ/ಅವೈಜ್ಞಾನಿಕವಾಗಿತ್ತು. ಜಿಎಸ್‍ಟಿ […]

ಮೇಕೆದಾಟು ಜಂಟಿ ಸಮಿತಿ: ರಾಜ್ಯ ಆಕ್ಷೇಪ

ಮೇಕೆದಾಟುವಿನಲ್ಲಿ ಅಕ್ರಮ ನಿರ್ಮಾಣ ನಡೆದಿದೆಯೇ ಎಂಬುದನ್ನು ಪರಿಶೀಲಿಸಲು ಜಂಟಿ ಸಮಿತಿ ರಚನೆಯನ್ನು ಪ್ರಶ್ನಿಸುವುದಾಗಿ ರಾಜ್ಯ ಹೇಳಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ದಕ್ಷಿಣ ವಲಯದ ಪೀಠ ಸೂಮೋಟೋ ಪ್ರಕರಣ ದಾಖಲಿಸಿಕೊಂಡು, ಯೋಜನಾ ಸ್ಥಳದಲ್ಲಿ ಪರಿಸರ ಪರಿಣಾಮ ಲೆಕ್ಕಾಚಾರವನ್ನು ಉಲ್ಲಂಘಿಸಿ ಏನಾದರೂ ಕಾಮಗಾರಿ ನಡೆದಿದೆಯೇ ಎನ್ನುವುದನ್ನು ಪರಿಶೀಲಿಸಲು ಜಂಟಿ ಸಮಿತಿಯನ್ನು ರಚಿಸಿತ್ತು. ಈ ಆದೇಶವನ್ನು ಹಿಂಪಡೆಯಬೇಕೆಂದು ಅರ್ಜಿ ಸಲ್ಲಿಸುವುದಾಗಿ ಸಂಪುಟ ಸಭೆ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಜಂಟಿ ಸಮಿತಿಯು ಜುಲೈ 5ರಂದು ವರದಿ ನೀಡಬೇಕೆಂದು ಎನ್‍ಜಿಟಿ […]

ಮೇಕೆದಾಟು: ಎನ್‍ಜಿಟಿಯಿಂದ ಜಂಟಿ ಸಮಿತಿ

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ದಕ್ಷಿಣ ಪೀಠ ಮೇಕೆದಾಟು ಪ್ರದೇಶದಲ್ಲಿ ಅಕ್ರಮ ನಿರ್ಮಾಣ ಕಾರ್ಯಗಳು ನಡೆಯುತ್ತಿವೆಯೇ ಎನ್ನುವುದನ್ನು ಪರಿಶೀಲಿಸಲು ಜಂಟಿ ಸಮಿತಿಯನ್ನು ರಚಿಸಿದೆ. ಜುಲೈ 5ರೊಳಗೆ ವರದಿ ಸಲ್ಲಿಸಬೇಕೆಂದು ನಿರ್ದೇಶಿಸಿದೆ. ಈ ಕುರಿತು ಮಾಧ್ಯಮದಲ್ಲಿ ವರದಿಯೊಂದು ಪ್ರಕಟವಾಗಿತ್ತು. ಸೋಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಎನ್‍ಜಿಟಿ, ಪರಿಸರ ಪರಿಣಾಮ ಲೆಕ್ಕಾಚಾರ ನಡೆಸದೆ ಹಾಗೂ ಅಗತ್ಯವಿರುವ ಅನುಮತಿಗಳನ್ನು ಪಡೆಯದೆ, ನಿರ್ಮಾಣ ಕಾರ್ಯಕ್ಕೆ ಮುಂದಾಗುವುದು ಅಕ್ರಮವಾಗಲಿದೆ ಎಂದಿದೆ. ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡವಾಗಿ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ. ****

ಯಸ್‍ನಿಂದ ಅಪಾರ ಹಾನಿ

ಪಶ್ಚಿಮ ಬಂಗಾಳ ಹಾಗೂ ಒಡಿಷಾಕ್ಕೆ ಅಪ್ಪಳಿಸಿರುವ ಯಸ್, ಅಪಾರ ಪ್ರಾಣ ಹಾಗೂ ಆಸ್ತಿ ಹಾನಿಗೆ ಕಾರಣವಾಗಿದೆ. ಒಡಿಷಾದಲ್ಲಿ ನಾಲ್ಕು ಹಾಗೂ ಪಶ್ಚಿಮ ಬಂಗಾಳದಲ್ಲಿ ಒಬ್ಬರು ಪ್ರಾಣ ತೆತ್ತಿದ್ದಾರೆ. ಪೂರ್ವ ಕರಾವಳಿಯ ಪಶ್ಚಿಮ ಬಂಗಾಳ ಹಾಗೂ ಒಡಿಷಾದ ಗಡಿ ಪ್ರದೇಶದಲ್ಲಿ ಅಪಾರ ಹಾನಿಗೆ ಕಾರಣವಾಗಿದೆ. ಒಡಿಷಾದ ಬಾಲಸೋರ್ ಹಾಗೂ ಭದ್ರಕ್ ಜಿಲ್ಲೆಗಳ 128 ಗ್ರಾಮಗಳಿಗೆ ಸಮುದ್ರದ ನೀರು ನುಗ್ಗಿದೆ. ಪಶ್ಚಿಮ ಬಂಗಾಳದಲ್ಲಿ 15 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಒಡಿಷಾದಲ್ಲಿ 6.5 ಲಕ್ಷ […]

ಇಂಧನ ಬೆಲೆ 13ನೇ ಬಾರಿ ಹೆಚ್ಚಳ

ಪ್ರಸ್ತುತ ಮಾಸದಲ್ಲಿ ಇಂಧನ ಬೆಲೆ 13ನೇ ಬಾರಿ ಹೆಚ್ಚಳಗೊಂಡಿದ್ದು, ಪೆಟ್ರೋಲ್ ಬೆಲೆ ಲೀಟರ್‍ಗೆ 100 ರೂ. ಆಗಲು ಹೆಚ್ಚು ಕಾಲ ಬೇಕಿಲ್ಲ. ಮೇ 26ರ ಬುಧವಾರ ಪೆಟ್ರೋಲ್ ಬೆಲೆ 23 ಪೈಸೆ ಹಾಗೂ ಡೀಸೆಲ್ ಬೆಲೆ 25 ಪೈಸೆ ಹೆಚ್ಚಳಗೊಂಡಿದೆ. ಇಂಧನ ಬೆಲೆ ಸಾಗಣೆ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ದಿನನಿತ್ಯದ ಸರಕುಗಳ ಬೆಲೆಯಲ್ಲಿ ನಿರಂತರ ಹೆಚ್ಚಳವಾಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ನೂರು […]

ಹೊಸ ಐಟಿ ಕಾಯ್ದೆ ಜಾರಿ

ನೂತನ ಮಾಹಿತಿ ತಂತ್ರಜ್ಞಾನ ಕಾಯಿದೆ ಇಂದಿನಿಂದ ಜಾರಿಗೆ ಬಂದಿದ್ದು, ಬಹುತೇಕ ಅಂತರ್ಜಾಲ ಮಧ್ಯಸ್ಥ ಕಂಪನಿಗಳು ನಿಯಮಗಳನ್ನು ಜಾರಿಗೊಳಿಸುವುದಾಗಿ ಹೇಳಿವೆ. ಮಾಹಿತಿ ತಂತ್ರಜ್ಞಾನ(ಮಧ್ಯಸ್ಥಗಾರರು ಹಾಗೂ ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು-2021 ಮಧ್ಯಸ್ಥ ಸಂಸ್ಥೆಗಳಾದ ಕೂ, ಫೇಸ್‍ಬುಕ್, ಗೂಗಲ್, ಟ್ವಿಟರ್, ಟೆಲಿಗ್ರಾಂ ಹಾಗೂ ಇನ್‍ಸ್ಟಾಗ್ರಾಂಗೆ ಅನ್ವಯಿಸಲಿದೆ. ಹೊಸ ನಿಯಮಗಳನ್ನು ತಾನು ಜಾರಿಗೊಳಿಸುವುದಾಗಿ ಫೇಸ್‍ಬುಕ್ ಹೇಳಿದ್ದು, ಬಹುತೇಕ ಎಲ್ಲ ನಿಯಮಗಳನ್ನು ತಾನು ಅಳವಡಿಸಿಕೊಂಡಿರುವುದಾಗಿ ಟೆಲಿಗ್ರಾಂ ಹೇಳಿಕೊಂಡಿದೆ. ದೇಶಿ ಆಪ್ ಕೂ, ತಾನು ಎಲ್ಲ ನಿಯಮಗಳಿಗೆ ಅಳವಡಿಸಿಕೊಂಡಿರುವುದಾಗಿ ಹೇಳಿದೆ. ಟ್ವಿಟರ್ ಹಾಗೂ […]

ಮಂಗಳೂರಿನಲ್ಲಿ ಎರಡು ಶಾಸನಗಳು ಪತ್ತೆ

ಮಂಗಳೂರು:ಮಂಗಳೂರಿನ ಹೊಯಿಜ್ ಬಜಾರ್‌ನಲ್ಲಿರುವ ಮೀನುಗಾರಿಕಾ ಕಾಲೇಜಿನ ತಂತ್ರಜ್ಞಾನ ವಿಭಾಗದ ಕ್ಯಾಂಪಸ್‌ನಲ್ಲಿ ಎರಡು ಶಾಸನಗಳು ದೊರೆತಿವೆ, ಶಾಸನಗಳಲ್ಲಿ ಒಂದು ಪೋರ್ಚುಗೀಸ್ ಮತ್ತು ಇನ್ನೊಂದು ಹಳೆಗನ್ನಡ (ಹಳೆಯ ಕನ್ನಡ) ದಲ್ಲಿದೆ. ಆಳವಾದ ಅಧ್ಯಯನವನ್ನು ನಡೆಸಲು ಮೈಸೂರಿನ ಶಾಸನ ತಜ್ಞರ ತಂಡವು ಶಾಸನದ ಎಸ್ಟಾಂಪೇಜ್ ಅನ್ನು ತೆಗೆದುಕೊಂಡಿದೆ. ಕನ್ನಡ ಶಾಸನವು 11 ಸಾಲುಗಳನ್ನು ಹೊಂದಿದೆ ಮತ್ತು 11 ನೇ ಶತಮಾನಕ್ಕೆ ಸೇರಿದೆ ಎಂದು ಪ್ರಾಥಮಿಕ ಅಧ್ಯಯನಗಳು ಬಹಿರಂಗಪಡಿಸಿವೆ. ಪೋರ್ಚುಗೀಸ್ ಭಾಷೆಯಲ್ಲಿನ ಶಾಸನದ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸುವ ಅವಶ್ಯಕತೆಯಿದೆ ಎಂದು ತಜ್ಞರಾದ […]

ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು: ಕಿರು ಪರಿಚಯ

ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು: ಒಂದು ಕಿರು ಪರಿಚಯ , ಆಶಾ ಸಿದ್ದಲಿಂಗಯ್ಯ ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು. ನಶಿಸಿಹೋಗುತ್ತಿರುವ ಈ ಕಲಾಪ್ರಕಾರದ ಮಹತ್ವ ಹಾಗೂ ಅದರ ವಿಶೇಷತೆ, ನಮ್ಮ ಭವ್ಯ ಸಾಂಸ್ಕೃತಿಕ ಪರಂಪರೆಯ ಪರಿಚಯ ನಾಡಿನ ಪ್ರತಿಯೊಬ್ಬ ನಾಗರಿಕರಿಗೂ ಅರಿವಿರಬೇಕಾದುದು ಅಗತ್ಯ. ನಂದೀಧ್ವಜ ಕುಣಿತ: ನಂದೀಧ್ವಜವನ್ನು ನಂದೀಕಂಬ, ನಂದೀಕೋಲು, ವ್ಯಾಸಗೋಲು, ನಂದೀಪಟವೆಂದೂ ಕರೆಯುತ್ತಾರೆ. ಕೊಡಗು ಕರಾವಳಿಯಲ್ಲಿ ಬಿಟ್ಟರೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಕಲೆ ರೂಢಿಯಲ್ಲಿದೆ. ವೀರಗಾಸೆ: ಶೈವ ಸಂಪ್ರದಾಯದ ಒಂದು ಮಹತ್ವಪೂರ್ಣ […]

Back To Top