Author: Rutha Editor

Journalist,Translator,avid bibliophile

ವಿದೇಶಿ ದೇಣಿಗೆ ನಿಯಂತ್ರಣ ಕಾನೂನು 2026: ಎನ್‌ಜಿಒಗಳಿಗೆ ಅಂಕುಶ

ವಿದೇಶಿ ದೇಣಿಗೆ ನಿಯಂತ್ರಣ ಮಸೂದೆ 2026 ಅನುದಾನ ಪಡೆಯಲು ಪಾಲಿಸಬೇಕಾದ ನಿಯಮಗಳನ್ನು ಬಿಗಿಗೊಳಿಸಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್‌ಎ)ದ ಹೊಸ ನಿಯಮ ಗಳ ಪ್ರಕಾರ, ದೇಣಿಗೆಯನ್ನು 16 ಧಾರ್ಮಿಕ, 22 ಶೈಕ್ಷಣಿಕ, 19 ಆರ್ಥಿಕ, 18 ಸಾಂಸ್ಕೃತಿಕ ಹಾಗೂ ಸಾಮಾಜಿಕ ಉದ್ದೇಶದ 30 ಸೇರಿದಂತೆ 105 ಚಟುವಟಿಕೆಗಳಿಗೆ ಮಾತ್ರ ಬಳಸಬೇಕು. ನಿಯಮ ಗಳನ್ನು ಜೂನ್‌ 23, 2026ರ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರವು ಮಾರ್ಚ್‌ 25, 2026ರಂದು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿತು. ಬಲವಂತದ ಮತಾಂತರ ಹಾಗೂ ಸಂವಿಧಾನದ […]

ಪಂಜಾಬಿನ ಹಳೆಯ ಗಾಯಗಳನ್ನು ತೆರೆದ ʻಸಟ್ಲಜ್‌ʼ

ಜುಲೈ 5,2026ರಂದು ಜೀ5 ತನ್ನ ಒಟಿಟಿ ವೇದಿಕೆಯಿಂದ ʻಸಟ್ಲಜ್‌ʼ ಚಲನಚಿತ್ರವನ್ನು ತೆಗೆದುಹಾಕಿತು. ಸರ್ಕಾರ ಹೇಳಿದ್ದರಿಂದ ತೆಗೆಯಲಾಗಿದೆ ಎಂದು ಚಿತ್ರನಿರ್ಮಾಪಕರು ಹೇಳಿದರು. ಕೆಲವೊಮ್ಮೆ ಚಲನಚಿತ್ರಗಳು ಸುದ್ದಿಯಾಗುವುದಿಲ್ಲ; ಬದಲಾಗಿ, ಅವುಗಳ ಹಿಂದಿನ ರಾಜಕೀಯ, ಜನರ ಪೂರ್ವಗ್ರಹಗಳು ಮತ್ತು ಸಮಾಜದಲ್ಲಿನ ಗಾಯಗಳನ್ನು ಕೆದಕುವ ಮೂಲಕ ಸುದ್ದಿಯಾಗುತ್ತವೆ. ಸಿದ್ಧಾಂತ/ಹಿಂಸೆ/ನಾಯಕನನ್ನು ವೈಭವೀಕರಿಸುವ ಸಾವಿರಾರು ಸಿನೆಮಾಗಳು ಬಂದಿವೆ; ಮುಂದೆಯೂ ಬರಲಿವೆ. ಆದರೆ, ʻಸಟ್ಲಜ್‌ʼನಂಥ ಚಿತ್ರಗಳು ಸಾಮಾಜಿಕ/ರಾಜಕೀಯ ಕಾರಣದಿಂದಾಗಿ ಮುಖ್ಯವಾಗುತ್ತವೆ. ಸಟ್ಲಜ್‌ ಪ್ರದರ್ಶನ ಜುಲೈ 3ರಿಂದ ಆರಂಭಗೊಂಡಿತು. ಹನಿ ಟ್ರೆಹಾನ್ ನಿರ್ದೇಶನ, ಆರ್‌ಎಸ್‌ವಿಪಿ ಮೂವೀಸ್ ಮತ್ತು ಮ್ಯಾಕ್‌ಗಫಿನ್ […]

ಯುಎಪಿಎ; ಜಾಮೀನು ಇಲ್ಲವೇ ಸೆರೆವಾಸದ ದ್ವಂದ್ವ

ಅಕ್ರಮ ಚಟುವಟಿಕೆ ತಡೆ ಕಾಯಿದೆ(ಯುಎಪಿಎ) ಅಡಿ ಬಂಧಿತರಿಗೆ ಜಾಮೀನು ನೀಡಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಎರಡು ಪೀಠಗಳು ವಿಭಿನ್ನ ತೀರ್ಪು ನೀಡಿರುವುದರಿಂದ, ಆದೇಶದ ಪರಾಮರ್ಶನಕ್ಕೆ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ. ಸಯೀದ್‌ ಅಹ್ಮದ್‌ ಅಬ್ದುಲ್‌ ವಾಹಿದ್‌ ಚೌಧರಿ ವಿ/ಎಸ್‌ ಮಹಾರಾಷ್ಟ್ರ ಸರ್ಕಾರ(2026) ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ನ್ಯಾ.ಮಾಧವ ಜಾಮದಾರ ಅವರು ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರಿಗೂ ಸಂವಿಧಾನ ನೀಡಿರುವ ಹಕ್ಕು; ಪೊಲೀಸರು ಪ್ರಜೆಗಳ ಸೇವಕರೇ ಹೊರತು ಸರ್ಕಾರದ ಉನ್ನತ ಅಧಿಕಾರಿಗಳ ಸೇವಕರಲ್ಲ ಎಂದು ಜುಲೈ 3, 2026ರಂದು ಹೇಳಿದ್ದಾರೆ. […]

ನೀಟ್‌-ಯುಜಿ: ಸರ್ಕಾರದ ಲೋಪಕ್ಕೆ ಟೆಲಿಗ್ರಾಂಗೆ ಬರೆ

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಮರುಪರೀಕ್ಷೆ ನಡೆದಿದೆ. ಸರ್ಕಾರ ಪರೀಕ್ಷೆಗೆ ಮುನ್ನ ಟೆಲಿಗ್ರಾಂಗೆ ತಾತ್ಕಾಲಿಕ ನಿಷೇಧ ಹೇರಿತು; ಆನಂತರ ವಾಟ್ಸ್‌ಆಪ್‌ ತರಲು ಯೋಜಿಸಿದ್ದ ʻಯೂಸರ್‌ನೇಮ್‌ʼ ಸೌಲಭ್ಯದ ವಿವರ ನೀಡುವಂತೆ ನೋಟಿಸ್‌ ನೀಡಿತು. ಸದ್ಯಕ್ಕೆ ಜಾರಿಗೊಳಿಸುವುದಿಲ್ಲ ಎಂದು ಬೀಸುವ ದೊಣ್ಣೆಯಿಂದ ವಾಟ್ಸ್‌ಆಪ್‌ ತಪ್ಪಿಸಿಕೊಂಡಿದೆ. ಇಂಥದ್ದೇ ನೋಟಿಸ್‌ ಮೆಟಾ, ಅರಟ್ಟೈ ಹಾಗೂ ಸಿಗ್ನಲ್‌ಗೂ ರವಾನೆಯಾಗಿದೆ. ದೆಹಲಿ ಹೈಕೋರ್ಟ್‌ ಕಾಕ್ರೋಚ್‌ ಜನತಾ ಪಕ್ಷದ ಎಕ್ಸ್‌ ಖಾತೆಗೆ ಹೇರಿದ್ದ ನಿರ್ಬಂಧ ತೆರವುಗೊಳಿಸಿದೆ. ಗೋದಿ ಮಾಧ್ಯಮಗಳ ಯುಗದಲ್ಲಿ ಜನಸಾಮಾನ್ಯರು ಸಂವಹನಕ್ಕೆ ಬಳಸುತ್ತಿರುವ ಸಾಮಾಜಿಕ ಮಾಧ್ಯಮಗಳ […]

ತಿನ್ನುವ ಆಹಾರ, ಎದೆ ಹಾಲಿನಲ್ಲಿ ನಂಜು

ಕೇರಳ ಈ ಕೀಟನಾಶಕವನ್ನು 2011ರಲ್ಲಿ ನಿಷೇಧಿಸಿತ್ತು. ಆದರೆ, ಕೇರಳ ಹೈಕೋರ್ಟ್‌ ಫೆಬ್ರವರಿ 2022ರಲ್ಲಿ ನಿಷೇಧವನ್ನು ತೆಗೆದುಹಾಕಿತು. ಆನಂತರ ಒಡಿಷಾ ಅಕ್ಟೋಬರ್‌ 2023ರಲ್ಲಿ, ಬಳಿಕ ತೆಲಂ ಗಾಣ ಏಪ್ರಿಲ್‌ 1, 2026ರಲ್ಲಿ ಹಾಗೂ ಆಂಧ್ರಪ್ರದೇಶ ಜೂನ್‌ 2026ರಲ್ಲಿ ನಿಷೇಧಿಸಿದವು. ಅದೇ ಜಗತ್ತಿನಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಮತ್ತು ತೀವ್ರ ವಿಷಕರ ಕಳೆನಾಶಕ ಪ್ಯಾರಕ್ವಾಟ್‌ ಡೈ ಕ್ಲೋರೈಡ್‌(ರಸಾಯನಿಕ ಹೆಸರು-1,1 ಡೈಮೀಥೈಲ್‌ 4,4 ಬೈಪಿರಿಡಿನಿಯಂ ಡೈಕ್ಲೋರೈಡ್‌ ಅಥವಾ ಮೀಥೈಲ್‌ ವಯಲೋಜೆನ್). 2013ರಲ್ಲಿ ಕೃಷಿ ಸಚಿವಾಲಯ ನೇಮಿಸಿದ ಅನುಪಮ್ ವರ್ಮಾ ನೇತೃತ್ವದ ಪರಿಣತ ಪರಿಶೀಲನಾ […]

ದೇಶಿ ಕೃಷಿ ಮೇಲೆ ಎಲ್‌ ನಿನೋ ʻಗಾಡ್ಜಿಲ್ಲಾ’ ಆಘಾತ

ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಮುಂಗಾರು ಹಿನ್ನಡೆ ಅನುಭವಿಸಿದೆ. 2026ರಲ್ಲಿ ಮುಂಗಾರು ವಾಡಿಕೆಗಿಂತ ದುರ್ಬಲ ಆಗಲಿದೆ ಎಂದು ಈ ಹಿಂದೆಯೇ ಸೂಚನೆ ಇತ್ತು. ರಾಷ್ಟ್ರ ಮಟ್ಟದಲ್ಲಿ ಶೇ.43 ಹಾಗೂ ರಾಜ್ಯದಲ್ಲಿ ಸರಾಸರಿ ಶೇ.37 ರಷ್ಟು ಮಳೆ ಕೊರತೆ ಆಗಿದೆ; ದಕ್ಷಿಣ ಒಳನಾಡಿನ 3, ಉತ್ತರ ಒಳನಾಡಿನ 5, ಮಲೆನಾಡಿನ 4 ಮತ್ತು ಕರಾವಳಿಯ 3 ಸೇರಿದಂತೆ 15 ಜಿಲ್ಲೆಗಳಲ್ಲಿ ಕೊರತೆ ತೀವ್ರವಾಗಿದೆ; ಬೀದರ್‌ ಗರಿಷ್ಠ(ಶೇ.67) ಮತ್ತು ಮೈಸೂರು ಕನಿಷ್ಠ(ಶೇ.42). ತುಂಗಭದ್ರಾ ಸೇರಿದಂತೆ ಜಲಾಶಯಗಳಲ್ಲಿ ನೀರು ಖಾಲಿಯಾಗುತ್ತಿದೆ. ಇದರಿಂದ ಮಲೆನಾಡು […]

ರಸಗೊಬ್ಬರ, ಬಿತ್ತನೆ ಬೀಜ ಕೊರತೆ : ಕೃಷಿ ಸಂಕಷ್ಟದ ಸಣ್ಣ ತುಣುಕು

ರಾಜ್ಯದೆಲ್ಲೆಡೆ ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದೊಂದು ವಾರ್ಷಿಕ ಕಾರ್ಯಕ್ರಮದಂತೆ ಆಗಿಬಿಟ್ಟಿದೆ. ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಮೇ 30, 2008ರಂದು ಅಧಿಕಾರ ಸ್ವೀಕರಿಸಿತ್ತು. ಹಾವೇರಿಯ ಎಪಿಎಂಸಿ ಅಂಗಳದಲ್ಲಿ ಮುಂಗಾರು ಪೂರ್ವ ಬಿತ್ತನೆಗೆ ಸಬ್ಸಿಡಿ ರಸಗೊಬ್ಬರಗಳ ಕೊರತೆಯನ್ನು ಪ್ರತಿಭಟಿಸಿದ ರೈತರ ಮೇಲೆ ಪೊಲೀಸರು ಜೂನ್‌ 10 ರಂದು ಗುಂಡು ಹಾರಿಸಿದರು. ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನಟ್ಟಿ ಬಲಿಯಾಗಿ, 13 ಮಂದಿ ಗಾಯಗೊಂಡರು. ಸರ್ಕಾರ ವಿಚಾರಣೆಗೆ ನೇಮಿಸಿದ ಸುಪ್ರೀಂ ಕೋರ್ಟ್‌ ನಿವೃತ್ತ […]

ಕರಿಯರದೊ ಬಿಳಿಯರದೊ ಯಾರದಾದರೆ ಏನು……

ಬಿಡದಿಯಲ್ಲಿ ಸರ್ಕಾರ ಸ್ಥಾಪಿಸಲು ಪ್ರಸ್ತಾಪಿಸಿರುವ ಗ್ರೇಟರ್‌ ಬೆಂಗಳೂರು ಇಂಟಿಗ್ರೇಟೆಡ್‌ ಟೌನ್‌ಶಿಪ್(ಜಿಬಿಐಟಿ) ರೈತರಲ್ಲಿ ಆತಂಕ ಮೂಡಿಸಿದೆ. ದೇಶದ ಮೊದಲ ಎಐ ಚಾಲಿತ ಉಪನಗರ ಇದಾ ಗಿದ್ದು, ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡುತ್ತದೆ; ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಸುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ರೈತರು ಪ್ರಾಥಮಿಕ ಅಧಿಸೂಚನೆ ಹೊರಡಿ ಸಿದ ಬಳಿಕ ಮಾರ್ಚ್‌ 2025ರಿಂದ ಪ್ರತಿಭಟನೆ ಆರಂಭಿಸಿದ್ದಾರೆ. ʻನನ್ನ ಭೂಮಿ, ನನ್ನ ಹಕ್ಕುʼ ಎಂದು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಶೇ.80 ರಷ್ಟು ರೈತರು ಜಮೀನು ನೀಡಲು […]

Back To Top