ಓಜೋನ್ ಮಾಲಿನ್ಯ: ಜನಾರೋಗ್ಯಕ್ಕೆ ಹಾನಿ, ಕೃಷಿಗೆ ಧಕ್ಕೆ
ಮಳೆಗಾಲದ ಅಂತ್ಯಕ್ಕೆ ಮುನ್ನವೇ ಬೆಂಗಳೂರು ಕಾದ ಹಂಚಿನಂತೆ ಸುಡುತ್ತಿದ್ದು, ತಾಪಮಾನ 34 ಡಿಗ್ರಿ ದಾಟಿದೆ. ಋತುಮಾನಗಳ ನಡುವೆ ವ್ಯತ್ಯಾಸವೇ ಇಲ್ಲದಂತೆ ಆಗಿದ್ದು, ಚಳಿಗಾಲಕ್ಕೆ ಮೊದಲೇ ಬೇಸಿಗೆ ಆರಂಭವಾದಂತೆ ಭಾಸವಾಗುತ್ತಿದೆ. ಉತ್ತರ ಭಾರತದ ರಾಜ್ಯಗಳನ್ನು ಚಳಿಗಾಲದಲ್ಲಿ ಮುಚ್ಚುವ ಕಾವಳ, ಹೊಂಜು(ಹೊಗೆ+ಮಂಜು) ಶಾಲೆಗಳನ್ನು ಬಂದ್ ಮಾಡಿಸುತ್ತದೆ; ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳ್ಳುತ್ತದೆ; ವಾಹನಗಳಿಗೆ ಸಮ-ಬೆಸ ದಿನಗಳ ಮೀಸಲು ಆರಂಭವಾಗುತ್ತದೆ. ಕೂಳೆ ದಹನ, ಪಳೆಯುಳಿಕೆ ಇಂಧನಗಳಿಂದ ಹೊರಬರುವ ಕೊಳೆ ಗಾಳಿ ಹಾಗೂ ಸೂಕ್ಷ್ಮಕಣಗಳಿಂದ ಪರಿಸ್ಥಿತಿ ಹದಗೆಡುತ್ತದೆ. ಇದು ಪ್ರತಿವರ್ಷದ ಕತೆ; ಮರುಕಳಿಸುತ್ತಲೇ […]
ಉದ್ಯಾನ ಕಾಯಿದೆ: ನಗರದ ನಾಶಕ್ಕೆ ಮುನ್ನುಡಿ
ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆ ನಡುವೆಯೇ ಸರ್ಕಾರ ರಾಜ್ಯದ ಉದ್ಯಾನಗಳ ನಾಶಕ್ಕೆ ಮುನ್ನುಡಿ ಬರೆಯುವ ಕರ್ನಾಟಕ ಸರ್ಕಾರಿ ಉದ್ಯಾನ ಗಳ(ಸಂರಕ್ಷಣೆ) ಕಾಯಿದೆ 1975ರ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಜೊತೆಗೆ, ಬೆಂಗಳೂರು ಮೆಟ್ರೋಪಾಲಿಟನ್ ಲ್ಯಾಂಡ್ ಟ್ರಾನ್ಸ್‌ಪೋರ್ಟ್ ಅಥಾರಿಟಿ (ತಿದ್ದುಪಡಿ) ಕಾಯಿದೆ 2026ರ ಮೂಲಕ ಅಧಿಕ ವೆಚ್ಚದ ಮೂಲಸೌಲಭ್ಯ ಯೋಜನೆಗಳಿಗೆ ವಿನಾಯಿತಿ ನೀಡಲು ಮುಂದಾಗಿದೆ; ಮೂರು ಸುರಂಗ ಯೋಜನೆ, 9 ಫ್ಲೈಓವರ್ ಹಾಗೂ 2 ಎತ್ತರದ ಕಾರಿಡಾರ್ ಯೋಜನೆಗಳಿಗೆ ಈ ಕಾಯಿದೆಯಿಂದ ವಿನಾಯಿತಿ ದೊರೆಯಲಿದೆ. […]
ಕೆನ್-ಬೆಟ್ವಾ ಯೋಜನೆ ಮತ್ತು ಹನೂರಿನ ಹತ್ಯೆಗಳು
ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯ ಸಂತ್ರಸ್ಥರಿಗೆ ಸಮರ್ಪಕ ಪರಿಹಾರ ನೀಡುವುದಾಗಿ ಸರ್ಕಾರ ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆಕಾರರು ನಿರಶನ ಅಂತ್ಯಗೊಳಿಸಿದ್ದಾರೆ. ಅತ್ಯಂತ ಪ್ರಗತಿಪರ ಕಾನೂನು ಎಂಬ ಶ್ಲಾಘನೆಗೊಳಗಾದ ಪರಿಶಿಷ್ಟ ವರ್ಗಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯಿದೆ 2006 ಅಥವಾ ಎಫ್‌ಆರ್‌ಎಯನ್ನು ನ್ಯಾಯಾಲಯಗಳು ಸಮರ್ಪಕವಾಗಿ ವ್ಯಾಖ್ಯಾನಿಸದೆ ಇರುವುದರಿಂದ ಅರಣ್ಯವಾಸಿಗಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅರಣ್ಯವಾಸಿಗಳು ಮತ್ತು ಕಾ ಡಂಚಿನಲ್ಲಿ ವಾಸಿಸುವ ಜನರ ಕುರಿತ ನಿರ್ಲಕ್ಷ್ಯದ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮೂವರು ಬಲಿಯಾಗಿದ್ದಾರೆ. ಏನಿದು ನದಿ […]
ದೇಶಿ ಕೃಷಿ ಮೇಲೆ ಎಲ್ ನಿನೋ ʻಗಾಡ್ಜಿಲ್ಲಾ’ ಆಘಾತ
ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಮುಂಗಾರು ಹಿನ್ನಡೆ ಅನುಭವಿಸಿದೆ. 2026ರಲ್ಲಿ ಮುಂಗಾರು ವಾಡಿಕೆಗಿಂತ ದುರ್ಬಲ ಆಗಲಿದೆ ಎಂದು ಈ ಹಿಂದೆಯೇ ಸೂಚನೆ ಇತ್ತು. ರಾಷ್ಟ್ರ ಮಟ್ಟದಲ್ಲಿ ಶೇ.43 ಹಾಗೂ ರಾಜ್ಯದಲ್ಲಿ ಸರಾಸರಿ ಶೇ.37 ರಷ್ಟು ಮಳೆ ಕೊರತೆ ಆಗಿದೆ; ದಕ್ಷಿಣ ಒಳನಾಡಿನ 3, ಉತ್ತರ ಒಳನಾಡಿನ 5, ಮಲೆನಾಡಿನ 4 ಮತ್ತು ಕರಾವಳಿಯ 3 ಸೇರಿದಂತೆ 15 ಜಿಲ್ಲೆಗಳಲ್ಲಿ ಕೊರತೆ ತೀವ್ರವಾಗಿದೆ; ಬೀದರ್ ಗರಿಷ್ಠ(ಶೇ.67) ಮತ್ತು ಮೈಸೂರು ಕನಿಷ್ಠ(ಶೇ.42). ತುಂಗಭದ್ರಾ ಸೇರಿದಂತೆ ಜಲಾಶಯಗಳಲ್ಲಿ ನೀರು ಖಾಲಿಯಾಗುತ್ತಿದೆ. ಇದರಿಂದ ಮಲೆನಾಡು […]
ಶತಕ ಬಾರಿಸಿದ ಸರ್ ಡೇವಿಡ್ ಅಟೆನ್‌ಬರೋ
ʻಹಲ್ಲು ಬಹಳ ದೊಡ್ಡ ಇದೆʼ ಎಂಬ ಕಾರಣಕ್ಕೆ ಕ್ಯಾಮೆರಾ ಎದುರು ಅವಕಾಶ ಸಿಗದ ಯುವಕನೊಬ್ಬ 70 ವರ್ಷ ಕಾಲ ವನ್ಯಜೀವಿಗಳ ಕುರಿತು ನಿರಂತರವಾಗಿ ಕಾರ್ಯಕ್ರಮ ನೀಡುತ್ತ ಅರಿವು ಮೂಡಿ ಸಿದ್ದು ಒಂದು ಸೋಜಿಗ. ಅವರೇ ಸರ್ ಡೇವಿಡ್ ಅಟೆನ್‌ಬರೋ. ಸಾರ್ಥಕ ನೂರು ವರ್ಷ ಪೂರೈಸಿರುವ ಅವರು ಕಳೆದ 70 ವರ್ಷದಿಂದ ಬ್ರಿಟನ್ ಮಾತ್ರವಲ್ಲದೆ ಜಗತ್ತಿನ ಎಲ್ಲೆಡೆಯ ಜನರನ್ನು ವನ್ಯಜೀವಿ ಪ್ರಪಂಚಕ್ಕೆ ಪರಿಚಯಿಸಿದ ಶ್ರೇಷ್ಠ ಪ್ರಸಾರಕರಲ್ಲಿ ಒಬ್ಬರು. ತಂದೆ ಫ್ರೆಡೆರಿಕ್ ಅಟೆನ್‌ಬರೋ, ಲೀಸೆಸ್ಟರ್ ಯೂನಿವರ್ಸಿಟಿ ಕಾಲೇಜಿನ ಪ್ರಾಚಾರ್ಯ. ತಾಯಿ […]
ಪೀಡೆನಾಶಕಗಳ ಅತಿಬಳಕೆ: ಆಹಾರ, ನೀರು ವಿಷಮಯ
ಕುಡಿಯುವ ನೀರು, ತಿನ್ನುವ ಆಹಾರ ಹಾಗೂ ಉಸಿರಾಡುವ ಗಾಳಿ ಮಲಿನಗೊಂಡು ವಿಷಮಯವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ದಿಲ್ಲಿ ಸೇರಿದಂತೆ ದೇಶದ ಬಹುತೇಕ ನಗರಗಳು ವಾಯುಮಾಲಿನ್ಯದಿಂದ ಬಳ ಲುತ್ತಿವೆ; ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಕುಡಿಯುವ ನೀರು ಚರಂಡಿ ನೀರಿನೊಂದಿಗೆ ಮಿಶ್ರಗೊಂಡು, 23 ಮಂದಿ ಮರಣ ಹೊಂದಿದ ಪ್ರಕರಣ ತೇಲುತ್ತಿರುವ ನೀರ್ಗಲ್ಲಿನ ಕಾಣುತ್ತಿರುವ ತುದಿಯಷ್ಟೇ. ಇದರೊಟ್ಟಿಗೆ ಕೃಷಿಯಲ್ಲಿ ಪೀಡೆನಾಶಕಗಳ ಅತಿ ಬಳಕೆ, ದುರ್ಬಳಕೆ ಹಾಗೂ ವಿನಾಕಾರಣ ಬಳಕೆಯಿಂದ ತಿನ್ನುವ ಆಹಾರ ಮತ್ತು ಅಂತರ್ಜಲ ವಿಷವಾಗಿ ಪರಿಣಮಿಸಿದೆ. ʻನಮ್ಮದು ಕೃಷಿ ಪ್ರಧಾನ ದೇಶʼ […]
ಹೋಗಿ ಬನ್ನಿ ಗಾಡ್ಗೀಳ್ ಸರ್…ನಮಸ್ಕಾರ
ಪಶ್ಚಿಮ ಘಟ್ಟದಲ್ಲಿ ಬೇಡ್ತಿ-ವರದಾ ಮತ್ತು ಅಘನಾಷಿನಿ-ವೇದಾವತಿ ನದಿ ಜೋಡಣೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಆಗುಂಬೆ ಸುರಂಗ, ಹೊನ್ನಾವರ ರೈಲು ಮಾರ್ಗ, ಕ್ಯಾಸಲ್‌ರಾಕ್-ಕುಲೆಂ ಜೋಡಿ ಹಳಿ ಮಾರ್ಗ, ಕೊಡಚಾದ್ರಿಗೆ ರೋಪ್‌ವೇ ಸೇರಿದಂತೆ ಹಲವು ಯೋಜನೆಗಳನ್ನು ಉದ್ದೇಶಿಸಲಾಗಿದೆ. ಇದೇ ಹೊತ್ತಿನಲ್ಲಿ ನದಿಗಳಿಗೂ ಜೀವಿಸುವ ಹಕ್ಕು ನೀಡಬೇಕೆಂದು ಆಗ್ರಹಿಸಿ, ಜನವರಿ 11ರಂದು ಶಿರಸಿಯಲ್ಲಿ ಜನ ಸಮಾವೇಶ ನಡೆದಿದೆ. ಪ್ರತಿಯಾಗಿ ಹಾವೇರಿಯಲ್ಲಿ ನದಿ ಜೋಡಣೆ ಪರವಾಗಿ ಸಮಾವೇಶ ನಡೆದಿದೆ. ಇದೆಲ್ಲದರ ನಡುವೆ ಪಶ್ಚಿಮ ಘಟ್ಟಕ್ಕಾಗಿ ತಮ್ಮ ಜೀವವನ್ನೇ ಸವೆಸಿದ್ದ ಮಾಧವ ಗಾಡ್ಗೀಳ್(ಮೇ […]
ಅರಾವಳಿ ಪರ್ವತಶ್ರೇಣಿ ಮೇಲೆ ಉದ್ಯಮದ ಕಾಕದೃಷ್ಟಿ
ಸುಪ್ರೀಂ ಕೋರ್ಟ್ ಡಿಸೆಂಬರ್ 29, 2025ರಂದು ಅರಾವಳಿಯ ಹೊಸ ವ್ಯಾಖ್ಯೆಗೆ ತಡೆ ನೀಡಿದೆ ಮತ್ತು ಈ ಸಂಬಂಧ ಅಧ್ಯಯನ ನಡೆಸಲು ಉನ್ನತಾಧಿಕಾರ ಸಮಿತಿ ರಚಿಸಬೇಕೆಂದು ಹೇಳಿದೆ. ಇದರಿಂದ ಬೀಸುವ ದೊಣ್ಣೆಯಿಂದ ಸದ್ಯಕ್ಕೆ ತಪ್ಪಿಸಿಕೊಂಡಂತಾಗಿದೆ. ಆದರೆ, ಪ್ರಶ್ನೆ ಇರುವುದು- ಪರಿಸರ ಮಂತ್ರಾಲಯದ ಅಧಿಕಾರಿಗಳು ನೀಡಿದ ವ್ಯಾಖ್ಯೆಯನ್ನು ನ್ಯಾಯಾಲಯ ಈಮೊದಲು ಒಪ್ಪಿದ್ದಾದರೂ ಏಕೆ? ನ್ಯಾಯಾಲಯಕ್ಕೆ ವಾಸ್ತವ ಸಂಗತಿ ತಿಳಿಸದೆ ಮುಚ್ಚಿಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ತನ್ನದೇ ಸಚಿವಾಲಯದ ಅಡಿ ಬರುವ ಭಾರತೀಯ ಅರಣ್ಯ ಸಮೀಕ್ಷೆ(ಎಫ್‌ಎಸ್‌ಐ)ಯ ಶಿಫಾರಸುಗಳನ್ನು ಕೂಡ ಪರಿಸರ ಸಚಿವಾಲಯ […]
ಸಂರಕ್ಷಣೆಯ ದಣಿವರಿಯದ ಧ್ವನಿ ಮೌನವಾಯಿತು
ಹವಾಮಾನ ಬದಲಾವಣೆ, ಯುದ್ಧ, ಸಂಪನ್ಮೂಲಗಳ ಬರಿದಾಗುವಿಕೆ ಸೇರಿದಂತೆ ಹೆಚ್ಚುತ್ತಿರುವ ಜಾಗತಿಕ ಬಿಕ್ಕಟ್ಟುಗಳ ನಡುವೆ ಸಂರಕ್ಷಣೆಗಾಗಿ ದಣಿವರಿಯದೆ ದುಡಿಯುತ್ತಿದ್ದ ಜೇನ್ ಗೂಡಾಲ್(91) ಇತ್ತೀಚೆಗೆ ಮೃತಪಟ್ಟರು. ಅವರ ದೀರ್ಘಕಾಲೀನ ಸಂರಕ್ಷಣೆ ಕಾರ್ಯಗಳು ಪ್ರಾಮುಖಿ(ಪ್ರೈಮೇಟ್) ಸ್ತನಿಗಳ ಅಧ್ಯಯನ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾದವು. ಚಿಂಪಾಂಜಿಗಳ ಜೀವನವಿವರಗಳನ್ನು ದಾಖಲಿಸಿ, ಬಹಿರಂಗಪಡಿಸಿದ ಅವರು ಆಧುನಿಕ ಜಗತ್ತಿಗೆ ಭರವಸೆಯ ಭಾಷೆಯೊಂದನ್ನು ನೀಡಿದರು. ಪ್ರಸಿದ್ಧ ಮಾನವಶಾಸ್ತ್ರಜ್ಞ ಲೂಯಿಸ್ ಸೇಮೋರ್ ಬಝೆಟ್ ಲೀಕಿ ಅವರ ಬಳಿ ಕೆಲಸ ಮಾಡಲು ನಿರ್ಧರಿಸಿ, ಜುಲೈ 1960ರಲ್ಲಿ ತಾಂಜಾನಿಯಾದ ತಾಂಗನಿಕಾ ಸರೋವರದ ತೀರದಲ್ಲಿರುವ ಗೊಂಬೆ […]

