Category: ಆರೋಗ್ಯ-ಯೋಗಕ್ಷೇಮ-ವೈದ್ಯಕೀಯ

ಕೋವಿಡ್ ಲಸಿಕೆ ಕೊರತೆಗೆ ರಾಜ್ಯಗಳು ಹೊಣೆ: ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರದ ಕೋವಿಡ್ ಸಲಹೆಗಾರ ವಿ.ಕೆ.ಪಾಲ್, ಲಸಿಕೆ ಕೊರತೆಗೆ ರಾಜ್ಯ ಸರ್ಕಾರಗಳೇ ಹೊಣೆ ಎನ್ನುವ ಮೂಲಕ ಕೈ ತೊಳೆದುಕೊಂಡಿದ್ದಾರೆ. ರಾಜ್ಯ ಹಾಗೂ ದೇಶದೆಲ್ಲೆಡೆ ಲಸಿಕೆ ಕೊರತೆ ತೀವ್ರವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಕೆ ಕೊರತೆ ಇದ್ದು, ಖಾಸಗಿ ಆಸ್ಪತ್ರೆಗಳು ಡೋಸ್ ಒಂದಕ್ಕೆ 800 ರಿಂದ 1400 ರೂ.ವರೆಗೆ ತೆಗೆದುಕೊಳ್ಳುತ್ತಿವೆ. ಜತೆಗೆ, ಸೇವಾ ಶುಲ್ಕವನ್ನು 100 ರೂ.ನಿಂದ 300 ರೂ.ಗೆ ಹೆಚ್ಚಿಸಿಕೊಂಡಿವೆ. ರಾಜ್ಯ ಸರ್ಕಾರಗಳು ನೇರವಾಗಿ ಅಂತಾರಾಷ್ಟ್ರೀಯ ಟೆಂಡರ್ ಕರೆದು, ಲಸಿಕೆ ಪಡೆದುಕೊಳ್ಳಲು ಲಸಿಕೆಗೆ ಸಂಬಂಧಿಸಿದಂತೆ ಸುಪ್ರೀಂ/ಹೈ ಕೋರ್ಟ್ ಸರ್ಕಾರಗಳಿಗೆ […]

ಕೋವಿಡ್ ಲಸಿಕೆ ಪಡೆಯಲು ಸಕಾರಾತ್ಮಕ ಸ್ಪಂದನೆ; ಮಾರ್ಚ್ ಅಂತ್ಯದವರೆಗೂ ನೊಂದಣಿಯಾದ ಸ್ಲಾಟ್ ಗಳು

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 60 ವರ್ಷ ಮೇಲಿನವರು, ಬೇರೆ ಕಾಯಿಲೆ ಹೊಂದಿರುವ 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರೆದಿದೆ. ಕೋವಿಡ್ ಲಸಿಕೆ ಪಡೆಯಲು ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಹೌದು.. ಕೋವಿನ್ ಪೋರ್ಟಲ್‌ನಲ್ಲಿ ಲಕ್ಷಾಂತರ ಮಂದಿ ಕೋವಿಡ್ ಲಸಿಕೆಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಪರಿಣಾಮ ಮಾರ್ಚ್ ಅಂತ್ಯದ ವರೆಗೂ ಸ್ಲಾಟ್ ಗಳು ಬುಕ್ ಆಗಿವೆ. ಏಪ್ರಿಲ್ ನಲ್ಲಷ್ಟೇ ಸ್ಲಾಟ್ ಗಳು ಖಾಲಿ ಇವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕೋವಿನ್ ಪೋರ್ಟಲ್ ನಲ್ಲಿ ಹೆಸರು ನೊಂದಾಯಿಸಿಕೊಂಡು ಹತ್ತಿರದ […]

ಏರುಗತಿಯಲ್ಲಿದ್ದ ಕೋವಿಡ್‌ ಪ್ರಕರಣಗಳಲ್ಲಿ ಅಲ್ಪ ಇಳಿಕೆ

ದೆಹಲಿ: ಕಳೆದ ಕೆಲ ದಿನಗಳಿಂದ ದೇಶದಲ್ಲಿ ಸತತ ಏರಿಕೆ ಕಾಣುತ್ತಿದ್ದ ಕೋವಿಡ್‌ ಪ್ರಕರಣಗಳು ಇಂದು ಅಲ್ಪ ಪ್ರಮಾಣದಲ್ಲಿ ಕುಸಿದಿವೆ. ಶುಕ್ರವಾರ 16,577 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಶನಿವಾರ ಬೆಳಗ್ಗೆ 16,488 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಏರುಗತಿಯಲ್ಲಿದ್ದ ಕೋವಿಡ್‌ ಕೊಂಚ ಇಳಿದಂತಾಗಿದೆ. ಇನ್ನು, ‘ಈ 24 ಗಂಟೆಗಳ ಅವಧಿಯಲ್ಲಿ 113 ಮಂದಿ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ. 12,771 ಮಂದಿ ಗುಣಮುಖರಾಗಿದ್ದಾರೆ,’ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ. ದೇಶದಲ್ಲಿ ಒಟ್ಟಾರೆ 1,10,79,979 ಕೋವಿಡ್‌ ಪ್ರಕರಣಗಳು ದೃಢವಾಗಿವೆ. 1,07,63,451 ಮಂದಿ […]

ಕೋವಿಡ್ ಗಂಡಸರಿಗೆ ಹೆಚ್ಚು ಮಾರಕವೇಕೆ?

ಕೊಳ್ಳೇಗಾಲ ಶರ್ಮ ಬಹುಶಃ ಬೇರೆಲ್ಲಾ ವಿಷಯದಲ್ಲಿಯೂ ಮಹಿಳೆಯರನ್ನು ಅಬಲರೆನ್ನಬಹುದು. ಅದರೆ ಕೋವಿಡ್‌ ವಿಷಯದಲ್ಲಿ ಬಂದಾಗ ಮಹಿಳೆಯರೇ ಸಬಲರು. ಆ ಸೋಂಕಿನಿಂದ ಗೆದ್ದು ಬರುವವರಲ್ಲಿ ಅವರೇ ಹೆಚ್ಚಂತೆ. ಇದು ಅವರಿಗೆ ನಿಸರ್ಗ ಇತ್ತ ವರವಿಬಹುದು. ಏಕೆಂದರೆ ಗಂಡಸರು ಹಾಗೂ ಹೆಂಗಸರ ರೋಗಪ್ರತಿರೋಧಕತೆಯಲ್ಲಿ ನಿರ್ಣಾಯಕವಾದ ವ್ಯತ್ಯಾಸಗಳಿವೆ ಎಂಬ ಸುದ್ದಿಯನ್ನು ಮೊನ್ನೆ ಸೈನ್ಸ್‌ ಪತ್ರಿಕೆ ವರದಿ ಮಾಡಿದೆ. ರೋಗಪ್ರತಿರೋಧಕತೆಯಲ್ಲಿ ಹೀಗೊಂದು ಲಿಂಗಭೇದ ಸ್ಪಷ್ಟವಾಗಿದೆ ಎಂದು ಅಮೆರಿಕೆಯ ಯೇಲ್‌ ವಿಶ್ವವಿದ್ಯಾನಿಲಯದ ವೈದ್ಯ ವಿಜ್ಞಾನಿಗಳಾದ ಅಕಿಕೋ ಇವಸಾಕಿ ಮತ್ತು ತಕೆಹಿರೊ ತಕಹಾಶಿ ವರದಿ ಮಾಡಿದ್ದಾರೆ. […]

ಕೋವಿಡ್‌ನಿಂದ ಜೈವಿಕ-ವೈದ್ಯ ತ್ಯಾಜ್ಯದ ಬೆಟ್ಟ

ಕೋವಿಡ್ ಸೋಂಕು ಬಳಿಕ 7 ತಿಂಗಳಲ್ಲಿ 33,000 ಟನ್ ಜೈವಿಕ-ವೈದ್ಯ ತ್ಯಾಜ್ಯ ಉತ್ಪತ್ತಿಯಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ತಿಳಿಸಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಮಾಣದ 3,587ಟನ್‌ತ್ಯಾಜ್ಯ ಉತ್ಪತ್ತಿಯಾಗಿದೆ. ಅಕ್ಟೋಬರ್‌ನಲ್ಲಿ ಗರಿಷ್ಠ ಪ್ರಮಾಣ, 5,500ಟನ್‌ದತ್ಯಾಜ್ಯಉತ್ಪತ್ತಿಯಾಗಿದೆ. Courtesyg: Google (photo)

ವುಹಾನ್: ವೈರಸ್ ಮೂಲ ಇನ್ನೂ ನಿಗೂಢ

ಚೀನಾದ ವುಹಾನ್‌ನಲ್ಲಿ ಕೋವಿಡ್‌ಗೆ ಮೊದಲ ಬಲಿ ಸಂಭವಿಸಿ ಒಂದು ವರ್ಷವಾಗಿದ್ದು, ವೈರಸ್‌ನ ಮೂಲ ಕುರಿತ ನಿಖರ ಉತ್ತರ ಸಿಕ್ಕಿಲ್ಲ. ವುಹಾನಿನ ಮಾಂಸದ ಮಾರ್ಕೆಟ್‌ಗೆ ಹೋಗುತ್ತಿದ್ದ 61ರ ಹರೆಯದ ವ್ಯಕ್ತಿ ಕಳೆದ ಜ.೧೧ರಂದು ಮೃತಪಟ್ಟಿದ್ದರು. ಆನಂತರ ವೈರಸ್ ಜಗತ್ತನ್ನೇ ವ್ಯಾಪಿಸಿದೆ. ರೂಪಾಂತರಗೊAಡು ಪ್ರಪಂಚವನ್ನು ನಡುಗಿಸಿದೆ. ಕೊರೊನಾ ವೈರಸ್ ಕಾಣಿಸಿಕೊಂಡ ಬಗೆ, ಪ್ರಸರಣ, ತಡೆಗಟ್ಟುವ ವಿಧಾನ ಕುರಿತು ಚೀನಾ ಗೋಪ್ಯತೆ ಕಾಪಾಡಿಕೊಂಡಿದೆ. ಯಾವುದೇ ಮಾಹಿತಿ ನೀಡುತ್ತಿಲ್ಲ. ವೈರಸ್ ಮೂಲದ ಪ್ರಶ್ನೆ ವಿಜ್ಞಾನ ಜಗತ್ತಿಗೆ ಕಬ್ಬಿಣ ಕಡಲೆಯಾಗೇ ಉಳಿದಿದೆ. Courtesyg: Google […]

ಲಸಿಕೆ ಪಡೆಯಲು ತಯಾರಾಗಲು ಸೂಚನೆ

ಕೋವಿಡ್ ಲಸಿಕೆ ಪೂರೈಕೆ ಶೀಘ್ರವೇ ಆರಂಭವಾಗಲಿದ್ದು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಿದ್ಧವಾಗಿರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಕಳುಹಿಸಲಾಗುವುದು. ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಚತ್ತೀಸಗಢ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಹಾಗೂ ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಚಂಡೀಗಡ, ನಗರ್ ಹವೇಲಿ, ದಮನ್ ಮತ್ತು ಡಿಯು, […]

ರಾಜ್ಯಕ್ಕೆ 24 ಲಕ್ಷ ಲಸಿಕೆ ಸಿರಿಂಜ್

ರಾಜ್ಯಕ್ಕೆ ಬಂದ 20 ಲಕ್ಷ ಕೋವಿಡ್ ಲಸಿಕೆ ಸಿರಿಂಜ್‌ಗಳನ್ನು ಎಲ್ಲ ಜಿಲ್ಲೆಗಳಿಗೆ ಕಳಿಸಲಾಗಿದ್ದು, 31 ಲಕ್ಷ ಸಿರಿಂಜು ಸೇರಿದಂತೆ ಹೆಚ್ಚುವರಿ ಉಪಕರಣಗಳು ರಾಜ್ಯಕ್ಕೆ ಬರಲಿವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. 64 ಬೃಹತ್ ಐಸ್‌ಲೈನ್ಡ್ ರೆಫ್ರಿಜರೇಟರ್‌ಗಳು ಬಂದಿದ್ದು, ಲಸಿಕೆ ವಿತರಣೆ ಶೀಘ್ರದಲ್ಲೇ  ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಲಸಿಕೆ ನೀಡಲು ಸರ್ಕಾರಿ ಕ್ಷೇತ್ರದ 2,73,211 ಹಾಗೂ ಖಾಸಗಿ ಕ್ಷೇತ್ರದ 3,57,313 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಲಸಿಕೆ ನೀಡಲು 9,807 ಸಿಬ್ಬಂದಿ ಹಾಗೂ 28,427 ಕೇಂದ್ರಗಳನ್ನು ಗುರುತಿಸಲಾಗಿದೆ […]

ಕೋವಿಶೀಲ್ಡ್ 1 ಡೋಸ್‌ನ ಬೆಲೆ 219 ರೂ

ಆಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಕೋವಿಡ್–೧೯ ತಡೆಗೆ ಅಭಿವೃದ್ಧಿಪಡಿಸಿರುವ ಲಸಿಕೆ ಕೋವಿಶೀಲ್ಡ್‌ನ ಪ್ರತಿ ಡೋಸ್‌ಗೆ 3ರಿಂದ 4 ಡಾಲರ್ (219–292ರೂ) ದರ ನಿಗದಿ ಮಾಡಲಾಗಿದೆ. ಈ ದರದಲ್ಲಿ ಸರ್ಕಾರಕ್ಕೆ ಲಸಿಕೆ ಪೂರೈಸಲಾಗುವುದು. ಆದರೆ, ಮಾರುಕಟ್ಟೆಗೆ ಲಸಿಕೆ ಪೂರೈಕೆ ಆರಂಭವಾದರೆ, ದರವು ದುಪ್ಪಟ್ಟಾಗಲಿದೆ ಎಂದು ತಯಾರಿಕಾ ಸಂಸ್ಥೆಯು ಸೋಮವಾರ ತಿಳಿಸಿದೆ. ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆಯಾಗಿರುವ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಈ ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಒಪ್ಪಂದ ಮಾಡಿಕೊಂಡಿದೆ. ಲಸಿಕೆಯ 5 ಕೋಟಿ ಡೋಸ್ ಈಗಾಗಲೇ […]

Back To Top