Category: ಶಿಕ್ಷಣ-ವ್ಯಾಸಂಗ

ವೇಮುಲ, ತಡ್ವಿ, ಸಾಹಿಲ್;‌ ಸಾಂಸ್ಥಿಕ ಹತ್ಯೆಗಳ ಮುಂದುವರಿಕೆ

ಐಐಟಿ ಬಾಂಬೆಯ ಎನರ್ಜಿ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದ 2ನೇ ವರ್ಷದ ವಿದ್ಯಾರ್ಥಿ ಸಾಹಿಲ್‌ ವಾಕೋಡೆ ಸೆಪ್ಟೆಂಬರ್‌ 18,2026 ರಂದು ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ತಕ್ಷಣ ಕಣಕ್ಕಿಳಿದ ಕೆಸರು ಎರಚುವ ಪಡೆ, ʻಸಾಹಿಲ್‌ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದರುʼ ಎಂದು ಮಿಥ್ಯಾರೋಪ ಹೊರಿಸಿ, ವಿಡಿಯೋ ಬಿಡುಗಡೆ ಮಾಡಿತು. ಅಂಬೇಡ್ಕರ್‌, ಪೆರಿಯಾರ್‌, ಫುಲೆ ಸ್ಟಡಿ ಸರ್ಕಲ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಐಐಟಿ ತನ್ನ ಹಿಂದಿನ ಹೇಳಿಕೆ ಹಿಂಪಡೆಯಿತು. ಆದರೆ, ಅಷ್ಟರಲ್ಲಿ ʻಪರೀಕ್ಷೆಯಲ್ಲಿ ನಕಲುʼ ನರೇಟಿವ್‌ ವ್ಯಾಪಕವಾಗಿ ಹರಡಿತ್ತು. […]

ವಸ್ತೆಗುನೆ ಹೋಯಾ, ಕೈಸಿ ಸರ್ಕಾರ್‌ ಹೈ ಯೆ ಮತ್ತು ಸಾಂಸ್ಥಿಕ ವೈಫಲ್ಯ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಬಳಸಿದ ʻಜಿರಳೆಗಳುʼ ಎಂಬ ಪದದಿಂದ ಜಂತರ್‌ಮಂತರ್‌ನಲ್ಲಿ ಆರಂಭಗೊಂಡ ಆಂದೋಲನವು ಶಿಕ್ಷಣ ಸಚಿವ ಪ್ರಧಾನ್‌ ಅವರ ರಾಜೀನಾಮೆಯಿಂದ ಒಂದು ಹಂತ ತಲುಪಿದೆ. ಪ್ರತಿಭಟನೆ ವೇಳೆ ಪ್ರಧಾನಿಯನ್ನು ಟೀಕಿಸಿದ ಬಾಲಕಿ ರುಚಿಕಾ ಸಿಂಗ್‌ಳನ್ನು ಬೆದರಿಸಿ ತಪ್ಪೊಪ್ಪಿಗೆ ಪಡೆದಿರುವುದಲ್ಲದೆ, ರಾಜೀನಾಮೆ ಬಳಿಕ ಸದನಕ್ಕೆ ಆಗಮಿಸಿದ ಧರ್ಮೇಂದ್ರ ಪ್ರಧಾನ್‌ ಅವರಿಗೆ ಹಾರ ಹಾಕಿ ಸಂಭ್ರಮಿಸಲಾಗಿದೆ. ಪ್ರತಿಭಟನೆಗೆ ಕಾರಣವಾದ ಶಿಕ್ಷಣದ ವ್ಯಾಪಾರೀಕರಣ, ಬಡತನ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಯಾವುದೇ ಪ್ರಾಯೋಗಿಕ ಕಾರ್ಯನೀತಿ ರೂಪಿಸಿಲ್ಲ; ಸುಳ್ಳು ಹಾಗೂ […]

ಯುಜಿಸಿ ತಿದ್ದುಪಡಿ ಪ್ರಸ್ತಾವ: ಕೇಂದ್ರೀಕರಣದ ಕರಾಳ ಶಾಸನ

ರಾಜ್ಯಪಾಲರು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾನಿಲಯ (ತಿದ್ದುಪಡಿ) ಮಸೂದೆ 2024 ಅನ್ನು ಸರ್ಕಾರಕ್ಕೆ ಹಿಂದಿರುಗಿಸಿ ದ್ದು, ಮಸೂದೆಯನ್ನು ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ. ರಾಜ್ಯಪಾಲರ ಬದಲು ಮುಖ್ಯಮಂತ್ರಿಯನ್ನು ವಿವಿ ಕುಲಪತಿಯಾಗಿ ಬದಲಿಸುವ ಈ ಪ್ರಯತ್ನ ವು ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷವನ್ನು ಹೆಚ್ಚಿಸಿದೆ. ರಾಜ್ಯದ ಎಲ್ಲ ವಿವಿಗಳಿಗೂ ಮುಖ್ಯಮಂತ್ರಿಯೇ ಕುಲಪತಿ ಆಗಬೇಕೆಂಬುದು ಸರ್ಕಾರದ ಆಶಯ. ಫೆ.19ರಂದು ಬೆಂಗಳೂರಿನಲ್ಲಿ ನಡೆದ ವಿವಿಧ ರಾಜ್ಯಗಳ ಉನ್ನತ ಸಚಿವರ ಸಮಾ ವೇಶದಲ್ಲಿ ಯುಜಿಸಿ(ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ) […]

ʻಒಂದು ದೇಶ, ಒಂದು ಚಂದಾʼ ಎಂಬುದು ಕ್ರಾಂತಿಕಾರ ನಡೆಯೇ?

ʻಒಂದು ದೇಶ, ಒಂದು ಚುನಾವಣೆʼ ಮಸೂದೆಯು ಜಂಟಿ ಸಂಸದೀಯ ಸಮಿತಿಯ ಅವಗಾಹನೆಗೆ ಹೋಗಿದೆ. ಇಂಥದ್ದೇ ಹಲವು ಹರಾಕಿರಿಗಳನ್ನು ಮಾಡಿರುವ ಎನ್‌ಡಿಎ 3.0 ಸರ್ಕಾರದ ಇನ್ನೊಂದು ಉಪಕ್ರಮ ʻಒಂದು ದೇಶ, ಒಂದು ಚಂದಾʼ(ಒನ್‌ ನೇಷನ್‌, ಒನ್‌ ಸಬ್‌ಸ್ಕ್ರಿಪಕ್ಷನ್; ಒಎನ್‌ಒಎಸ್‌). ಶೈಕ್ಷಣಿಕ ಕ್ಷೇತ್ರಕ್ಕೆ ಆಯವ್ಯಯ ಬೆಂಬಲ ವರ್ಷೇವರ್ಷೇ ಕಡಿಮೆಯಾಗುತ್ತಿರುವ, ಶೈಕ್ಷಣಿಕ ರಂಗದ ಎಲ್ಲ ಹಂತಗಳಲ್ಲಿ (ಪ್ರಾಥಮಿಕದಿಂದ ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ, ಶ್ರೇಷ್ಠತಾ ಸಂಸ್ಥೆಗಳು) ಬೋಧಕರು ಸೇರಿದಂತೆ ಮಾನವ ಸಂಪನ್ಮೂಲ ಕಡಿಮೆಯಾಗುತ್ತಿರುವ ಹಾಗೂ ಸಂಶೋಧನೆ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿರುವ […]

ಮರಗಳನ್ನು ನೋಡುತ್ತ ಕಾಡನ್ನೇ ಮರೆತವರು

2024ರ ಅರ್ಥಶಾಸ್ತ್ರ ನೊಬೆಲ್‌ ಪುರಸ್ಕಾರವು ಡರಾನ್‌ ಅಸೆಮೊಗ್ಲು, ಸೈಮನ್‌ ಜಾನ್ಸನ್‌ ಹಾಗೂ ಜೇಮ್ಸ್‌ ಎ. ರಾಬಿನ್ಸನ್(ಎಜೆಆರ್) ತ್ರಿವಳಿಗೆ ಸಂದಿದೆ. ಈ ಮೂವರು ನವ ಸಾಂಸ್ಥಿಕ ಅರ್ಥಶಾಸ್ತ್ರದಲ್ಲಿ ಪರಿಣತರಾಗಿದ್ದು, ಅಭಿವೃದ್ಧಿ ಪಥದಲ್ಲಿ ಸಂಸ್ಥೆಗಳ ಪಾತ್ರವನ್ನು ವಿಶ್ಲೇಷಿಸಿದ್ದಾರೆ. ಇವರೆಲ್ಲರೂ ಅಮೆರಿಕದಲ್ಲಿ ನೆಲೆಸಿರುವ ವಲಸಿಗರು. ಅಸೆಮೊಗ್ಲು ಅವರು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಜನಿಸಿ, ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಿಂದ ಪಿಎಚ್‌.ಡಿ ಪಡೆದು, 1993ರಿಂದ ಮಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(ಎಂಐಟಿ)ಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸೈಮನ್‌ ಜಾನ್ಸನ್‌ ಇಂಗ್ಲೆಂಡ್‌ ಮೂಲದವರು. ಎಂಐಟಿಯಿಂದ ಪಿಎಚ್‌.ಡಿ ಪಡೆದು, ಕೆಲಕಾಲ ಅಂತಾರಾಷ್ಟ್ರೀಯ […]

ನೀಟ್‌ ಎನ್ನುವುದು ಒಂದು ರಾಜಕೀಯ ಕಾರ್ಯಕ್ರಮ

2017ರಲ್ಲಿ ತಮಿಳುನಾಡು ಪಿಯು ಪರೀಕ್ಷೆಯಲ್ಲಿ 1,176(1,200) ಅಂಕ ಗಳಿಸಿದ ಎಸ್.‌ಅನಿತಾ ವೈದ್ಯೆಯಾಗುವ ಕನಸು ಕಂಡವರು. ಆದರೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಪಾಸ್‌‌ ಆಗಲಿಲ್ಲ. ಸಾಕಷ್ಟು ಹೋರಾಟದ ಬಳಿಕ ಆತ್ಮಹತ್ಯೆ ಮಾಡಿಕೊಂಡರು. ನೀಟ್‌ 720 ಅಂಕಗಳ 3 ಗಂಟೆ ಅವಧಿಯ ಪರೀಕ್ಷೆ. ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ತಪ್ಪು ಉತ್ತರಕ್ಕೆ ಅಂಕಗಳನ್ನು ಕಳೆಯಲಾಗುತ್ತದೆ. ಮೇ 5 ರಂದು ನಡೆದ ನೀಟ್‌ ಪರೀಕ್ಷೆಯಲ್ಲಿ 24,06,079 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಫಲಿತಾಂಶ ಬಂದಾಗ 67 ಮಂದಿ 720/720 ಅಂಕ ಗಳಿಸಿದರು. […]

ಪಿಯುಸಿಗೆ ಆನ್‍ಲೈನ್ ಪರೀಕ್ಷೆ

2ನೇ ಪಿಯುಸಿ ಪರೀಕ್ಷೆಯನ್ನು ಆನ್‍ಲೈನ್‍ನಲ್ಲಿ ನಡೆಸಲು ಸಾಧ್ಯವಿದೆಯೇ ಎಂದು ಪಿಯು ಇಲಾಖೆ ಪರಿಶೀಲಿಸುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ತರಗತಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಕ್ಷೀಣವಾಗಿದೆ. ಹೀಗಾಗಿ, ಪ್ರಮುಖ ವಿಷಯಗಳಲ್ಲಿ 90 ನಿಮಿಷಗಳ ಪರೀಕ್ಷೆ ನಡೆಸಬಹುದು ಹಾಗೂ ಬಹು ಆಯ್ಕೆ ಪ್ರಶ್ನೆಗಳನ್ನು ಮಾತ್ರ ಕೇಳಬೇಕು ಎನ್ನುವ ಸಲಹೆಗಳು ಇಲಾಖೆಗೆ ಬಂದಿವೆ. ಆದರೆ, ಆನ್‍ಲೈನ್ ಪರೀಕ್ಷೆ ನಡೆಸಲು ಅಂತರ್ಜಾಲ ಸಂಪರ್ಕ, ವಿದ್ಯುತ್ ಸಂಪರ್ಕ, ಮಾತ್ರವಲ್ಲದೆ ಮೂಲಭೂತ ವ್ಯವಸ್ಥೆಯ ಕೊರತೆ ಇದೆ. ಇದನ್ನು ನಿವಾರಿಸಲು ಎಂಜಿನಿಯರಿಂಗ್ ಕಾಲೇಜುಗಳನ್ನು ಬಳಸಿಕೊಳ್ಳಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆನ್‍ಲೈನ್ […]

ಶಿಕ್ಷಣ ಮತ್ತು ಇಂಗ್ಲಿಷ್ ಕಲಿಕೆ

ಡಾ.ಹರೀಶ್ ಎಂ ಜಿ ಮೂವತ್ತು ವರುಷಗಳ ಹಿಂದೆ ಹೆಸರು ಜಾತಿ ಸೂಚಕವಾಗಿತ್ತು. ಒಬ್ಬ ವ್ಯಕ್ತಿಗಿಟ್ಟ ಬೀರ, ಕರಿಯ, ನಾಗ, ಕಾಳ, ಓಬಳ, ಕೆಂಚ, ಹೆಸರುಗಳೇ ಅವರ ಜಾತಿಯನ್ನ ಸೂಚಿಸಿಬಿಡುತ್ತಿತ್ತು. ವ್ಯಕ್ತಿ ಧರಿಸುತ್ತಿದ್ದ ಉಡುಗೆ ತೊಡುಗೆಗಳು ವರ್ಗಗಳ ಸೂಚಕವಾಗಿದ್ದವು. ಉದಾರೀಕರಣ, ಜಾಗತಿಕಾರಣ ಹಾಗು ನಗರೀಕರಣದ ಪ್ರಭಾವದಿಂದ ಈಗಿನ ಪೀಳಿಗೆಯ ಹುಡುಗ/ಹುಡುಗಿಯರಿಗೆ ಪೋಷಕರು ಈ ರೀತಿಯ ಹೆಸರುಗಳನ್ನ ಇಡುತ್ತಿಲ್ಲ. ಹಗಲು ರಾತ್ರಿ ಗೂಗಲ್ ಮಾಡಿ ಅತಿ ಯುನೀಕ್ ಆದ ಹೆಸರನ್ನೇ ಇಡುತ್ತಿದ್ದಾರೆ. ಇಂದು ನನಗೆ ಜಾತಿ ಮತ್ತು ವರ್ಗದ ಪ್ರಮುಖ […]

ಸಿಇಟಿ, ನೀಟ್‌ ಜತೆಗೆ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ಕೋಚಿಂಗ್ : ʼಗೆಟ್‌-ಸೆಟ್‌ ಗೋʼ ವ್ಯವಸ್ಥೆಗೆ CM ಯಡಿಯೂರಪ್ಪ ಚಾಲನೆ

ಬೆಂಗಳೂರು : ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಕೋಚಿಂಗ್‌ ನೀಡಲಾಗುವ ʼಗೆಟ್‌-ಸೆಟ್‌ ಗೋʼ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ʼಗೆಟ್‌-ಸೆಟ್‌ ಗೋʼ (GetCETgo) ವ್ಯವಸ್ಥೆಗೆ ಚಾಲನೆ ಕೊಟ್ಟರಲ್ಲದೆ; ‘ಈವರೆಗೆ ಸಿಇಟಿ ಮತ್ತು ನೀಟ್‌ಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಹೆಚ್ಚುವರಿಯಾಗಿ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ತರಬೇತಿ ಕೊಡಲಾಗುವುದು. ಈ ಸೌಲಭ್ಯವನ್ನು ಎಲ್ಲರೂ […]

Back To Top