Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಬಲಪಂಥೀಯತೆ: ಒಂದು ಜಾಗತಿಕ ಪಿಡುಗು

ಬಲಪಂಥೀಯತೆ: ಒಂದು ಜಾಗತಿಕ ಪಿಡುಗು -ಮಾಧವ ಐತಾಳ್   ಇಂಡಿಯ ಸೇರಿದಂತೆ ಪ್ರಜಾಪ್ರಭುತ್ವವಿರುವ ದೇಶಗಳಿಗೆ ೨೦೨೪ ಸಂಕಷ್ಟದ ವರ್ಷವಾಗಲಿದೆಯೇ? ಜಗತ್ತಿನ ದೊಡ್ಡ ಪ್ರಜಾಪ್ರಭುತ್ವಗಳಾದ ಇಂಡಿಯ, ಅಮೆರಿಕ, ಬ್ರಿಟನ್‌, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಥೈವಾನ್‌ ಸೇರಿದಂತೆ ಹಲವು ದೇಶಗಳಲ್ಲಿ ಚುನಾವಣೆ ನಡೆಯಬೇಕಿದೆ. ಚುನಾವಣೆಗಳು ಆವರ್ತೀಯ ಪ್ರಕ್ರಿಯೆ ಎಂದು ಹೇಳಿಬಿಡಬಹುದು. ಆದರೆ, ಅಂದಾಜು 2 ಶತಕೋಟಿ ಜನರು ಪ್ರಜ್ಞಾಪೂರ್ವಕವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಈ ಆಯ್ಕೆಗಳು ದೇಶದ-ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗುತ್ತವೆಯೇ ಎನ್ನುವುದು ಪ್ರಶ್ನೆ. ಮತ ಚಲಾವಣೆಯಂಥ ಸಹಜ […]

ಡಿಜಿಟಲ್‌ ನಿರಂಕುಶ ರಾಜ್ಯಕ್ಕೆ ಮುನ್ನುಡಿ

ಡಿಜಿಟಲ್‌ ನಿರಂಕುಶ ರಾಜ್ಯಕ್ಕೆ ಮುನ್ನುಡಿ ಚಳಿಗಾಲದ ಅಧಿವೇಶನದ ಕಡೆಯ ದಿನ ಪ್ರತಿಪಕ್ಷಗಳ ಗೈರುಹಾಜರಿಯಲ್ಲಿ ಟೆಲಿಕಾಂ ಮಸೂದೆ ೨೦೨೩ ಅಂಗೀಕಾರಗೊಂಡಿತು. ಬಿಜೆಪಿ ಸಂಸದ ಸುಶೀಲ್‌ ಮೋದಿ, ರಾಷ್ಟ್ರೀಯ ಭದ್ರತೆಗೆ ಮತ್ತು ಸ್ವಾಭಾವಿಕ ಅವಘಡಗಳ ಸಂದರ್ಭದಲ್ಲಿ ಟೆಲಿಕಾಂ ಸೇವೆಗಳನ್ನು ಸರ್ಕಾರ ತಾತ್ಕಾಲಿಕವಾಗಿ ಸುಪರ್ದಿಗೆ ಪಡೆಯುವುದನ್ನು ಮತ್ತು ಉಪಗ್ರಹ ತರಂಗಾಂತರವನ್ನು ಹರಾಜು ಮಾಡದೆ ವಿತರಿಸುವುದನ್ನು ಸಮರ್ಥಿಸಿಕೊಂಡರು. ಟೆಲಿಕಾಂ ಟವರ್‌ಗಳ ಸಂಖ್ಯೆ ೨೦೧೪ರಲ್ಲಿ ೬ ಲಕ್ಷ ಇದ್ದದ್ದು ೨೫ ಲಕ್ಷಕ್ಕೆ ಹಾಗೂ ಬ್ರಾಡ್‌ಬ್ಯಾಂಡ್‌ ಬಳಕೆದಾರರ ಸಂಖ್ಯೆ ೧.೫ ಕೋಟಿಯಿಂದ ೮೫ ಕೋಟಿಗೆ ಹೆಚ್ಚಳಗೊಂಡಿದೆ […]

ಹೆಣ್ಣು ಭ್ರೂಣಗಳ ಹತ್ಯೆ ನಿರಂತರ, ನಿರಾತಂಕ

ʻಗಂಗಾಳ ಹೊಡೆಯುವುದುʼ, ʻಚಿಬ್ಬಲು ಬಡಿಯುವುದುʼ ಎನ್ನುವುದು ಜನಿಸಿದ ಮಗುವಿನ ಲಿಂಗ ಯಾವುದು ಎಂಬುದನ್ನು ಸಾರಲು ಹಿಂದಿನವರು ಬಳಸುತ್ತಿದ್ದ ಮಾತುಗಳು; ಮೊದಲಿನದು ಗಂಡು ಹಾಗೂ ಎರಡನೆಯದು ಹೆಣ್ಣು ಮಗು ಜನನವಾಯಿತೆಂಬುದರ ಸೂಚನೆ. ಕಳೆದ ಫೆಬ್ರವರಿಯಲ್ಲಿ ಮಂಡ್ಯದ ಹೈಕಳು ಮದುವೆಗೆ ಹೆಣ್ಣು ಕರುಣಿಸು ಎಂದು ಮಾಯಕಾರ ಮಾದೇವನಿಗೆ ಹರಕೆ ಒಪ್ಪಿಸಲು ನಡೆಸಿದ ಪಾದಯಾತ್ರೆಯು ಚಿಬ್ಬಲು ಬಡಿಯುವುದು ಕಡಿಮೆಯಾಗಿದ್ದರ ಪರಿಣಾಮ. ಬರುವ ಜನವರಿಯಲ್ಲಿ ಇಂಥದ್ದೇ ಇನ್ನೊಂದು ಪಾದಯಾತ್ರೆ ನಡೆಯಲಿದೆ. ಅವರಿಗೆ ಗೊತ್ತಿದೆಯೋ ಇಲ್ಲವೋ, ಹೆಣ್ಣು ಸಿಗದೆ ಇರಲು ಕಾರಣ ನಾಗರಿಕರು ಎನ್ನಿಸಿಕೊಳ್ಳುವ […]

ಚಿಕ್ಕಮಗಳೂರಿನಲ್ಲಿ ಭಾರೀ ಮಳೆ: ಸೌಂದರ್ಯ ಹೆಚ್ಚಿಸಿಕೊಂಡ ಚಾರ್ಮಾಡಿ ಘಾಟ್

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸತತ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತದಲ್ಲಿದೆ. ಕಳಸ ಪಟ್ಟಣದಿಂದ ಹೊರನಾಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಇದಾಗಿದ್ದು, ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ.ಕುದುರೆಮುಖ ಸುತ್ತಮುತ್ತ ಬಿಟ್ಟು ಬಿಡದೆ ಮುಂಗಾರು ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಪಶ್ಚಿಮ ಘಟ್ಟ ನದಿಗಳು ಜೀವ ಕಳೆ ಪಡೆದಿವೆ. ಆದರೆ ಧಾರಾಕಾರ ಮಳೆಯಿಂದಾಗಿ ಮಲೆನಾಡು ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸೌಂದರ್ಯದ […]

ಮಾರುಕಟ್ಟೆಗೆ ಲಾಕ್‌ಡೌನ್ ಅಡಚಣೆ: ಬೆಳೆದ ಬಾಳೆ ಕಡಿದ ರೈತ

ಯಲ್ಲಾಪುರ: ಲಾಕ್‌ಡೌನ್ ಕಾರಣದಿಂದ ಬಾಳೆಕಾಯಿಗೂ ಮಾರುಕಟ್ಟೆ ಕುಸಿದಿದೆ. ಇದರಿಂದ ಚಿಂತಿತರಾದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ರೈತರು ಬಾಳೆ ಗೊನೆ, ಬಾಳೆ ಗಿಡಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ. ತಾಲ್ಲೂಕು ಅಡಿಕೆಗೆ ಎಷ್ಟು ಪ್ರಖ್ಯಾತವೋ ಬಾಳೆ ಕೃಷಿಗೂ ಅಷ್ಟೇ ಪ್ರಸಿದ್ಧವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ‍್ರವಾಸಿಗರು ಪಟ್ಟಣದಲ್ಲಿ ಬಾಳೆಹಣ್ಣುಗಳನ್ನು ಖರೀದಿಸಿ ಮುಂದೆ ಸಾಗುತ್ತಾರೆ. ಆದರೆ, ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಯಾದ ಬಳಿಕ ಬಾಳೆ ಬೆಳೆಗಾರರ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಬಾಳೆಹಣ್ಣುಗಳನ್ನು ಬಹಳ ದಿನ ಶೇಖರಿಸಿ ಇಡಲಾಗದು. ಹಣ್ಣಾದ ನಂತರ ಅವುಗಳನ್ನು ಮಾರಾಟ ಮಾಡದಿದ್ದರೆ […]

ಮರಳಿ ಪಡೆಯಬೇಕಿರುವ ಜೀವಸಂಕುಲ ಲೋಕ

ಇಂದು ಬೆಳಗ್ಗೆ ಪತ್ರಿಕೆಯಲ್ಲಿ `ವಿಶ್ವಪರಿಸರ ದಿನ’ ಎಂದು ತಿಳಿದಾಗ ಬಾಳ್ವೆ ಮತ್ತು ಬಾಳುವೆಯ ವಿಧಾನಗಳೆರಡೂ ಬೇರೆಯಲ್ಲ ಎಂದು ಬದುಕುತ್ತಿರುವ, ನಾನು ಬಹುವಾಗಿ ಗೌರವಿಸುವ ಮೂವರ ಹೆಸರುಗಳು ಕಣ್ಣ ಮುಂದೆ ಸುಳಿದವು. ಮೇಲುಕೋಟೆಯ ಜನಪದ ಟ್ರಸ್ಟ್‌ನ ಸಂತೋಷ ಕೌಲಗಿ, ಎಂಬತ್ತು-ತೊಂಬತ್ತರ ದಶಕದಲ್ಲಿ ಉತ್ಸಾಹದಲ್ಲಿ, ರಾಜ್ಯದ ಆದ್ಯಂತ ಪರಿಸರದ ಕುರಿತು ಅರಿವು ಮೂಡಿಸುವ ಪ್ರಯತ್ನದಲ್ಲಿ ತೊಡಗಿದ ‘ಅಪ್ಪಿಕೋ’ ಪಾಂಡುರಂಗ ಹೆಗಡೆ ಮತ್ತು ಹಳೆಯ ಗೆಳೆಯ, ’ಗಿಡಬಾಲಕ’ ಎಲ್ಸಿ ನಾಗರಾಜ. ಅಚ್ಚರಿ ಎನ್ನುವಂತೆ ಬೆಳಗ್ಗೆ ಸಂತೋಷ ಕೌಲಗಿಯವರು ಪುಟ್ಟ ಬರಹವನ್ನು ಕೆಲವು […]

ಸೂರ್ಯ ಸತ್ತೇ ಇವುಗಳ ಸಂತತಿ ಇಲ್ಲವಾಗಬೇಕು!

ಬೇರೆ ಗ್ರಹಗಳಲ್ಲಿ ಜೀವಿಗಳಿರಬಹುದು, ಇಲ್ಲದಿರಬಹುದು. ಕಾಲವೆ ಉತ್ತರಿಸಬೇಕು. ಆದರೆ ನಮ್ಮ ಭೂಮಿಯೆ ಏಲಿಯನ್ ತರಹ ಕಾಣುವ ಜೀವಿಯೊಂದನ್ನು ವಿಕಾಸಗೊಳಿಸಿದೆ. ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಬಹುದಾದ ಈ ಜೀವಿ  0.5 – 1.0 ಮಿ.ಮೀ. ಉದ್ದವಿದ್ದು ಆಳ ಸಾಗರದಿಂದ ಹಿಡಿದು ಮರುಭೂಮಿಯ ಮರಳು ದಿಬ್ಬಗಳವೆರೆಗೆ ಎಲ್ಲೆಡೆ ವಾಸಿಸಬಲ್ಲದು. ಪಾಚಿ ಬೆಳೆಯುವ ಸಿಹಿನೀರಿನ ಕೊಳ, ಕೆರೆ, ಸರೋವರಗಳಲ್ಲೂ ಯಥೇಚ್ಛ ಕಂಡುಬರುತ್ತದೆ. ಅಂತರಿಕ್ಷದ ನಿರ್ವಾತದಲ್ಲೂ ಸಾಯದೆ ಇರಬಲ್ಲದು. -273 ಡಿಗ್ರಿ ಸೆಲ್ಸಿಯಸ್ ಶೈತ್ಯ(Absolute Zero)ದಿಂದ ಹಿಡಿದು 100 ಡಿಗ್ರಿಗೂ ಹೆಚ್ಚಿನ ತಾಪದಲ್ಲಿ ವಾಸಿಸಬಲ್ಲದು. […]

ಜಿಎಸ್‍ಟಿ ವ್ಯವಸ್ಥೆ: ವಿಶ್ವಾಸಾರ್ಹತೆಗೆ ಧಕ್ಕೆ

43ನೇ ಜಿಎಸ್‍ಟಿ ಮಂಡಳಿ ಸಭೆ ಮುಗಿದಿದೆ. ಕರ್ನಾಟಕ ಸರ್ಕಾರ ತನಗೆ ಬರಬೇಕಿರುವ 11,000 ಕೋಟಿ ರೂ.ಗಳನ್ನು ಕೊಡಬೇಕೆಂದು “ಮನವಿ’ ಸಲ್ಲಿಸಿದೆ! ತಮಿಳುನಾಡು ಹಣಕಾಸು ಸಚಿವ ಪಳನಿವೇಲು ತ್ಯಾಗರಾಜನ್ “ಜಿಎಸ್‍ಟಿ ಸಮಿತಿ ಒಂದು ರಬ್ಬರ್ ಸ್ಟ್ಯಾಂಪ್’ ಎಂದು ಖಂಡಿಸಿದ್ದಾರೆ. ಜಿಎಸ್‍ಟಿ ಪಾಲು ಪಡೆಯುವುದು ರಾಜ್ಯಗಳ ಹಕ್ಕು. ಅದು ಕೇಂದ್ರದ ಭಿಕ್ಷೆಯಲ್ಲ. ರಾಜ್ಯಗಳಿಗೆ ಪಾಲು ಸಲ್ಲಿಸಲು ಕೇಂದ್ರ ಅಂದಾಜು 1.58 ಲಕ್ಷ ಕೋಟಿ ರೂ. ಸಾಲ ಎತ್ತಬೇಕಿದೆ. ಜಿಎಸ್‍ಟಿ ವ್ಯವಸ್ಥೆಯನ್ನು ಜಾರಿಗೊಳಿಸಿದ ರೀತಿ ಹಾಗೂ ಆ ವ್ಯವಸ್ಥೆಯೇ ದೋಷಪೂರಿತ/ಅವೈಜ್ಞಾನಿಕವಾಗಿತ್ತು. ಜಿಎಸ್‍ಟಿ […]

ಪಿಯುಸಿಗೆ ಆನ್‍ಲೈನ್ ಪರೀಕ್ಷೆ

2ನೇ ಪಿಯುಸಿ ಪರೀಕ್ಷೆಯನ್ನು ಆನ್‍ಲೈನ್‍ನಲ್ಲಿ ನಡೆಸಲು ಸಾಧ್ಯವಿದೆಯೇ ಎಂದು ಪಿಯು ಇಲಾಖೆ ಪರಿಶೀಲಿಸುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ತರಗತಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಕ್ಷೀಣವಾಗಿದೆ. ಹೀಗಾಗಿ, ಪ್ರಮುಖ ವಿಷಯಗಳಲ್ಲಿ 90 ನಿಮಿಷಗಳ ಪರೀಕ್ಷೆ ನಡೆಸಬಹುದು ಹಾಗೂ ಬಹು ಆಯ್ಕೆ ಪ್ರಶ್ನೆಗಳನ್ನು ಮಾತ್ರ ಕೇಳಬೇಕು ಎನ್ನುವ ಸಲಹೆಗಳು ಇಲಾಖೆಗೆ ಬಂದಿವೆ. ಆದರೆ, ಆನ್‍ಲೈನ್ ಪರೀಕ್ಷೆ ನಡೆಸಲು ಅಂತರ್ಜಾಲ ಸಂಪರ್ಕ, ವಿದ್ಯುತ್ ಸಂಪರ್ಕ, ಮಾತ್ರವಲ್ಲದೆ ಮೂಲಭೂತ ವ್ಯವಸ್ಥೆಯ ಕೊರತೆ ಇದೆ. ಇದನ್ನು ನಿವಾರಿಸಲು ಎಂಜಿನಿಯರಿಂಗ್ ಕಾಲೇಜುಗಳನ್ನು ಬಳಸಿಕೊಳ್ಳಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆನ್‍ಲೈನ್ […]

Back To Top