ಆನ್‌ಲೈನ್ ಕಂಟೆಂಟ್ ಮೇಲೆ ನಿರ್ಬಂಧ

ಅAತರ್‌ಜಾಲದಲ್ಲಿ ಪ್ರಸಾರವಾಗುವ ಸುದ್ದಿ, ಸಿನಿಮಾ, ಪ್ರಚಲಿತ ವ್ಯವಹಾರ ಕಾರ್ಯಕ್ರಮ, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುವ ವಿಡಿಯೋ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾನಂಹ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸುದ್ದಿಗಳಿಗೂ ಇದು ಅನ್ವಯವಾಗಲಿದೆ. ಈ ಸಂಬಂಧ ಅಧಿಸೂಚನೆಯನ್ನು ಸಂಪುಟ ಕಾರ್ಯಾಲಯ ಹೊರಡಿಸಿದ್ದು, ಪರ-ವಿರೋಧ ವ್ಯಕ್ತವಾಗಿದೆ. ಆನ್‌ಲೈನ್ ಮಾಧ್ಯಮಗಳು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವ ವ್ಯಾಪ್ತಿಗೆ ಬರಲಿದ್ದು, ಸಂಬAಧಿಸಿದ ಕರ‍್ಯನೀತಿಯನ್ನು ಸಚಿವಾಲಯ ರೂಪಿಸಲಿದೆ. 1961ರ ನಿಯಮಗಳಿಗೆ ತಿದ್ದುಪಡಿ ತಂದಿರುವುದರಿಂದ, ಆನ್‌ಲೈನ್‌ನಲ್ಲಿ ಪ್ರಕಟವಾಗುವ ಸುದ್ದಿ, ಆಡಿಯೋ, ವಿಡಿಯೋ ಮತ್ತು ಸಿನಿಮಾಗಳ ಮೇಲೆ ನಿಗಾ ಇರಿಸಲು ನಿಯಮಗಳನ್ನು ರೂಪಿಸುವುದು ಕೇಂದ್ರ ವಾರ್ತಾ ಮತ್ತು ಪ್ರಸಾರದ ವ್ಯಾಪ್ತಿಗೆ ಬರಲಿದೆ. ಇದೊಂದು ಉಸಿರು ಕಟ್ಟಿಸುವ ಪ್ರಯತ್ನ. ಮಾಧ್ಯಮ ಸ್ವಾತಂತ್ರ್ಯಯಕ್ಕೆ ಧಕ್ಕೆ ತರಲಿದೆ. ಉತ್ತಮ, ಪಕ್ಷಾತೀತ ಹಾಗೂ ಸತ್ಯವನ್ನಷ್ಟೇ ಪ್ರಕಟಿಸುತ್ತಿದ್ದ ಸ್ವತಂತ್ರ ಹಾಗೂ ಸ್ವಾಯತ್ತ ಮಾಧ್ಯಮಗಳ ಸ್ವಾತಂತ್ರ್ಯವನ್ನು ಅಧಿಸೂಚನೆ ಕಸಿಯಲಿದೆ. ಅಧಿಕೃತ ಸೆನ್ಸಾರ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ವಿರೋಧ ವ್ಯಕ್ರವಾಗಿದೆ. ಆದರೆ, ಸರ್ಕಾರದ ಕ್ರಮವನ್ನು ಕೆಲವರು ಸ್ವಾಗತಿಸಿದ್ದಾರೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top