ವ್ಯಕ್ತಿಯೊಬ್ಬರು ಪ್ರಯೋಗಾಲಯದಲ್ಲಿ ಮಾಡಿಸಿಕೊಳ್ಳುವ ಆರ್‌ಟಿ-ಪಿಸಿಆರ್ ಪರೀಕ್ಷೆ ಶುಲ್ಕವನ್ನು 800 ರೂ.ಗೆ ಇಳಿಸಲಾಗಿದೆ. ಈ ಮೊದಲು ಶುಲ್ಕ 1.200 ರೂ. ಇದ್ದಿತ್ತು. ಕೋವಿಡ್ ಪರೀಕ್ಷೆಗೆ ಬಳಸುವ ರಾಸಾಯನಿಕ ಹಾಗೂ ಇತರ ವಸ್ತುಗಳ ದರ ಕಡಿಮೆಯಾಗಿದೆ. ಭಾರತೀಯ ವೈದ್ಯ ಸಂಶೋಧನಾ ಪರಿಷತ್ತಿನಿಂದ ಮಾನ್ಯತೆ ಪಡೆದ ಪ್ರಯೋಗಾಲಯಗಳಿಗೆ ಮಾತ್ರ ನೂತನ ದರ ಅನ್ವಯವಾಗಲಿದೆ. ತಪಾಸಣೆ ಹಾಗೂ ದೃಢಪಡಿಸುವ ಪರೀಕ್ಷೆ ಶುಲ್ಕ ಮತ್ತು ಪಿಪಿಇ ಕಿಟ್ ವೆಚ್ಚ ಕೂಡ ಪರಿಷ್ಕೃತ ದರದಲ್ಲಿ ಸೇರಿದೆ. ಇದಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ಸರ್ಕಾರ ತಿಳಿಸಿದೆ. ಸರ್ಕಾರವು ಖಾಸಗಿ ಪ್ರಯೋಗಾಲಯಗಳಿಗೆ ರವಾನಿಸುವ ಮಾದರಿಗಳ ಪರೀಕ್ಷೆ ಶುಲ್ಕವನ್ನು 500ರೂ.ಗೆ ಇಳಿಸಲಾಗಿದೆ. ಈ ಮೊದಲು 800 ರೂ. ತೆರಬೇಕಿತ್ತು.
Courtesyg: Google (photo)