ಆಸ್ಟ್ರಾ ಜೆನೆಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕುರಿತ ಮಾಹಿತಿ ತಪ್ಪಾಗಿದೆ ಎಂದು ತಜ್ಞರು ಆಕ್ಷೇಪಿಸಿದ್ದು, ಈ ಸಂಬಂಧ ವ್ಯಾಪಕ ಚರ್ಚೆ ನಡೆಯುತ್ತಿದೆ. ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ ಅರ್ಧ ಡೋಸ್ ಶೇ. ೯೦ ಹಾಗೂ ೨ ಪೂರ್ಣ ಡೋಸ್ ಶೇ.೭೦ ರಷ್ಟು ಪರಿಣಾಮಕಾರಿ ಎಂದು ಕಂಪನಿ ಸೋಮವಾರ ತಿಳಿಸಿತ್ತು. ಆದರೆ, ಪೂರ್ಣ ಡೋಸ್ ನೀಡಿದ ೨೮ ದಿನಗಳ ನಂತರ ಅರ್ಧ ಡೋಸ್ ನೀಡಲಾಗಿತ್ತು. ಒಟ್ಟು ಒಂದೂವರೆ ಡೋಸ್ ಪಡೆದವರಲ್ಲಿ ಲಸಿಕೆಯ ಪರಿಣಾಮ ಶೇ.೯೦ರಷ್ಟು ಇತ್ತು ಎಂದು ಕಂಪನಿ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದರು. ಕಂಪನಿ ಬ್ರಿಟನ್ ಮತ್ತು ಬ್ರೆಜಿಲ್‌ನಲ್ಲಿ ನಡೆಸಿದ ಕ್ಲಿನಿಕಲ್ ಟ್ರಯಲ್‌ನಲ್ಲಿ ಬೇರೆ ಬೇರೆ ವಿಧಾನ ಬಳಸಲಾಗಿತ್ತು. ಬಳಿಕ ಎರಡೂ ಟ್ರಯಲ್‌ಗಳ ಫಲಿತಾಂಶಗಳನ್ನು ಒಗ್ಗೂಡಿಸಿ, ಒಂದೇ ಫಲಿತಾಂಶ ನೀಡಿರುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ. ಲಸಿಕೆಯಿಂದ ಮನುಷ್ಯನ ಮೇಲಿನ ಪ್ರಯೋಗಕ್ಕೆ ಸಂಬಂಧಿಸಿದ ನಿಯಮಗಳನ್ನು ಕಂಪನಿ ಪರಿಗಣಿಸಿಲ್ಲ. ಭಿನ್ನ ಪ್ರಮಾಣದ ಡೋಸ್‌ಗಳನ್ನು ನೀಡುವಾಗ ಅನುಸರಿಸುವ ನಿಯಮಗಳನ್ನು ಕಡೆಗಣಿಸಿದೆ ಎನ್ನುವುದು ಆರೋಪ. ಲಸಿಕೆಯ ಡೋಸ್‌ಗೆ ಸಂಬಂಧಿಸಿದ ಮಾಹಿತಿ ತಪ್ಪಾಗಿದೆ. ಆದರೆ, ಲಸಿಕೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಮಾಹಿತಿ ನೀಡುವಲ್ಲಿನ ಲೋಪ ಮುಖ್ಯವಲ್ಲ ಎಂದು ಕಂಪನಿ ಹೇಳಿದೆ.
Courtesyg: Google (photo)