ಆ್ಯಪ್ ಜಾಲಕ್ಕೆ ಬಲಿಯಾಗದಿರಿ: ಆರ್‌ಬಿಐ

ಸಾಲ ನೀಡುವುದಾಗಿ ಆಮಿಷ ಒಡ್ಡುವ ಅನಧಿಕೃತ ಮೊಬೈಲ್ ಆ್ಯಪ್‌ಗಳ ಜಾಲಕ್ಕೆ ಬಲಿಯಾಗಬಾರದು ಎಂದು ಆರ್‌ಬಿಐ ಎಚ್ಚರಿಕೆ ನೀಡಿದೆ. ಸಾಲ ಕೊಡುವುದಾಗಿ ಹೇಳುವ ಇಂತಹ ಆ್ಯಪ್‌ಗಳ ಸಂಖ್ಯೆ ಹೆಚ್ಚುತ್ತಿದೆ. ತಕ್ಷಣ, ಯಾವುದೇ ಪರಿಶೀಲನೆಯಿಲ್ಲದೆ ಸಾಲ ನೀಡುವುದಾಗಿ ಹೇಳುವ ಇಂತಹ ಆ್ಯಪ್‌ಗಳ  ಜಾಲದಲ್ಲಿ ಸಾರ್ವಜನಿಕರು ಹಾಗೂ ಕೆಲವು ಸಣ್ಣ ಉದ್ದಿಮೆಗಳು ಸಿಲುಕಿರುವ ವರದಿ ಇದೆ. ಇಂಥ ಸಾಲಗಳಿಗೆ ವಿಧಿಸುವ ಬಡ್ಡಿ ಹೆಚ್ಚು ಇರಲಿದೆ. ನಾನಾ ಶುಲ್ಕಗಳನ್ನೂ ವಿಧಿಸಲಾಗುತ್ತದೆ. ಸಾಲ ವಸೂಲಿಗೆ ಆಕ್ಷೇಪಾರ್ಹ ಮಾರ್ಗಗಳನ್ನು ಬಳಸುತ್ತವೆ. ಬಳಕೆದಾರರ ಮೊಬೈಲ್‌ಗಳಲ್ಲಿ ಇರುವ ದತ್ತಾಂಶವನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತವೆ  ಎಂದು ಪ್ರಕಟಣೆ ಹೇಳಿದೆ. ಕೆವೈಸಿ ದಾಖಲೆಗಳನ್ನು ಅಪರಿಚಿತರು ಇಲ್ಲವೇ ಅನಧಿಕೃತ ಆ್ಯಪ್‌ಗಳ ಜೊತೆ ಹಂಚಿಕೊಳ್ಳಬಾರದು. ಇಂತಹ ಆ್ಯಪ್‌ಗಳ ಬಗ್ಗೆ https:achet.rbi.org.in ಗೆ ಭೇಟಿ ನೀಡಿ, ದೂರು ಸಲ್ಲಿಸಬಹುದು. ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿ ಸಾಲ ಕೊಡುವ ಆ್ಯಪ್‌ಗಳ ಬಗ್ಗೆ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಆರ್‌ಬಿಐ ಹೇಳಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top