ಗೃಹ ಬಳಕೆಯ ಅನಿಲ ಸಿಲಿಂಡರ್ (14.2 ಕೆ.ಜಿ) ಬೆಲೆ ಮತ್ತೆ ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್ʼಗೆ 50 ರೂಪಾಯಿ ಏರಿಕೆ ಮಾಡಲಾಗಿದೆ. ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 769 ರೂಪಾಯಿ ಆಗಲಿದೆ. ಕರ್ನಾಟಕದಲ್ಲಿ 724 ರೂ ಆಗಲಿದೆ.
ಎಲ್ ಪಿಜಿ ಗ್ಯಾಸ್ ಸಿಲಿಂಡರ್ʼಗಳ ಬೆಲೆಯನ್ನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧರಿಸುತ್ತವೆ ಮತ್ತು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲ್ಪಡುತ್ತವೆ. ಅಂತಾರಾಷ್ಟ್ರೀಯ ಇಂಧನ ದರಗಳು ಮತ್ತು ಯುಎಸ್ ಡಾಲರ್-ರೂಪಾಯಿ ವಿನಿಮಯ ದರಗಳನ್ನ ಅವಲಂಬಿಸಿ, ಬೆಲೆಗಳು ಏರಬಹುದು ಅಥವಾ ಇಳಿಕೆಯಾಗಬಹುದು.
ಇಂಧನ ಚಿಲ್ಲರೆ ಮಾರಾಟಗಾರರು ಎಲ್ ಪಿಜಿ ಸಿಲಿಂಡರ್ʼಗಳ ಬೆಲೆಯನ್ನ ಪರಿಷ್ಕರಿಸುತ್ತದೆ. ಇದು ಪ್ರಾಥಮಿಕವಾಗಿ ಎಲ್ ಪಿಜಿಯ ಅಂತಾರಾಷ್ಟ್ರೀಯ ಮಾನದಂಡ ದರ, ಮತ್ತು ಯುಎಸ್ ಡಾಲರ್ ಮತ್ತು ರೂಪಾಯಿ ವಿನಿಮಯ ದರ. ಈ ಎಲ್ ಪಿಜಿ ಬೆಲೆ ಏರಿಕೆ ಭಾರತದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಲು ಸಜ್ಜಾಗಿದೆ. ಈಗ ಆ ಪಟ್ಟಿಗೆ ಅಡುಗೆ ಅನಿಲ ದರ ಸೇರಿಕೊಂಡಿದ್ದು, ಸಾರ್ವಕಾಲಿಕ ಏರಿಕೆಯತ್ತ ಮುನ್ನುಗ್ಗುತ್ತಿದೆ.
2020ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಡುಗೆ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿತ್ತು. ಜೂನ್, ಜುಲೈನಲ್ಲಿ ಮತ್ತೆ ಏರಿಕೆ ಕಂಡಿದ್ದ ದರ, ನಂತರ ನಾಲ್ಕು ತಿಂಗಳು ಯಾವುದೇ ಬದಲಾವಣೆ ಕಂಡಿರಲಿಲ್ಲಡಿಸೆಂಬರ್ 1, 2020 ರಂದು, ಸಿಲಿಂಡರ್‌ಗೆ ಇದೇ ರೀತಿಯ ₹ 50 ರಷ್ಟು ಬೆಲೆಯನ್ನು ಹೆಚ್ಚಿಸಲಾಯಿತು, ನಂತರ ಅಂತರರಾಷ್ಟ್ರೀಯ ಬೆಲೆಯಲ್ಲಿ ಹೆಚ್ಚಳವಾದ ಹಿನ್ನಲೆಯಲ್ಲಿ, ಡಿಸೆಂಬರ್ 16, 2020 ರಂದು ಮತ್ತೆ ₹ 50 ಹೆಚ್ಚಳವಾಯಿತು.