ಪ್ರಸ್ತುತ ಮಾಸದಲ್ಲಿ ಇಂಧನ ಬೆಲೆ 13ನೇ ಬಾರಿ ಹೆಚ್ಚಳಗೊಂಡಿದ್ದು, ಪೆಟ್ರೋಲ್ ಬೆಲೆ ಲೀಟರ್‍ಗೆ 100 ರೂ. ಆಗಲು ಹೆಚ್ಚು ಕಾಲ ಬೇಕಿಲ್ಲ. ಮೇ 26ರ ಬುಧವಾರ ಪೆಟ್ರೋಲ್ ಬೆಲೆ 23 ಪೈಸೆ ಹಾಗೂ ಡೀಸೆಲ್ ಬೆಲೆ 25 ಪೈಸೆ ಹೆಚ್ಚಳಗೊಂಡಿದೆ. ಇಂಧನ ಬೆಲೆ ಸಾಗಣೆ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ದಿನನಿತ್ಯದ ಸರಕುಗಳ ಬೆಲೆಯಲ್ಲಿ ನಿರಂತರ ಹೆಚ್ಚಳವಾಗುತ್ತಿದೆ.
ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ನೂರು ರೂ. ದಾಟಿದೆ. ಮುಂಬಯಿಯಲ್ಲಿ 99.71 ರೂ ಇದೆ.