ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಮಂದಿಗೆ ಇನ್ಫೋಸಿಸ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಸಾಧಕರನ್ನು ಉತ್ತೇಜಿಸಲು ನೀಡಲಾಗುವ ಪ್ರಶಸ್ತಿಯ ಮೊತ್ತ 70 ಲಕ್ಷ ರೂ. ನಗದು, ಚಿನ್ನದ ಪದಕ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ.
ಪ್ರಶಸ್ತಿ ವಿಜೇತರು:-
ಪ್ರೊ.ಅರಿಂದಮ್ ಘೋಷ್: ಹೊಸ ತಲೆಮಾರಿನ ಕ್ರಿಯಾತ್ಮಕ ಎಲೆಕ್ಟ್ರಾನಿಕ್, ಥರ್ಮೊಎಲೆಕ್ಟ್ರಿಕ್ ಹಾಗೂ ಆಪ್ಟೊ ಎಲೆಕ್ಟ್ರಾನಿಕ್ ಸಾಧನಗಳನ್ನು ರೂಪಿಸಲು ಎರಡು ಆಯಾಮದ ಸೆಮಿ ಕಂಡಕ್ಟರ್‌ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಭೌತಿಕ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರೊ.. ಹರಿ ಬಾಲಕೃಷ್ಣನ್: ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಪ್ರೊ.ಹರಿ ಬಾಲಕೃಷ್ಣನ್, ಎಂಜಿನಿಯರಿAಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಡಾ..ಪ್ರಾಚಿ ದೇಶಪಾಂಡೆ: ಕೋಲ್ಕತ್ತದ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಷಿಯಲ್ ಸೈನ್ಸ್ನ ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ಕರ‍್ಯ ನಿರ್ವಹಿಸುತ್ತಿದ್ದಾರೆ. ಮರಾಠರ ಇತಿಹಾಸ ರಚನೆಯಲ್ಲಿ ಅವರು ಕೆಲಸ ಮಾಡಿದ್ದಾರೆ.
ಡಾ. ರಾಜನ್ ಶಂಕರ ನಾರಾಯಣನ್: ಹೈದರಾಬಾದಿನ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ ಕೇಂದ್ರದ ಡಾ. ರಾಜನ್ ಶಂಕರ ನಾರಾಯಣನ್ ಅವರಿಗೆ ಅಣುಗಳ ಆನುವಂಶಿಕ ಸಂಕೇತಗಳ ದೋಷಮುಕ್ತ ವರ್ಗಾವಣೆ ವಿಷಯದಲ್ಲಿ ನಡೆಸಿದ ಸಂಶೋಧನೆಗೆ ಪ್ರಶಸ್ತಿ ನೀಡಲಾಗಿದೆ.
ಪ್ರೊ. ಸೌರವ್ ಚಟರ್ಜಿ: ಗಣಿತ ವಿಜ್ಞಾನ ಕ್ಷೇತ್ರದಲ್ಲಿ ರ‍್ಯಾಂಡಮ್ ಗ್ರಾಫ್‌ಗಳ ವಿಚಲನಗಳ ಕುರಿತ ಕೆಲಸಕ್ಕೆ ಈ ಗೌರವ ನೀಡಲಾಗಿದೆ. ಚಟರ್ಜಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರೊ. ರಾಜ್ ಚೆಟ್ಟಿ: ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸು ತ್ತಿರುವ ಪ್ರೊ.ರಾಜ್ ಚೆಟ್ಟಿಯವರಿಗೆ ಸಮಾಜ ವಿಜ್ಞಾನ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಕೋವಿಡ್ ಬಿಕ್ಕಟ್ಟು ಆರ್ಥಿಕ ವಾಗಿ ಯಾವ ರೀತಿಯ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂಬ ಬಗ್ಗೆ ದತ್ತಾಂಶ ಸಂಗ್ರಹಿಸಿ, ಪರಿಹಾರ ಕ್ರಮಗಳನ್ನು ಸೂಚಿಸಿದ್ದಾರೆ.
Courtesyg: Google (photo)