ಆರೋಗ್ಯ ಸಚಿವಾಲಯ ಆರಂಭಿಸಿರುವ ಇ–ಸಂಜೀವಿನಿ ಯೋಜನೆ ಮೂಲಕ ಒಟ್ಟು ಎಂಟು ಲಕ್ಷ ಮಂದಿ ಮನೆಯಲ್ಲೇ ಕುಳಿತು ವೈದ್ಯರಿಂದ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ತಮಿಳುನಾಡು ರಾಜ್ಯವೊಂದರಲ್ಲೇ 2,59,904 ಮಂದಿ ಇ–ಸಂಜೀವಿನಿ ಒಪಿಡಿ ಆ್ಯಪ್ ಮೂಲಕ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶ-2,19,175, ಎರಡನೇ ಸ್ಥಾನದಲ್ಲಿದೆ. ಕೇರಳ-58,000, ಹಿಮಾಚಲ ಪ್ರದೇಶ-46,647, ಮಧ್ಯ ಪ್ರದೇಶ-43,045, ಗುಜರಾತ್ -41,765, ಆಂಧ್ರ ಪ್ರದೇಶ -35,217, ಉತ್ತರಾಖಂಡ-26,819, ಕರ್ನಾಟಕ -23,008, ಮತ್ತು ಮಹಾರಾಷ್ಟ್ರದ -9,741 ಮಂದಿ ಈ ಸೇವೆ ಪಡೆದಿದ್ದಾರೆ ಎಂದು ಸಚಿವಾಲಯ ಹೇಳಿಕೆ ನೀಡಿದೆ.
Courtesyg: Google (photo)