ಜುಲೈ-ಸೆಪ್ಟೆಂಬರ್‌ನಲ್ಲಿ ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ 7,200 ರೂ. ಕೋಟಿ ಬಂಡವಾಳ ಹಿಂಪಡೆದಿದ್ದಾರೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ ಹೇಳಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 23,874 ಕೋಟಿ ರೂ. ಹಣ ಹೂಡಿಕೆಯಾಗಿತ್ತು. ಬಂಡವಾಳ ಹೊರಹರಿವಿನ ನಡುವೆಯೂ ಎಂಎಫ್‌ಗಳ ನಿರ್ವಹಣಾ ಸಂಪತ್ತು 7.24 ಲಕ್ಷ ಕೋಟಿಯಿಂದ ೭,೬೪ ಲಕ್ಷ ಕೋಟಿ ರೂ. ಹೆಚ್ಚಿದೆ. ಹೂಡಿಕೆದಾರರು ಮ್ಯೂಚುವಲ್ ಫಂಡ್ ಬದಲು ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕ್ವಾಂಟಮ್ ಎಎಂಸಿ ಸಹಾಯಕ ನಿಧಿ ನಿರ್ವಾಹಕ ನೀಲೇಶ್ ಶೆಟ್ಟಿ ಹೇಳಿದ್ದಾರೆ. ಸಿಪ್ ಮೂಲಕ ಹೂಡಿಕೆಯಲ್ಲೂ ಇಳಿತ ಕಂಡುಬAದಿದ್ದು, ಬಂಡವಾಳ ಒಳಹರಿವು 24,818 ಕೋಟಿಗಳಿಂದ 23,411 ಕೋಟಿ ರೂ.ಗೆ ಇಳಿಕೆಯಾಗಿದೆ.
Courtesyg: Google (photo)