ಉತ್ತರಾಖಂಡ: ಈ ತಿಂಗಳ ಆರಂಭದಲ್ಲಿ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟಗೊಂಡ ಪರಿಣಾಮ 136 ಜನ ಕಣ್ಮರೆಯಾಗಿದ್ದು, ಆ 136 ಮಂದಿಯೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧೌಲಿಗಂಗಾ-ಅಲಕಾನಂದ ನದಿ ವ್ಯವಸ್ಥೆಯಲ್ಲಿ ಹಿಮಪ್ರವಾಹ ಮತ್ತು ಹಿಮಪಾತಕ್ಕೆ ಕಾರಣವಾದ ಹಿಮಾಲಯದ ಮೇಲಿನ ಹಿಮನದಿ ಸ್ಫೋಟಗೊಂಡು ಜಲವಿದ್ಯುತ್ ಸ್ಥಾವರ ಮತ್ತು ಐದು ಸೇತುವೆಗಳು ಕೊಚ್ಚಿ ಹೋಗಿದ್ದು, ಮತ್ತೊಂದು ವಿದ್ಯುತ್ ಯೋಜನೆಗೆ ತೀವ್ರ ಹಾನಿಯುಂಟಾಗಿದೆ.
ಜಿಲ್ಲೆ ದುರಂತಕ್ಕೆ ಬಲಿಯಾದ ನಂತರ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ತಂಡಗಳು, ಸಶಸ್ತ್ರ ಪಡೆಗಳು, ಅರೆಸೇನಾ ಪಡೆ ಮತ್ತು ಪೊಲೀಸ್ ಒಳಗೊಂಡ ಬಹು-ಏಜೆನ್ಸಿಯ ಟ್ರ್ಯಾಕ್ ಅಂಡ್ ರೆಸ್ಕ್ಯೂ ಪ್ರಯತ್ನಗಳನ್ನು ಆರಂಭಿಸಲಾಯಿತು. ಇನ್ನು ಪತ್ತೆಯಾದ ಮೃತದೇಹಗಳ ಡಿಎನ್ ಎ ಮಾದರಿಗಳನ್ನ ಪರೀಕ್ಷಿಸಲು ಕುಟುಂಬಗಳನ್ನ ಕರೆಸಲಾಗಿದೆ.