ಗುತ್ತಿಗೆ ಆಧರಿತ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಮುಂಚೂಣಿಯಲ್ಲಿವೆ ಎಂದು ಟೆಕ್‌ಫೈಂಡರ್ ಕಂಪನಿಯ ಸಮೀಕ್ಷೆ ಹೇಳಿದೆ.ಕೋವಿಡ್‌ನಿಂದ ಕಂಪನಿಗಳು ಕೆಲವು ಬದಲಾವಣೆ ಮಾಡಿಕೊಂಡಿವೆ. ಇದರಿಂದ ಗುತ್ತಿಗೆ ಆಧರಿತ ಉದ್ಯೋಗಾವಕಾಶ ಹೆಚ್ಚುತ್ತಿದೆ ಎಂದು ಗುತ್ತಿಗೆ ಆಧಾರದ ಉದ್ಯೋಗ ಒದಗಿಸುವಲ್ಲಿ ಕಂಪನಿಗಳಿಗೆ ನೆರವಾಗುವ ಟೆಕ್‌ಫೈಂಡರ್ ಹೇಳಿದೆ. ಗುತ್ತಿಗೆ ಆಧರಿತ ಉದ್ಯೋಗದ ಒಟ್ಟು ಬೇಡಿಕೆಯಲ್ಲಿ ಬೆಂಗಳೂರು ಮತ್ತು ದಾವಣಗೆರೆ ಶೇ.29ರಷ್ಟು ಪಾಲು ಹೊಂದಿವೆ. ತೆಲಂಗಾಣದ ಹೈದರಾಬಾದ್ ಮತ್ತು ವಾರಂಗಲ್ ಶೇ.24, ಮಹಾರಾಷ್ಟç ಶೇ.18, ತಮಿಳುನಾಡು ಶೇ.15 ಹಾಗೂ ದೆಹಲಿ ಶೇ.14 ಪಾಲು ಹೊಂದಿವೆ. ಜುಲೈ-ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತದ 42 ಸಾವಿರ ಗುತ್ತಿಗೆದಾರರಿಂದ ಮಾಹಿತಿ ಸಂಗ್ರಹಿಸಿ, ವರದಿ ಸಿದ್ಧಪಡಿಸಲಾಗಿದೆ.
ಒಟ್ಟು ಬೇಡಿಕೆಯಲ್ಲಿ ಒಂದನೇ ಶ್ರೇಣಿಯ ನಗರಗಳ ಪಾಲು ಶೇ.58, ಎರಡನೇ ಶ್ರೇಣಿಯ ನಗರಗಳು ಶೇ.32 ಹಾಗೂ ಮೂರನೇ ಶ್ರೇಣಿಯ ನಗರಗಳಲ್ಲಿ ಶೇ. 10ರಷ್ಟು ಬೇಡಿಕೆ ಇದೆ. ಸಾಫ್ಟ್ವೇರ್ ಡೆವಲಪರ್ಸ್/ಎಂಜಿನಿಯರ್, ಡೇಟಾ ಅನಲಿಸ್ಟ್ಗಳು, ವೆಬ್ ಡೆವಲಪರ್, ಡೇಟಾ ಸೈಂಟಿಸ್ಟ್, ಜಾವಾ ಡೆವಲಪರ್‌ಗಳಿಗೆ ಹೆಚ್ಚು ಬೇಡಿಕೆಯಿದೆ. ಔಷಧ, ಮಾರಾಟ ಮತ್ತು ಮಾರುಕಟ್ಟೆ, ದೂರಸಂಪರ್ಕ ಹಾಗೂ ವಿಮೆ ವಲಯದಲ್ಲೂ ಗುತ್ತಿಗೆ ಉದ್ಯೋಗಾವಕಾಶ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
Courtesyg: Google (photo)