ತ್ಯಾಜ್ಯ ಎನ್ನುವುದು ನಾಗರಿತೆ ಸೃಷ್ಟಿಸಿರುವ ಸಮಸ್ಯೆ. ಈ ಹಿಂದೆಯೂ ತ್ಯಾಜ್ಯ ಸೃಷ್ಟಿಯಾಗುತ್ತಿದ್ದರೂ, ಕೊಳ್ಳುಬಾಕ ಪ್ರವೃತ್ತಿ ತಲೆಯತ್ತದ ಕಾರಣ ಹಾಗೂ ಜನಸಂಖ್ಯೆ ಕಡಿಮೆ ಇದ್ದುದರಿಂದ, ಕಸದ ಪ್ರಮಾಣ ಕಡಿಮೆ ಇತ್ತು. ಜನಸಂಖಗುಎ ಹೆಚ್ಚಿದಂತೆ ನಗರಗಳಿಗೆ ವಲಸೆಯೂ ಹೆಚ್ಚಿ ನಗರಗಳು ಅಸಡ್ಡಾಳವಾಗಿ ಬೆಳೆದವು. ಅಕ್ಕಪಕ್ಕದ ಹಳ್ಳಿಗಳನ್ನು ನುಂಗುತ್ತ ತಾವು ಸೃಷ್ಟಿಸುವ ತ್ಯಾಜ್ಯದಲ್ಲಿ ಮುಳುಗಿ ಹೋಗಲಾರಂಭಿಸಿದವು.
– 15ಜನವರಿ 2018 ಸಂಚಿಕೆ-14 ಪುಟ-66