ಕೋವಿಡ್ ಕಾರಣದಿಂದ ಇಡಿ ದೇಶದಲ್ಲೇ ಅದೇಷ್ಟೋ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಹಲವಾರು ಸವಾಲುಗಳನ್ನು ಎದುರಿಸಿ, ಈಗ ಚೇತರಿಕೆಯ ಸ್ವಲ್ಪ ಚೇತರಿಕೆಯ ದಾರಿ ಹಿಡಿದಿವೆ. ಈ ಸಂದರ್ಭದಲ್ಲಿ ವಿದ್ಯುತ್, ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಸರ್ಕಾರ ಒದಗಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಒತ್ತಾಯಿಸಿದೆ. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಮಾತನಾಡಿ, ಕೋವಿಡ್‌ನಿಂದಾಗಿ ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಇಷ್ಟು ಬೇಗ ಚೇತರಿಕೆ ಕಾಣಬಹುದು ಅಂದುಕೊAಡಿರಲಿಲ್ಲ. ಕೋವಿಡ್ ಕಾರಣ ಸರ್ಕಾರವು ನೀಡಿದ್ದ ವಿವಿಧ ಸೌಲಭ್ಯಗಳು ಸೆಪ್ಟೆಂಬರ್‌ಗೆ ಅಂತ್ಯವಾಗಿವೆ. ಈ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದರು. ರಸ್ತೆ, ವಿದ್ಯುತ್, ನೀರು ಸೇರಿದಂತೆ ವಿವಿಧ ಮೂಲಸೌಕರ್ಯಗಳ ಕೊರತೆ ಉದ್ಯಮದ ಪ್ರಗತಿಗೆ ತೊಡಕಾಗಿದೆ. ಕೈಗಾರಿಕೋತ್ಪನ್ನಗಳನ್ನು ರಾಜ್ಯದಿಂದ ರಫ್ತು ಮಾಡಲು ಚೆನ್ನೈ ಬಂದರಿಗೆ ಹೋಗಬೇಕಾದ ಅನಿವಾರ್ಯತೆಯಿದೆ. ಇದರಿಂದ ಕೋಟ್ಯಂತರ ರೂಪಾಯಿ ಆದಾಯ ಆ ರಾಜ್ಯಕ್ಕೆಹೋಗುತ್ತಿದೆ. ಮಂಗಳೂರು ಬಂದರಿಗೆ ಬೆಂಗಳೂರಿನಿAದ ಸಮರ್ಪಕ ರಸ್ತೆ ಸೌಲಭ್ಯ ಕಲ್ಪಿಸಿದಲ್ಲಿ ರಾಜ್ಯದ ಉದ್ಯಮ ವ್ಯವಸ್ಥೆ ಬಲಗೊಳ್ಳಲಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು’ ಎಂದು ಕೋರಿದರು.ಉತ್ತೇಜನಕಾರಿ ಪ್ಯಾಕೇಜ್: ನಿಗದಿತ ಪ್ರಮಾಣದಲ್ಲಿ ಉತ್ಪಾದನೆ ಆಗದೇ ಬರುವ ದಿನಗಳಲ್ಲಿ ಅನೇಕ ಸಣ್ಣ ಘಟಕಗಳು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ ಸಂಭವವಿದೆ. ಹಾಗಾಗಿ ಸರ್ಕಾರವು ಉತ್ತೇಜನಕಾರಿ ಪ್ಯಾಕೇಜ್ ಪರಿಚಯಿಸಬೇಕಾದ ಅಗತ್ಯ ಇದೆ. ಸುಲಭವಾಗಿ ಸಾಲ ಸೌಲಭ್ಯ ದೊರೆಯುವಂತಾಗಬೇಕು. ಎಂಎಸ್‌ಎಂಇಡಿ ಕಾಯ್ದೆಯಡಿ ಶೇ ೨೫ ರಷ್ಟು ಉತ್ಪನ್ನಗಳನ್ನು ಎಂಎಸ್ಇಗಳಿAದ ಖರೀದಿಸುವ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ತಿಳಿಸಿದರು.