ಎಂಪಿಎಂ ನೆಡುತೋಪು ಗುತ್ತಿಗೆ ವಿಸ್ತರಣೆ: ಹೋರಾಟ ಆರಂಭ

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ನೀಡಿದ್ದ 20 ಸಾವಿರ ಹೆಕ್ಟೇರ್ ನೆಡುತೋಪುಗಳ ಗುತ್ತಿಗೆಅವಧಿಯನ್ನು 40 ವರ್ಷ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಪರಿಸರ ಕರ‍್ಯಕರ್ತರಿಂದ ಪ್ರತಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರ 1976ರಲ್ಲಿ ಕಾಗದ ತಯಾರಿಕೆಗೆ ಅಗತ್ಯವಾದ ಕಚ್ಚಾ ಸಾಮಗ್ರಿ ಬೆಳೆಸಲು ಎಂಪಿಎAಗೆ 30 ಸಾವಿರ ಹೆಕ್ಟೇರ್ ಭೂಮಿ ನೀಡಿತ್ತು. 1980ರ ಅರಣ್ಯ ಸಂರಕ್ಷಣೆ ಕಾಯ್ದೆ ಹಾಗೂ ಪರಿಸರ ಸೂಕ್ಷ್ಮ ವಲಯ, ಜೀವ ವೈವಿಧ್ಯ ತಾಣ ಮತ್ತಿತರ ಕಾರಣಗಳಿಂದ ಅಭಯಾರಣ್ಯದ ವ್ಯಾಪ್ತಿಯಲ್ಲಿನ 3,250 ಹೆಕ್ಟೇರ್ ಒಳಗೊಂಡ 109 ನೆಡುತೋಪುಗಳನ್ನು ವನ್ಯಜೀವಿ ವಿಭಾಗ ವಶಕ್ಕೆ ಪಡೆದು ಕೊಂಡಿತ್ತು. ಪ್ರಸ್ತುತ 30 ಸಾವಿರ ಹೆಕ್ಟೇರ್ ವಿಸ್ತೀರ್ಣದ ನೆಡುತೋಪುಗಳು ಎಂಪಿಎA ಅಧೀನದಲ್ಲಿದ್ದು, ಕಳೆದ ಆಗಸ್ಟ್‌ನಲ್ಲಿ ಗುತ್ತಿಗೆ ಅವಧಿ ಮುಗಿದಿತ್ತು. ಗುತ್ತಿಗೆಯನ್ನು ಆ. 2060ರ ವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಎಂಪಿಎಂ ಸ್ಥಗಿತಗೊಂಡಿರುವುದರಿAದ ಅರಣ್ಯ ಇಲಾಖೆ ನೆಡುತೋಪುಗಳನ್ನು ವಶಕ್ಕೆ ಪಡೆದುಕೊಂಡು, ಸಹಜ ಅರಣ್ಯ ಬೆಳೆಸಬೇಕು ಎಂದು “ನಮ್ಮೂರಿಗೆಅಕೇಶಿಯಾ ಬೇಡ ಒಕ್ಕೂಟದ ನೇತೃತ್ವದಲ್ಲಿ ಪರಿಸರ ಕರ‍್ಯಕರ್ತರು ಹೋರಾಟ ನಡೆಸುತ್ತಿದ್ದಾರೆ. ಸ್ಥಳೀಯರ ಅಭಿಪ್ರಾಯವನ್ನು ಪಡೆಯದೇ ಗುತ್ತಿಗೆ ಮುಂದುವರಿಸಿರುವುದಕ್ಕೆ ಮಲೆನಾಡಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜ.೭ರಂದು ಮುಖ್ಯಅರಣ್ಯ ಸಂರಕ್ಷಣಾಧಿಕಾರಿಕಚೇರಿಗೆ ಮುತ್ತಿಗೆ ಹಾಕುವುದಾಗಿ ಒಕ್ಕೂಟದ ಮುಖಂಡರಾದ ಕೆ.ಪಿ.ಶ್ರೀಪಾಲ್, ಪ್ರೊ.ರಾಜೇಂದ್ರಚೆನ್ನಿ, ಕೆ.ಟಿ.ಗಂಗಾಧರ್ ಹೇಳಿದ್ದಾರೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top