ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸೆಸ್‌ನಲ್ಲಿ ದೊರೆಯುತ್ತಿದ್ದ ಪಾಲನ್ನು ಶೇ.1ರಿಂದ ಶೇ.0.60ಕ್ಕೆ ಇಳಿಸಲು ಸಂಪುಟ ಸಭೆ ನಿರ್ಧರಿಸಿದೆ. ಶೇ.೨ರಷ್ಟು ಸೆಸ್‌ನಲ್ಲಿ ತಲಾ ಶೇ.1ರಷ್ಟನ್ನು ವರ್ತಕರಿಗೆ ಮತ್ತು ಎಪಿಎಂಸಿಗಳಿಗೆ ಹಂಚಿಕೆ ಮಾಡಲಾಗಿತ್ತು. ಶೇ.೧ರಷ್ಟು ಸೆಸ್‌ನಿಂದ ವಹಿವಾಟು ನಿರ್ವಹಣೆ ಕಷ್ಟ ಎಂದು ರಾಜ್ಯದ ಹಲವೆಡೆ ವರ್ತಕರು ಎಪಿಎಂಸಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮೊದಲು ಎಪಿಎಂಸಿಗಳಿಗೆ ಸೆಸ್‌ನಲ್ಲಿ ಶೇ.1.50 ಮೊತ್ತ ಸಿಗುತ್ತಿತ್ತು. ಕಾಯ್ದೆ ತಿದ್ದುಪಡಿ ನಂತರ ಮೊತ್ತವನ್ನು ಶೇ.೦.35 ಕ್ಕೆ ಇಳಿಸಲಾಯಿತು. ಆದರೆ, ಆದಾಯ ಕುಸಿತದಿಂದ ಎಪಿಎಂಸಿಗಳ ನಿರ್ವಹಣೆ ಕಷ್ಟವಾಗಲಿದೆ ಎನ್ನುವ ದಊರು ಕೇಳಿಬಂದಿತ್ತು. ಶೇ.1.40ಯಷ್ಟು ಮೊತ್ತವನ್ನು ವರ್ತಕರಿಗೆ ಹಾಗೂ ಶೇ.0.60 ರಷ್ಟು ಪಾಲನ್ನು ಎಪಿಎಂಸಿಗಳಿಗೆ ನೀಡುವ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಆದರೆ, ಮಾರುಕಟ್ಟೆ ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ವಹಿವಾಟಿನ ಮೇಲೆ ಸೆಸ್ ವಿಧಿಸಬೇಕೆಂಬ ಎಪಿಎಂಸಿಗಳ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿಲ್ಲ.
Courtesyg: Google (photo)