ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಬಳಕೆ ವಸ್ತು(ಎಫ್‌ಎಂಸಿಜಿ)ಗಳ ಉತ್ಪಾದಕ ಕಂಪನಿಗಳು ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಇದಕ್ಕೆ ಕಾರಣ. ಕೊಬ್ಬರಿ, ತಾಳೆ ಎಣ್ಣೆ ಮತ್ತಿತರ ಖಾದ್ಯ ತೈಲಗಳ ಬೆಲೆ ಹೆಚ್ಚಳದ ಹೊರೆಯನ್ನು ಎಫ್‌ಎಂಸಿಜಿ ಕಂಪನಿಗಳು ತಾವೇ ಹೊತ್ತುಕೊಂಡಿದ್ದವು. ಆದರೆ, ಇದರಿಂದ ಲಾಭ ಕಡಿಮೆಯಾಗುತ್ತಿರುವುದರಿಂದ, ಹಾಲಿ ಬೆಲೆಗೆ ಮಾರಾಟ ಕಷ್ಟವಾಗುತ್ತಿದೆ. ಸಫೋಲಾ ಮತ್ತು ಪ್ಯಾರಾಚೂಟ್ ಬ್ರ್ಯಾಂಡ್ ಉತ್ಪಾದಕ ಕಂಪನಿ ಮಾರಿಕೋ ಈಗಾಗಲೇ ಬೆಲೆ ಹೆಚ್ಚಳ ಮಾಡಿದ್ದು, ಡಾಬರ್, ಪಾರ್ಲೆ, ಪತಂಜಲಿ ಮತ್ತಿತರ ಕಂಪನಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ.
ಕಳೆದ ಮೂರು, ನಾಲ್ಕು ತಿಂಗಳಿನಲ್ಲಿ ಖಾದ್ಯ ತೈಲ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆ ಆಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಶೇ.4ರಿಂದ ಶೇ. 5ರಷ್ಟು ಬೆಲೆ ಹೆಚ್ಚಳ ಮಾಡಬೇಕಾಗುತ್ತದೆ ಎಂದು ಪಾರ್ಲೆ ಹಾಗೂ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ಪರಿಸ್ಥಿತಿಯನ್ನು ಅವಲೋಕಿಸಿ, ಬೆಲೆ ಹೆಚ್ಚಳ ಮಾಡುತ್ತೇವೆ ಎಂದು ಡಾಬರ್ ಹೇಳಿವೆ. ಬೆಲೆ ಏರಿಕೆ ವಿಚಾರದಲ್ಲಿ ಅಂತಿಮ ತೀರ್ಮಾನಆಗಿಲ್ಲ. ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದೆ ಎಂದು ಪತಂಜಲಿ ಆಯುರ್ವೇದ ಕಂಪನಿ ಹೇಳಿದೆ.
Courtesyg: Google (photo)