ವಿದೇಶಿ ಹೂಡಿಕೆದಾರರ ಪರ ನೀತಿಗಳಿಂದಾಗಿ ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚು ತ್ತಲೇ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ. ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಎಫ್ಡಿಐ ಪ್ರಮಾಣ ಶೇ.13 ರಷ್ಟು ಹೆಚ್ಚಾಗಿದ್ದು, 2.96 ಲಕ್ಷ ಕೋಟಿ ರೂ. ಆಗಿದೆ. ಕೋವಿಡ್ ಗರಿಷ್ಠ ಮಟ್ಟದಲ್ಲಿ ಇದ್ದಾಗಲೂ ಎಫ್ಡಿಐ ಒಳಹರಿವು ನಿರಂತರವಾಗಿ ಹೆಚ್ಚಾಗಿದೆ ಎಂದು ಸಿಐಐ ಆಯೋಜಿಸಿದ್ದ ಪಾಲುದಾರಿಕೆ ಶೃಂಗ 2020ರಲ್ಲಿ ತಿಳಿಸಿದ್ದಾರೆ. ದೂರಸಂಪರ್ಕ, ಮಾಧ್ಯಮ, ಔಷಧ ಮತ್ತು ವಿಮೆಯಂತಹ ವಲಯಗಳಲ್ಲಿ ವಿದೇಶಿ ಹೂಡಿಕೆಗೆ ಸರ್ಕಾರದ ಒಪ್ಪಿಗೆ ಅಗತ್ಯವಿದೆ. ಲಾಟರಿ ವಹಿವಾಟು, ಜೂಜು ಮತ್ತು ಬೆಟ್ಟಿಂಗ್, ಚಿಟ್ ಫಂಡ್ಸ್, ನಿಧಿ ಕಂಪನಿ, ರಿಯಲ್ ಎಸ್ಟೇಟ್, ತಂಬಾಕು ಬಳಸಿರುವ ಉತ್ಪನ್ನಗಳನ್ನು ತಯಾರಿಕಾ ವಲಯಗಳಲ್ಲಿ ಎಫ್ಡಿಐ ನಿಷೇಧಿಸಲಾಗಿದೆ.
Courtesyg: Google (photo)