ವಿದೇಶಿ ಬಂಡವಾಳ ಹೂಡಿಕೆದಾರ(ಎಫ್‌ಪಿಐ)ರು ನವೆಂಬರ್ ಮೊದಲ ವಾರದಲ್ಲಿ 8,381 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಷೇರುಪೇಟೆಯಲ್ಲಿ 6,564 ಕೋಟಿ ಹಾಗೂ ಸಾಲಪತ್ರಗಳಲ್ಲಿ 1,817 ಕೋಟಿ ರೂ. ಹೂಡಿಕೆಯಾಗಿದೆ. ಅಕ್ಟೋಬರ್ ಮಾಸದಲ್ಲಿ 22,033 ಕೋಟಿ ರೂ. ಹೂಡಿಕೆಯಾಗಿತ್ತು. ವಾಣಿಜ್ಯ ಚಟುವಟಿಕೆ ಆರಂಭದ ಜೊತೆಗೆ ಕಂಪನಿಗಳ ತ್ರೈಮಾಸಿಕ ಫಲಿತಾಂಶವೂ ಉತ್ತಮವಾಗಿದೆ. ಹೀಗಾಗಿ ಬಂಡವಾಳ ಒಳಹರಿವು ಹೆಚ್ಚುತ್ತಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಇನ್ನಷ್ಟು ಸ್ಥಿರವಾಗುವ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಗ್ರೋವ್ ಸಂಸ್ಥೆಯ ಸಹ ಸ್ಥಾಪಕ ಹರ್ಷ್ ಜೈನ್ ತಿಳಿಸಿದ್ದಾರೆ.
Courtesyg: Google (photo)