ಎಲ್ಲರಿಗೂ ಲಸಿಕೆ ಬೇಡ: ಕೇಂದ್ರ

ಎಲ್ಲರಿಗೂ ಕೋವಿಡ್ ಲಸಿಕೆ ಹಾಕಲೇಬೇಕು ಎಂದು ಹೇಳಿಲ್ಲವೆಂದು ಕೇಂದ್ರ ಸರ್ಕಾರ ತಿಳಿಸಿದೆ. ನಿರ್ಣಾಯಕವಾದ ಒಂದಷ್ಟು ಜನರಿಗೆ ಲಸಿಕೆ ಹಾಕುವ ಮೂಲಕ ವೈರಾಣು ಹರಡುವಿಕೆಯ ಸರಪಣಿ ತಡೆಬಹುದು. ಎಲ್ಲರಿಗೂ ಲಸಿಕೆ ಹಾಕಲೇಬೇಕು ಎಂದು ಯಾವತ್ತೂ ಹೇಳಿಲ್ಲ. ಸೀರಂ ಸಂಸ್ಥೆಯ ಕ್ಲಿನಿಕಲ್ ಟ್ರಯಲ್‌ನಲ್ಲಿ ವ್ಯಕ್ತಿಯೊಬ್ಬರಲ್ಲಿ ಅಡ್ಡ ಪರಿಣಾಮ ಕಾಣಿಸಿಕೊಂಡಿರುವುದರಿAದ ಜನರಿಗೆ ಲಸಿಕೆ ನೀಡುವಿಕೆ ವಿಳಂಬಗೊಳ್ಳವುದಿಲ್ಲ ಎಂದು ತಿಳಿಸಿದೆ.

ಲಸಿಕೆ ಸುರಕ್ಷಿತ: ಆಸ್ಟಾç ಜೆನೆಕಾದ ಉತ್ಪನ್ನ ಕೋವಿಶೀಲ್ಡ್ನ್ನು ಕ್ಲಿನಿಕಲ್ ಟ್ರಯಲ್ ವೇಳೆ ಪಡೆದಿದ್ದ ಚೆನ್ನೈನ ಸ್ವಯಂಸೇವಕನ ಆರೋಗ್ಯದಲ್ಲಿ ಏರುಪೇರಾಗಿರುವ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ದೇಶದಲ್ಲಿ ಈ ಲಸಿಕೆಯನ್ನು ತಯಾರಿಸುತ್ತಿರುವ ಸೀರಂ ಇನ್‌ಸ್ಟಿಟ್ಯೂಟ್, ಲಸಿಕೆ ಸಂಪೂರ್ಣ ಸುರಕ್ಷಿತ ಎಂದು ಸಾಬೀತಾಗುವವರೆಗೂ ಮಾರುಕಟ್ಟೆಗೆ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದೆ. ಆದರೆ, ಲಸಿಕೆ ಸುರಕ್ಷಿತವಾಗಿದೆ. ಕ್ಲಿನಿಕಲ್ ಟ್ರಯಲ್‌ನ ಎಲ್ಲ ನಿಯಮ, ನೈತಿಕ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಪರೀಕ್ಷಾರ್ಥ ಲಸಿಕೆಯಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, 5 ಕೋಟಿ ರೂ.ಪರಿಹಾರ ನೀಡಬೇಕು ಎಂದು ಚೆನ್ನೈನ ಸ್ವಯಂಸೇವಕ ಸೀರಂಗೆ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕಂಪನಿ 100 ಕೋಟಿ ರೂ.ಪರಿಹಾರ ಕೇಳಿ ನೋಟಿಸ್ ನೀಡಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top