ಎಲ್ಲಿಂದಲಾದರೂ ಕೆಲಸಕ್ಕೆ ಶೀಘ್ರವೇ ಅವಕಾಶ: ಸಚಿವ

ಐಟಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ವರ್ಕ್ ಫ್ರಮ್ ಹೋಂ ಮಾತ್ರವಲ್ಲ; ವರ್ಕ್ ಫ್ರಂ ಎನಿವೇರ್(ಮನೆಯಿಂದ ಅಲ್ಲದೆ ಎಲ್ಲಿಂದಲಾದರೂ) ಅನುಕೂಲ ಕಲ್ಪಿಸಲು ಕಾನೂನು ಜಾರಿಗೆ ತರಲಾಗುವುದು ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು. ೨೩ ನೇ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಮಾತನಾಡಿ, ಲಾಕ್‌ಡೌನ್ ವೇಳೆ ಸಂದರ್ಭದಲ್ಲಿ ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿ, ಶೇ.೭ ರಷ್ಟು ಅಭಿವೃದ್ಧಿ ಸಾಧಿಸಿ ತೋರಿಸಿದ್ದಾರೆ. ಎಲ್ಲಿ ್ಲಂದಲಾದರೂ ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಚೀನಾ ಮೇಲೆ ಅಸಮಾಧಾನಗೊಂಡಿರುವ ಕೆಲವು ಮೊಬೈಲ್ ಕಂಪನಿಗಳು ದೇಶದಲ್ಲಿ ಹೂಡಿಕೆಗೆ ಮುಂದಾಗಿದ್ದು, ೧೧ ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. ಇಲ್ಲಿ ಉತ್ಪಾದಿಸಲ್ಪಡುವ ಮೊಬೈಲ್‌ಗಳಲ್ಲಿ ೭ ಲಕ್ಷ ದೇಶಿ ಮಾರುಕಟ್ಟೆ ಹಾಗೂ ಉಳಿದ ೫ ಲಕ್ಷ ಮೊಬೈಲ್‌ಗಳು ರಫ್ತು ಆಗಲಿವೆ. ದತ್ತಾಂಶ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಸೃಷ್ಟಿಯಾಗಿದ್ದು, ಶೀಘ್ರವೇ ದತ್ತಾಂಶ ರಕ್ಷಣೆ ಕಾನೂನು ಜಾರಿಗೊಳಿಸಲಾಗುವುದು. ಡಿಜಿಟಲ್ ತಾಂತ್ರಿಕತೆ ಬೆಳವಣಿಗೆಗೆ ಪೂರಕವಾಗಿ ಮುಂದಿನ ಸಾವಿರ ದಿನಗಳಲ್ಲಿ ೬ ಲಕ್ಷ ಕಿಮೀ ಉದ್ದದ ಆಪ್ಟಿಕ್ ಫೈಬರ್ ಕೇಬಲ್ ಜಾಲ ನಿರ್ಮಿಸಲು ಕೇಂದ್ರ ಯೋಜನೆ ಹಾಕಿಕೊಂಡಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ನಿಗದಿಪಡಿಸಿರುವ ೧ಲಕ್ಷ ಕೋಟಿ ರೂ.ಡಿಜಿಟಲ್ ಆರ್ಥಿಕತೆ ಗುರಿಗೆ ಹೆಚ್ಚು ಕೊಡುಗೆ ನೀಡಲು ರಾಜ್ಯ ಸನ್ನದ್ಧವಾಗಿದೆ. ಇದಕ್ಕಾಗಿ ಐಟಿ-ಬಿಟಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸುಧಾರಣೆ  ತರಲಾಗಿದೆ. ಮುಂದಿನ ೫ ವರ್ಷಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ೬೦ ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು. ಪ್ರಸ್ತುತ ೫,೨೦೦ ಕೋಟಿ ರೂ. ಇರುವ ಡಿಜಿಟಲ್ ಆರ್ಥಿಕತೆಯನ್ನು ಮುಂದಿನ ೫ ವರ್ಷಗಳಲ್ಲಿ ೩೦ ಸಾವಿರ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ.ಇದಕ್ಕೆ ಸಕಲ ಕ್ರಮ ಕೈಗೊಳ್ಳಲಾಗುತ್ತಿದೆ  . ಪ್ರಧಾನಿ ಮೋದಿ ಅವರು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top