ಡಿಬಿಎಸ್ ಬ್ಯಾಂಕ್ ಜೊತೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಶುಕ್ರವಾರ ವಿಲೀನ ಆಗಲಿದ್ದು, ಎಲ್‌ವಿಬಿ ಮೇಲೆ ವಿಧಿಸಿದ್ದ ನಿರ್ಬಂಧಗಳು ತೆರವಾಗಲಿವೆ. ಎಲ್‌ವಿಬಿ ಮತ್ತು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ನ ವಿಲೀನ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಶುಕ್ರವಾರದಿಂದ ಎಲ್‌ವಿಬಿಯ ಎಲ್ಲ ಶಾಖೆಗಳು ಡಿಬಿಎಸ್ ಬ್ಯಾಂಕ್ ಶಾಖೆಗಳಾಗಿ ಕೆಲಸ ನಿರ್ವಹಿಸಲಿವೆ ಎಂದು ಆರ್‌ಬಿಐ ತಿಳಿಸಿದೆ. ಶುಕ್ರವಾರದಿಂದ ಎಲ್‌ವಿಬಿ ಗ್ರಾಹಕರು ಡಿಬಿಎಸ್ ಬ್ಯಾಂಕ್‌ನಲ್ಲಿ ಖಾತೆಗಳನ್ನು ನಿರ್ವಹಿಸಬಹುದು. ಎಲ್‌ವಿಬಿ ಮೇಲಿನ ನಿರ್ಬಂಧಗಳು ಇರುವುದಿಲ್ಲ. ಎಲ್‌ವಿಬಿ ಗ್ರಾಹಕರಿಗೆ ಸಮಗ್ರ ಸೇವೆ ಒದಗಿಸಲು ಡಿಬಿಎಸ್ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಆರ್‌ಬಿಐ ಹೇಳಿದೆ. ಎಲ್‌ವಿಬಿ ವಹಿವಾಟಿನ ಮೇಲೆ ನ.೧೭ರಂದು ನಿರ್ಬಂಧ ವಿಧಿಸಿದ್ದ ಕೇಂದ್ರ ಸರ್ಕಾರ, ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿತ್ತು. ವಿ.ಎಸ್.ಎನ್. ರಾಮಲಿಂಗ ಚೆಟ್ಟಿಯಾರ್ ನೇತೃತ್ವದ ಏಳು ಮಂದಿ ಸಂಸ್ಥಾಪಕರಿAದ ತಮಿಳುನಾಡಿನ ಕರೂರಿನಲ್ಲಿ ಸ್ಥಾಪನೆಯಾಗಿದ್ದ ಎಲ್‌ವಿಬಿ, 566 ಶಾಖೆ, 918 ಎಟಿಎಂ ಕೇಂದ್ರಗಳನ್ನು ಹೊಂದಿದ್ದು, 19 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಹಿವಾಟು ನಡೆಸುತತಿದೆ. ಗ್ರಾಹಕರ ಸಂಖ್ಯೆ 20 ಲಕ್ಷ. ಈ ವರ್ಷದಲ್ಲಿ ಯೆಸ್ ಬ್ಯಾಂಕ್ ಬಳಿಕ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದ ಎರಡನೆಯ ಬ್ಯಾಂಕ್ ಎಲ್‌ವಿಬಿ.
Courtesyg: Google (photo)