ಏರ್ ಇಂಡಿಯಾ ವಿಮಾನ ಸಂಸ್ಥೆಯ ಖರೀದಿಗೆ ಬಿಡ್ ಸಲ್ಲಿಸುವ ಗಡುವನ್ನು ಕೇಂದ್ರ ಸರ್ಕಾರ ಡಿಸೆಂಬರ್ 14 ರವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಒಂದು ಕಾಲದಲ್ಲಿ ವಾಯುಯಾನ ಕ್ಷೇತ್ರದ ದಿಗ್ಗಜನಾಗಿದ್ದ ಏರ್ ಇಂಡಿಯಾದ ಮಹಾರಾಜ, ತಪ್ಪು ನೀತಿಗಳಿಂದಾಗಿ ನಷ್ಟಕ್ಕೆ ಸಿಲುಕಿದ್ದು ಹಳೆಯ ಸಂಗತಿ. ಸರ್ಕಾರ ಏರ್ ಇಂಡಿಯಾವನ್ನು ಖರೀದಿಗಿಟ್ಟು ಸಾಕಷ್ಟು ಸಮಯ ಕಳೆದಿದ್ದರೂ, ಸೂಕ್ತ ಖರೀದಿದಾರರು ಲಭ್ಯವಾಗಿಲ್ಲ. ಅಲ್ಲದೆ, ಏರ್ ಇಂಡಿಯಾದ ಸಾಲ 60 ಸಾವಿರ ಕೋಟಿ ರೂ. ಇದೆ. ಖರೀದಿಸುವವರು ಈ ಹೊರೆಯನ್ನೂ ಹೊರಬೇಕಾಗುತ್ತದೆ. ಹೀಗಾಗಿ, ಸಾಲದ ಎಷ್ಟು ಪಾಲು ವಹಿಸಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವ ಆಯ್ಕೆಯನ್ನು ಹೂಡಿಕೆದಾರರಿಗೆ ನೀಡುವ ಆಲೋಚನೆಯೂ ಇದೆ. ಈಗಿರುವ ಷರತ್ತಿನ ಪ್ರಕಾರ, ಹೂಡಿಕೆದಾರರು ಒಟ್ಟು ಸಾಲದಲ್ಲಿ ಶೇ.೩೩ಕ್ಕಿಂತ ಹೆಚ್ಚು ಪಾಲನ್ನು ವಹಿಸಿಕೊಳ್ಳಬೇಕಾಗುತ್ತದೆ. ಏರ್ ಇಂಡಿಯಾದ ಎಲ್ಲ ಷೇರುಗಳ ಮಾರಾಟ ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
Courtesyg: Google (photo)