ಐ.ಟಿ. ಮತ್ತು ಎಫ್ಎಂಸಿಜಿ ವಲಯದ ಷೇರುಗಳ ಉತ್ತಮ ಗಳಿಕೆಯಿಂದಾಗಿ, ಷೇರುಪೇಟೆಗಳಲ್ಲಿ ಎರಡನೇ ದಿನವೂ ಸಕಾರಾತ್ಮಕ ವಹಿವಾಟು ನಡೆಯಿತು. ರೂಪಾಯಿ ಮೌಲ್ಯ ಚೇತರಿಕೆ ಕಂಡಿದೆ. ಲಸಿಕೆ ಹೊಸ ಕೊರೊನಾ ವೈರಸ್ ವಿರುದ್ಧವೂ ಕೆಲಸ ಮಾಡಲಿದೆ ಎಂದು ಔಷಧ ಕಂಪನಿಗಳು ಹೇಳಿರುವುದರಿಂದ ಹೂಡಿಕೆದಾರರ ವಿಶ್ವಾಸ ವೃದ್ಧಿಸಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 438 ಅಂಶ ಹೆಚ್ಚಾಗಿ, 46.444 ಅಂಶಗಳಲ್ಲಿ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 135 ಅಂಶ ಹೆಚ್ಚಾಗಿ, 13.601 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ಎಚ್ಯುಎಲ್ ಷೇರು ಶೇ.2.67ರಷ್ಟು ಗರಿಷ್ಠ ಗಳಿಕೆ ಕಂಡಿದ್ದು, ಇನ್ಫೋಸಿಸ್, ಮಹೀಂದ್ರ, ಎಸ್ಬಿಐ, ಐಟಿಸಿ, ಇಂಡಸ್ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಭಾರ್ತಿ ಏರ್ಟೆಲ್ ಮತ್ತು ಟಿಸಿಎಸ್ ಷೇರುಗಳ ಮೌಲ್ಯ ವೃದ್ಧಿಯಾಗಿದೆ. ಟೈಟಾನ್, ಪವರ್ ಗ್ರಿಡ್, ಎನ್ಟಿಪಿಸಿ ಮತ್ತು ಎಚ್ಡಿಎಫ್ಸಿ ಷೇರುಗಳ ಬೆಲೆ ಇಳಿಕೆ ಕಂಡಿದೆ. ಬಿಎಸ್ಇ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಇಂಡೆಕ್ಸ್ ಶೇ.೨.೬೫ರವರೆಗೂ ಏರಿಕೆ ಕಂಡಿವೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಎರಡು ದಿನಗಳಿಂದ ಇಳಿಮುಖವಾಗಿದ್ದ ರೂಪಾಯಿ ಮೌಲ್ಯ 8 ಪೈಸೆ ಹೆಚ್ಚಾಗಿದ್ದು, ಡಾಲರ್ಗೆ 73.76 ರೂ. ವಿನಿಮಯಗೊಂಡಿದೆ.
Courtesyg: Google (photo)