ಐತಿಹಾಸಿಕ ಹಂಪಿಯಲ್ಲಿ ನಿತ್ಯ ಸ್ಫೋಟ

ಹಂಪಿಯಲ್ಲಿ ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಸ್ಫೋಟದಿಂದ ಪ್ರಾಣಿಸಂಕುಲ ಮತ್ತು ಸ್ಮಾರಕಗಳಿಗೆ ಧಕ್ಕೆಯುಂಟಾಗುತ್ತಿದೆ. ಬೆಳ್ಳಂಬೆಳಗ್ಗೆ ಆರಂಭವಾಗುವ ಕಲ್ಲು ಕ್ವಾರಿ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಹಂಪಿಗೆ ಹತ್ತಿರದ ಕಾಳಘಟ್ಟ, ಧರ್ಮದ ಗುಡ್ಡ ಸಮೀಪದ ಬೆಟ್ಟ ಗುಡ್ಡಗಳಲ್ಲಿ ಭಾರಿ ಪ್ರಮಾಣದಲ್ಲಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಕುರುಹುಗಳು, ಸ್ಮಾರಕಗಳು ಧಕ್ಕೆಗೊಳಗಾಗುತ್ತಿವೆ. ಚಿರತೆ, ಕರಡಿ, ನವಿಲು ಹಾಗೂ ವಿವಿಧ ಜಾತಿಯ ಪಕ್ಷಿಗಳ ವಾಸ ಸ್ಥಳ ಗಳು ನಾಶವಾಗುವ ಭೀತಿ ಎದುರಾಗಿದೆ. ಸ್ಮಾರಕಗಳಿಗೆ ಯಾವುದೇ ಹಾನಿ ಉಂಟಾಗದಿರಲಿ ಎಂದು ಕೇಂದ್ರ ವಲಯ(ಕೋರ್ ಜೋನ್) ಮಾಡಲಾಗಿದೆ. ಆದರೆ, ಅದನ್ನು ಉಲ್ಲಂಘಿಸಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಸ್ಫೋಟ ನಡೆಸಿದಾಗ ಸುತ್ತಮುತ್ತಲಿನ ಊರುಗಳಲ್ಲಿ ಶಬ್ದ ಕೇಳಿಸುತ್ತದೆ. ಹೀಗಿದ್ದರೂ ಜಿಲ್ಲಾಡಳಿತ ಮೌನ ವಹಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಹಿಂದೆ ಅಲ್ಲಲ್ಲಿ ಕೆಲವರು ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆ ಮಾಡುತ್ತಿದ್ದರು. ಆದರೆ, ಕೆಲ ತಿಂಗಳಿAದ ಗಣಿಗಾರಿಕೆ ಹೆಚ್ಚಾಗಿದೆ. ಹೊಲದಲ್ಲಿ ಸ್ಫೋಟದಿಂದ ಕಲ್ಲಿನ ಚೂರುಗಳು ಬಂದು ಬೀಳುತ್ತಿವೆ. ಇದರಿಂದ  ರೈತರು ಭಯದಲ್ಲಿ ಕೆಲಸ ಮಾಡುವಂತಾಗಿದೆ. ಹಂಪಿಯಲ್ಲಿ ನವರಾತ್ರಿ ಹಬ್ಬದ ಆಚರಣೆಗಳು ಆರಂಭಗೊAಡಿದ್ದು, ಧರ್ಮದಗುಡ್ಡದ ಚನ್ನಬಸವಣ್ಣ ದೇವಸ್ಥಾನದಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಪೂಜೆಗೆ ನೂರಾರು ಭಕ್ತರು ಭೇಟಿ ಕೊಡುತ್ತಿದ್ದಾರೆ. ಆಯುಧಪೂಜೆ, ವಿಜಯದಶಮಿ ದಿನ ಸಾವಿರಾರು ಜನ ಸೇರುತ್ತಾರೆ. ಜನರಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಎನ್ನುವುದು ಸ್ಥಳೀಯರ ಪ್ರಶ್ನೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top