ಬೆಂಗಳೂರು, ಮಾರ್ಚ್.03: ರಾಜ್ಯದಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ವಿನ್ಯಾಸ ಮತ್ತು ಸ್ಥಳದ ಕುರಿತಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕರ್ನಾಟಕದ ಅಪಾರ್ಟ್ ಮೆಂಟ್ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಒಳಚರಂಡಿ ಸಂಸ್ಕರಾ ಘಟಕ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾರ್ಚ್ 1ರಿಂದಲೇ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಅದರ ಜೊತೆಗೆ ಹೊಸ ನಿಯಮಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ಕೆರೆಯ ನೀರು ಪ್ರಾಣಿಗಳಿಗೂ ಕುಡಿಯಲು ಯೋಗ್ಯವಲ್ಲ!
ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪನೆ ಬಗ್ಗೆ ನಿಯಮಗಳನ್ನೇ ಪಾಲಿಸುವುದು ಕಷ್ಟವಾಗಿದೆ. ಈ ನಡುವೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂದು ಹಲವು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟನೆ:
ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪನೆಗೆ ಜಾರಿಗೊಳಿಸಿದ ಮಾರ್ಗಸೂಚಿಯಲ್ಲಿ ಹೊಸ ನಿಯಮಗಳೇನೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸುವುದರಲ್ಲೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರು ಇಡೀ ದಿನವನ್ನು ಕಳೆದಿದ್ದಾರೆ. ಯಾವುದೇ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿಲ್ಲ. ಬದಲಿಗೆ, ಎಸ್‌ಟಿಪಿಗಳಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಎಲ್ಲ ಆದೇಶಗಳನ್ನು ಒಂದರೊಳಗೆ ಸಂಗ್ರಹಿಸಲಾಗಿದೆ ಎಂದು ಕೆಎಸ್ ಪಿಸಿಬಿ ಕಾರ್ಯದರ್ಶಿ ಶ್ರೀನಿವಾಸುಲು ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್‌ಗಳಲ್ಲಿಎಸ್‌ಟಿಪಿ ಕಡ್ಡಾಯ ನಿಯಮ ವಾಪಸ್
ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದ ಅಂಶಗಳು:
– ಒಳಚರಂಡಿ ಸಂಸ್ಕರಣಾ ಘಟಕ(STP)ಗಳು ಡ್ರೈವಾಲ್, ಕ್ಲಬ್ ಹೌಸ್, ಆಟದ ಪ್ರದೇಶ ಮತ್ತು ಅಪಾರ್ಟ್‌ಮೆಂಟ್ ಗಳಿಂದ ಸಾಧ್ಯವಾದಷ್ಟು ದೂರದಲ್ಲಿರಬೇಕು.
– ಅಪಾರ್ಟ್‌ಮೆಂಟ್ ಸಂಕೀರ್ಣದ ಯಾವುದೇ ಫ್ಲಾಟ್ ನೆಲಮಾಳಿಗೆಯಲ್ಲಿ STP ಇರಬಾರದು.
– STP ನೆಲಮಟ್ಟದಿಂದ ಇರಬೇಕೇ ವಿನಃ ನೆಲಮಾಳಿಗೆಯಲ್ಲಿ ಅಲ್ಲ.
– ಯಾಂತ್ರಿಕ ವ್ಯವಸ್ಥೆ ಮೂಲಕ ಕಟ್ಟಡದೊಳಗಿನ ಬಿಸಿಯಾದ ಹವೆಯನ್ನು ಹೀರಿ ಅದನ್ನು ಟೆರೇಸ್ ಮೂಲಕ ಹೊರ ಬಿಡುವ ವ್ಯವಸ್ಥೆ ಕಲ್ಪಿಸಬೇಕು.