ದೇಶದಲ್ಲಿ ಕಚ್ಚಾ ಉಕ್ಕು ಉತ್ಪಾದನೆ ಸೆಪ್ಟೆಂಬರ್ ಮಾಸದÀಲ್ಲಿ ಶೇ.೨.೯ರಷ್ಟು ಇಳಿಕೆಯಾಗಿದೆ. ಒಟ್ಟು ಕಚ್ಚಾ ಉಕ್ಕು ಉತ್ಪಾದನೆ ೮೫.೨ ಲಕ್ಷ ಟನ್ ಎಂದು ವಿಶ್ವ ಉಕ್ಕು ಒಕ್ಕೂಟ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೮೭.೭ ಲಕ್ಷ ಟನ್ ಕಚ್ಚಾ ಉಕ್ಕು ಉತ್ಪಾದನೆ ಮಾಡಲಾಗಿತ್ತು. ಈ ಸೆಪ್ಟೆಂಬರ್‌ನಲ್ಲಿ ೬೪ ದೇಶಗಳ ಒಟ್ಟು ಉತ್ಪಾದನೆ ೧೫.೬೩ ಕೋಟಿ ಟನ್. ೨೦೧೯ರ ಸೆಪ್ಟೆಂಬರ್‌ನಲ್ಲಿ ಇದ್ದ ೧೫.೧೮ ಕೋಟಿ ಟನ್ ಉತ್ಪಾದನೆಗೆ ಹೋಲಿಸಿದರೆ, ಶೇ ೨.೯ರಷ್ಟು ಹೆಚ್ಚಾಗಿದೆ ಎಂದು ಒಕ್ಕೂಟ ಹೇಳಿದೆ. ಚೀನಾದಲ್ಲಿ ಉಕ್ಕಿನ ಉತ್ಪಾದನೆ ಶೇ.೧೦, ದಕ್ಷಿಣ ಕೊರಿಯಾ (ಶೇ. ೨.೧), ಬ್ರೆ ಜಿಲ್ (ಶೇ.೭.೫) ಹಾಗೂ ಟರ್ಕಿ (ಶೇ.೧೮)ಯಲ್ಲಿ ಉತ್ಪಾದನೆ ಹೆಚ್ಚಳ ಕಂಡಿವೆ. ಇಳಿಕೆಯಾದ ದೇಶಗಳೆಂದರೆ, ಅಮೆರಿಕ ಶೇ.೧೮.೫, ಜಪಾನ್ (ಶೇ.೧೯.೩), ಜರ್ಮನಿ (ಶೇ ೯.೭), ಇಟಲಿ (ಶೇ ೧೮.೭), ಫ್ರಾನ್ಸ್ (ಶೇ ೨೦.೧) ಹಾಗೂ ಸ್ಪೇನ್ (ಶೇ ೨೦.೭) ಉತ್ಪಾದನೆಯಲ್ಲಿ ಇಳಿಕೆ ಎಂದು ತಿಳಿಸಿದೆ.
Courtesyg: Google (photo)