ದೇಶದ ಕರಾವಳಿ ಒಂಬತ್ತು ರಾಜ್ಯಗಳಲ್ಲಿ ಹರಡಿದ್ದು, ೭,೫೦೦ ಕಿಮೀ ಉದ್ದವಿದೆ. ಇವುಗಳಲ್ಲಿ ಎಂಟು ಕಡಲ ತೀರಗಳಿಗೆ ಡೆನ್ಮಾರ್ಕ್ನ ಫೌಂಡೇಷನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಷನ್ ಸ್ವಯಂ ಸೇವಾ ಸಂಸ್ಥೆ ನೀಡುವ ಬ್ಲೂಫ್ಲ್ಯಾಗ್ ಪುರಸ್ಕಾರಕ್ಕೆ ಪಾತ್ರವಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು, ಉಡುಪಿ ಜಿಲ್ಲೆಯ ಪಡುಬಿದ್ರಿ, ಕೇರಳದ ಕಪ್ಪಡ್, ಗುಜರಾತ್ನ ಶಿವರಾಜ್ಪುರ್, ದಿಯು-ದಮನ್ನಿನ ಘೋಗ್ಲ, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್, ಅಂಡಮಾನ್ ಮತ್ತು ನಿಕೊಬಾರಿನ ರಾಧಾನಗರ ಬೀಚ್ಗಳು ಪ್ರಶಸ್ತಿಗೆ ಪಾತ್ರವಾಗಿವೆ. ವಿಶ್ವ ಸಂಸ್ಥೆಯ ಪರಿಸರ ಕರ್ಯಕ್ರಮ(ಯುಎನ್ಇಪಿ), ವಿಶ್ವ ಸಂಸ್ಥೆಯ ಜಾಗತಿಕ ಪ್ರವಾಸ ಸಂಸ್ಥೆ(ಯುಎನ್ಡಬ್ಲ್ಯುಟಿಒ), ಅಂತಾರಾಷ್ಟಿçÃಯ ಪರಿಸರ ಸಂರಕ್ಷಣೆ ಸಂಸ್ಥೆ(ಐಯುಸಿಎನ್) ಮತ್ತು ಪರಿಸರ ಶಿಕ್ಷಣ ಪ್ರತಿಷ್ಠಾನ(ಫೌಂಡೇಷನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಷನ್, ಎಫ್ಇಇ)ನ ತಜ್ಞರ ತಂಡವು ವಿಶ್ವದ ನಾನಾ ದೇಶಗಳ ಕಡಲ ತೀರಗಳನ್ನು ಪರಿಶೀಲಿಸಿ ೩೩ ಕಠಿಣ ಮಾನದಂಡಗಳ ಆಧಾರದ ಮೇಲೆ ಪ್ರಶಸ್ತಿಯನ್ನು ನಿರ್ಧರಿಸುತ್ತದೆ. ೨೦೦೧ರಿಂದಲೂ ಸ್ಪರ್ಧೆ ನಡೆಯುತ್ತಿದ್ದು, ಎಪ್ಪತ್ತಕ್ಕೂ ಹೆಚ್ಚು ರಾಷ್ಟçಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತವೆ. ೨೦೧೯ರಲ್ಲಿ ಸರ್ಕಾರ ೧೩ ಬೀಚ್ಗಳನ್ನು ಆಯ್ಕೆ ಮಾಡಿ, ಸ್ಪರ್ಧೆಗೆ ಕಳಿಸಿತ್ತು.ಶದರೆ ಯಾವುದಕ್ಕು ಪುರಸ್ಕಾರ ಸಿಕ್ಕಿರಲಿಲ್ಲ. ಬ್ಲೂಫ್ಲ್ಯಾಗ್ ಪ್ರಶಸ್ತಿ ನೀಡುವ ಎಫ್ಇಇಯಲ್ಲಿ ೭೭ ರಾಷ್ಟçಗಳು ಸದಸ್ಯರಾಗಿವೆ. ಪ್ರಶಸ್ತಿಯನ್ನು ಈವರೆಗೆ ೫೧ ದೇಶಗಳ ಬೀಚ್ಗಳು ಪಡೆದಿದ್ದು, ಸ್ಪೇನ್ ಒಂದರಲ್ಲೇ ೫೭೮ ಬ್ಲೂಫ್ಲ್ಯಾಗ್ ಬೀಚ್ಗಳಿವೆ. ಇಕೋ ಸ್ಕೂಲ್, ಯಂಗ್ ರಿಪೋರ್ಟರ್ ಫಾರ್ ದಿ ಎನ್ವಿರಾನ್ಮೆಂಟ್, ಲರ್ನಿಂಗ್ ಅಬೌಟ್ ಫಾರೆಸ್ಟ್ ಮತ್ತು ಗ್ರೀನ್ ಕೀ ಇಂಟರ್ನ್ಯಾಷನಲ್ ಪ್ರಶಸ್ತಿಗಳನ್ನೂ ಎಫ್ಇಇ ನೀಡುತ್ತದೆ.
Courtesyg: Google (photo)