ಕಪ್ಪೆಯ ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ಪ್ರಾಣಿ ವಿಜ್ಞಾನಿಗಳು ಹೊಸ ಪ್ರಭೇದದ ಬಿಲಗಪ್ಪೆಯೊಂದನ್ನು ಪತ್ತೆ ಹಚ್ಚಿದ್ದು, ಸ್ಫೇರೊಥೆಕಾ ಬೆಂಗಳೂರು (Sphaerotheca bengaluru) ಎಂದು ನಾಮಕರಣ ಮಾಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಸ್ಫೇರೊಥೆಕಾ ವಂಶದ ಕಪ್ಪೆಗಳ ಬಾಹ್ಯ ವಿಜ್ಞಾನ ಮತ್ತು ಆನುವಂಶಿಕ ವ್ಯತ್ಯಾಸಗಳ ಆಧಾರದ ಮೇಲೆ ಹೊಸ ಪ್ರಬೇಧವನ್ನು ವಿವರಿಸಲಾಗಿದೆ. ಈ ಕುರಿತು ನ್ಯೂಜಿಲೆಂಡ್‌ನಿಂದ ಪ್ರಕಟವಾಗುವ ಪ್ರಾಣಿ ವಿಜ್ಞಾನದ ಅಂತಾರಾಷ್ಟ್ರೀಯ ನಿಯತಕಾಲಿಕೆ ಜೂಟ್ಯಾಕ್ಸಾದಲ್ಲಿ ಸಂಶೋಧನಾ ಪ್ರಬಂಧ ಪ್ರಕಟವಾಗಿದೆ. ಭಾರತದಲ್ಲಿ ಇತ್ತೀಚೆಗೆ ಉಭಯವಾಸಿಗಳ ಆವಿಷ್ಕಾರಗಳು ಹೆಚ್ಚುತ್ತಿವೆ. ಜೀವವೈವಿಧ್ಯದ ಅತಿಸೂಕ್ಷ್ಮ ತಾಣಗಳಲ್ಲಿ(ಹಾಟ್‌ಸ್ಪಾಟ್) ಅಥವಾ ಹಸಿರು ಹೊದಿಕೆಯುಳ್ಳ ಅರಣ್ಯಗಳಲ್ಲೇ ಹೆಚ್ಚಾಗಿ ಹೊಸ ಪ್ರಭೇದಗಳು ಪತ್ತೆಯಾಗುತ್ತಿವೆ.

ಮೌಂಟ್ ಕಾರ್ಮೆಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ.ದೀಪಕ್ ತಂಡ ನಗರದ ಹೊರವಲಯದಲ್ಲಿ ಹೊಸ ಜಾತಿಯ ಬಿಲಗಪ್ಪೆಯನ್ನು ಪತ್ತೆಹಚ್ಚಿದೆ. ಭಾರತೀಯ ಪ್ರಾಣಿ ಸರ್ವೇಕ್ಷಣೆ ಸಂಸ್ಥೆ ವಿಜ್ಞಾನಿ ಡಾ. ಕೆ. ಪಿ. ದಿನೇಶ್, ಫ್ರಾನ್ಸ್ ನ್ಯಾಷನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ ವಿಜ್ಞಾನಿ ಡಾ. ಅನ್ನೆಮಾರಿ ಓಹ್ಲರ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ. ಕಾರ್ತಿಕ್ ಶಂಕರ್, ಜೆಡ್‌ಎಸ್‌ಐ ವಿಜ್ಞಾನಿ ಡಾ.ಬಿ.ಎಚ್.ಚನ್ನಕೇಶವಮೂರ್ತಿ ಹಾಗೂ ಮೈಸೂರು ಯುವರಾಜ ಕಾಲೇಜಿನ ಪ್ರಾಧ್ಯಾಪಕಿ ಜೆ.ಎಸ್.ಅಶಾದೇವಿ ಸಂಶೋಧನಾ ತಂಡದಲ್ಲಿದ್ದರು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top