ಕೇರಳ ವಿಧಾನಸಭೆ ಪ್ರತಿಭಟನೆಯಲ್ಲಿ ತೊಡಗಿರುವ ರೈತರಿಗೆ ಬೆಂಬಲ ಸೂಚಿಸಲು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಏಕೈಕ ಬಿಜೆಪಿ ಸದಸ್ಯ ಕೂಡಾ ನಿರ್ಣಯವನ್ನು ಬೆಂಬಲಿಸಿದರು. ಎಲ್‌ಡಿಎಫ್ ಮೈತ್ರಿಕೂಟ, ಯುಡಿಎಫ್ ಮೈತ್ರಿಕೂಟ ಹಾಗೂ ಬಿಜೆಪಿ ಸದಸ್ಯ ಓ. ರಾಜಗೋಪಾಲನ್ ನಿರ್ಣಯ ಬೆಂಬಲಿಸಿದರು. ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾರ್ಪೋರೇಟ್ ಕಂಪನಿಗಳಿಗೆ ನೆರವಾಗಲು ಈ ಕಾನೂನುಗಳನ್ನು ರೂಪಿಸಲಾಗಿದೆ. ಇವುಗಳನ್ನು ತಕ್ಷಣ ವಾಪಸ್ ಪಡೆಯಬೇಕು. ಸಂಸತ್ತಿನ ಸ್ಥಾಯಿ ಸಮಿತಿಗೂ ಕಳುಹಿಸದೆ ಈ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಕೃಷಿಕರ ಪ್ರತಿಭಟನೆಯಿಂದ ಪರಿಣಾಮ ಕೇರಳದ ಮೇಲೂ ಪರಿಣಾಮ ಆಗಲಿದೆ. ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಎಚ್ಚರಿಕೆಯಿಂದ ಜಾರಿಗೊಳಿಸಬೇಕು ಎಂದರು.
Courtesyg: Google (photo)