ಕೊಬ್ಬರಿ ಬೆಲೆ ಸ್ವಲ್ಪ ಹೆಚ್ಚಳವಾಗಿದ್ದು, ಕ್ವಿಂಟಾಲ್‌ಗೆ 14 ಸಾವಿರ ರೂ. ಗಡಿ ದಾಟಿದೆ. ಅರಸೀಕೆರೆಯಲ್ಲಿ ದರ 14,070 ರೂ. ಇದೆ. ಲಾಕ್‌ಡೌನ್‌ಗೆ ಮೊದಲು 10,500 ರೂ. ಇದ್ದ ದರ,ಆನಂತರ ಖರೀದಿ ಮತ್ತೆ ಆರಂಭಗೊAಡಾಗ 11,200 ರೂ.ಗೆ ಹೆಚ್ಚಳಗೊಂಡಿತ್ತು. ಅಂದಾಜು 3-4 ತಿಂಗಳು ಕೊಬ್ಬರಿ ಬೆಲೆ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್) ನಿಗದಿಪಡಿಸಿದ್ದ ಬೆಲೆಗಿಂತ ಕಡಿಮೆ ಇತ್ತು. ನಾಫೆಡ್ ಖರೀದಿ ಕೇಂದ್ರ ಆರಂಭಗೊಂಡ ಬಳಿಕ 11ರೂ.ಸಾವಿರ ಮತ್ತುದೀಪಾವಳಿ ಸಂದರ್ಭದಲ್ಲಿ೧೩ ಸಾವಿರ ರೂ. ಆಸುಪಾಸಿನಲ್ಲಿತ್ತು. ದೀಪಾವಳಿ ನಂತರ ಬೆಲೆ ಕಡಿಮೆಯಾಗಬಹುದು ಎಂದುಕೊAಡು ರೈತರು ಈಗಾಗಲೇ ಸಂಗ್ರಹ ಬರಿದು ಮಾಡಿಕೊಂಡಿದ್ದಾರೆ. ಕೊಬ್ಬರಿ ಹೆಚ್ಚು ಬಳಸುವ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಳಗೊಂಡಿದ್ದು, ಬೆಲೆ ಅಧಿಕಗೊಂಡಿದೆ.
Courtesyg: Google (photo)