ಬ್ರಿಟನ್‌ನಲ್ಲಿ ಪತ್ತೆಯಾದ ಹೊಸ ಕೊರೊನಾ ವೈರಸ್ ದೇಶದಲ್ಲಿ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ನ.25ರಿAದ ಡಿ.23ರವರೆಗೆ ಬ್ರಿಟನ್ ಮತ್ತು ಬ್ರಿಟನ್ ಮೂಲಕ ದೇಶಕ್ಕೆ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಮಂಗಳವಾರದಿಂದ ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆರ್‌ಟಿ-ಪಿಸಿಆರ್ ತಪಾಸಣೆ ಆರಂಭಿಸಲಾಗಿದೆ. ಅಹಮದಾಬಾದ್‌ನಲ್ಲಿ ನಾಲ್ಕು, ದೆಹಲಿಯಲ್ಲಿ ಐದು, ಚೆನ್ನೈನಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಿದ್ದು, ಇದು ಕೊರೊನಾದ ನೂತನ ಸ್ವರೂಪವೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ನ.೨೫ರ ಬಳಿಕ ವಿದೇಶದಿಂದ ಬಂದ ಎಲ್ಲರನ್ನೂ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ಕಂಡುಬದಲ್ಲಿ ಆಸ್ಪತ್ರೆಗೆ ದಾಖಲಿಸಬೇಕು. ಉಳಿದವರನ್ನು ಮನೆಯಲ್ಲೇ ಕ್ವಾರಂಟೈನ್‌ಗೆ ಒಳಪಡಿಸಬೇಕು. ಹೊಸ ವೈರಾಣು ಬಗ್ಗೆ ನಿಮ್ಹಾನ್ಸ್ನ ಪ್ರಯೋಗಾಲಯದಲ್ಲಿ ಶೋಧ ನಡೆಸಬೇಕು ಎಂದು ತಜ್ಞರು ಸೂಚಿಸಿದ್ದಾರೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸುತ್ತಿದ್ದು, ರೋಗಪತ್ತೆ ವರದಿ 15 ನಿಮಿಷಗಳಲ್ಲೇ ಲಭ್ಯವಾಗಲಿದೆ. ಪರೀಕ್ಷೆ ಕೇಂದ್ರವನ್ನು ಆರಿಗಾ ರಿಸರ್ಚ್ ಸಂಸ್ಥೆ ನಿರ್ವಹಿಸುತ್ತಿದೆ.ಟರ್ಮಿನಲ್‌ನಲ್ಲಿ ಮಾದರಿ ಸಂಗ್ರಹ ಕಿಯಾಸ್ಕ್ ಇಡಲಾಗಿದ್ದು, ಹೊರ ಭಾಗದಲ್ಲಿ ಪ್ರಯೋಗಾಲಯ ನಿರ್ಮಿಸಲಾಗಿದೆ. ಆಗಮಿಸುವ ಹಾಗೂ ಇಲ್ಲಿಂದ ತೆರಳುವ ಪ್ರಯಾಣಿಕರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಪ್ರಯೋಗಾಲಯ ಸಹಕಾರಿಯಾಗಿದೆ. ಪರೀಕ್ಷೆ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ವೆಬ್‌ಸೈಟ್‌ನಲ್ಲಿ ದಾಖಲಿಸಲಾಗುವುದು ಎಂದು ಬಿಐಎಎಲ್ ತಿಳಿಸಿದೆ.
Courtesyg: Google (photo)