ಕೋವಿಡ್‌ಗೆ ಲಸಿಕೆ ವರ್ಷಾರಂಭದಲ್ಲಿ ಲಭ್ಯ 

ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಸ್ಟಾçಜೆನೆಕಾ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆಯು ೨೦೨೧ರ ಆರಂಭದಲ್ಲಿ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಮೈಸೂರಿನ ಜೆ.ಎಸ್.ಎಸ್. ವೈದ್ಯಕೀಯ ಕಾಲೇಜು ಸೇರಿದಂತೆ ದೇಶದ ಹಲವೆಡೆ ಲಸಿಕೆಯ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಮೊದಲ ಹಂತದಲ್ಲಿ ೧೮ರಿಂದ ೫೫ ವರ್ಷ ವಯಸ್ಸಿನ ೧,೬೦೦ ಜನರಿಗೆ ಲಸಿಕೆ ನೀಡಲಾಗಿದ್ದು, ಲಸಿಕೆ ನೀಡಿದ ೨೮ ದಿನಗಳಲ್ಲಿ ದೇಹದಲ್ಲಿ ಕೊರೊನಾ ಸೋಂಕು ಪ್ರತಿರೋಧಕ ಶಕ್ತಿ ಕಾಣಿಸಿದೆ. ೫೬ ದಿನಗಳ ಹಿಂದೆ ಮೊದಲ ಹಂತದ ಪ್ರಯೋಗ ಮುಗಿದಿದೆ. ಮುಂದಿನ ಹಂತಗಳಲ್ಲಿ ೫ರಿಂದ ೧೨, ೧೮ ರಿಂದ ೫೫ ಹಾಗೂ ೫೫ ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತದೆ. ಕೋವಿಡ್ ಪೀಡಿತರಿಗೂ ಪ್ರಾಯೋಗಿಕವಾಗಿ ಲಸಿಕೆ ನೀಡಲು ಕಂಪನಿ ಉದ್ದೇಶಿಸಿದೆ. ಎಂದರು. ಜಾಗೃತಿ ಅಗತ್ಯ: ಚಳಿಗಾಲದ ಅವಧಿಯಲ್ಲಿ ಕೊರೊನಾ ವೈರಸ್ ಹೇಗೆ ವರ್ತಿಸಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಹೀಗಾಗಿ, ನವೆಂಬರ್, ಡಿಸೆಂಬರ್ ಮತ್ತು ಜನವರಿಯಲ್ಲಿ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆಸ್ಟಾç ಜೆನೆಕಾ, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಜತೆ ಸೇರಿ ದೇಶದಲ್ಲಿ ಲಸಿಕೆ ಉತ್ಪಾದಿಸಲಿದ್ದು, ೧೦೦ ಕೋಟಿ ಜನರಿಗೆ ನೀಡಲು ಸಾಲುವಷ್ಟು ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಏತನ್ಮಧ್ಯೆ ಹೈದರಾಬಾದ್ ಭಾರತ್ ಬಯೋಟೆಕ್ ಕೂಡ ಕೋವ್ಯಾಕ್ಸಿನ್ ಹೆಸರಿನ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಸಹಯೋಗದಲ್ಲಿ ಆರೋಗ್ಯ ತಜ್ಞರು, ತಾಂತ್ರಿಕ ಪರಿಣತರು, ಪೂರೈಕೆದಾರರನ್ನು ಒಳಗೊಂಡ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ. ಸಮಿತಿಯು ಲಸಿಕೆಯ ಪೂರೈಕೆ, ಸಂಗ್ರಹ ಮತ್ತು ವಿತರಣೆ ಕುರಿತು ಸಲಹೆ ನೀಡಲಿದೆ. ಮೊದಲ ಹಂತದಲ್ಲಿ ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ ಮತ್ತು ನಂತರದಲ್ಲಿ ಇತರ ಕಾಯಿಲೆಗಳನ್ನು ಹೊಂದಿರುವವರು, ಗರ್ಭಿಣಿಯರು, ಬಾಣಂತಿಯರಿಗೆ ಲಸಿಕೆ ನೀಡುವುದು ಸರ್ಕಾರದ ಉದ್ದೇಶ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top