ಕೋವಿಡ್ ಲಸಿಕೆ ನೀಡುವ ಆಂದೋಲನವನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಮೇಲುಸ್ತುವಾರಿಗೆ ಸಮಿತಿ ರಚಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಆರೋಗ್ಯ ಸೇವೆಯ ಇನ್ನಿತರ ಕಾರ್ಯಗಳಿಗೆ ತೊಡಕು ಉಂಟಾಗದಂತೆ ನೋಡಿಕೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲಮಯ ಮಾಹಿತಿ ಹರಿದಾಡದಂತೆ ನೋಡಿಕೊಳ್ಳುವುದು ಅಗತ್ಯ. ಕೋವಿಡ್–19 ಲಸಿಕೆ ನೀಡುವ ಪ್ರಕ್ರಿಯೆ ಒಂದು ವರ್ಷ ನಡೆಯಬಹುದು. ಆರೋಗ್ಯ ಸೇವೆ ಕಾರ್ಯಕರ್ತರ ಮೂಲಕ ಆರಂಭಿಸಿ, ವಿವಿಧ ಗುಂಪುಗಳಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ಸಮಿತಿ ರಚಿಸಬೇಕು. ಲಸಿಕೆ ದಾಸ್ತಾನಿಡಲು ಶೀತಲಗೃಹ ಸಜ್ಜುಗೊಳಿಸುವುದು, ನಿರ್ವಹಣೆ ಕುರಿತ ಸವಾಲು ಎದುರಿಸಲು ಸಿದ್ಧತೆ ನಡೆಸಬೇಕು ಎಂದು ಕೇಂದ್ರ ಸೂಚನೆ ನೀಡಿದೆ.
Courtesyg: Google (photo)