ತಾನು ಅಭಿವೃದ್ಧಿಪಡಿಸಿರುವ ಲಸಿಕೆ ಕೋವಿಡ್ ತಡೆಗಟ್ಟುವಲ್ಲಿ ಶೇ. 90ರಷ್ಟು ಪರಿಣಾಮಕಾರಿಯಾಗಿದೆ ಎಂದು ಫೀಜರ್ ಹೇಳಿದೆ. ಅಮೆರಿಕ ಹಾಗೂ ಇನ್ನಿತರ ಐದು ರಾಷ್ಟ್ರಗಳ 44 ಸಾವಿರ ಮಂದಿ ಮೇಲೆ ಲಸಿಕೆ ಪ್ರಯೋಗಿಸಲಾಗಿದ್ದು, ಲಸಿಕೆ ಶೇ. 90ರಷ್ಟು ಪರಿಣಾಮಕಾರಿ ಎಂದು ತಿಳಿದುಬಂದಿದೆ. ತುರ್ತು ಸಂದರ್ಭದಲ್ಲಿ ಲಸಿಕೆಯನ್ನು ಬಳಸಲು ಅವಕಾಶ ನೀಡುವಂತೆ ನಿಯಂತ್ರಣ ಸಂಸ್ಥೆಗೆ ಮಾಸಾಂತ್ಯ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದು ಮಧ್ಯಂತರ ವರದಿಯಾಗಿದ್ದು, ಇದರ ಆಧಾರದಲ್ಲಿ ಸದ್ಯದಲ್ಲೇ ಲಸಿಕೆ ಲಭ್ಯವಾಗಲಿದೆ ಎಂದುಕೊಳ್ಳುವಂತಿಲ್ಲ. ಫಲಿತಾಂಶ ಅಧ್ಯಯನ ಪೂರ್ಣಗೊಳ್ಳುವ ವೇಳೆಗೆ ಬದಲಾಗುವ ಸಾಧ್ಯತೆಗಳಿರುತ್ತದೆ. ಆರಂಭಿಕ ಫಲಿತಾಂಶದಿAದ ನಾವು ಉತ್ತೇಜಿತರಾಗಿದ್ದೇವೆ. ಲಸಿಕೆ ಶೀಘ್ರದಲ್ಲೇ ಲಭ್ಯವಾಗಬಹುದು ಎಂಬ ಭರವಸೆಯನ್ನು ನೀಡಬಹುದಾದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಡಾ. ಬಿಲ್ ಗ್ರುಬರ್ ಹೇಳಿದ್ದಾರೆ. ಲಸಿಕೆ ಬಳಕೆಗೆ ಅನುಮತಿ ಕೋರಿ ಆಹಾರ ಮತ್ತು ಔಷಧ ಆಡಳಿತಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಅಮೆರಿಕದ ಇನ್ನೊಂದು ಸಂಸ್ಥೆ ಮಾಡರ್ನಾ ಇಂಕ್ ಕೂಡ ತಿಳಿಸಿದೆ.
Courtesyg: Google (photo)