ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ತುರ್ತುಸಂದರ್ಭದಲ್ಲಿ ಬಳಸಲು ತಜ್ಞರ ಸಮಿತಿ ಅನುಮತಿ ನೀಡಿದೆ. ಲಸಿಕೆಗೆ ಸಂಬಂಧಿಸಿದ ಅಂತಿಮ ತೀರ್ಮಾನವನ್ನು ಔಷಧ ಮಹಾ ನಿಯಂತ್ರಕರು ತೆಗೆದುಕೊಳ್ಳಬೇಕಿದೆ. ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಈ ಲಸಿಕೆ ತಯಾರಿಸುತ್ತಿದೆ. ಎಸ್‌ಐಐ ಹಾಗೂ ಭಾರತ್ ಬಯೋಟೆಕ್(ಕೊವ್ಯಾಕ್ಸಿನ್ ತಯಾರಕ) ತಾವು ಅಭಿವೃದ್ಧಿಪಡಿಸಿದ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ನಿಯಂತ್ರಿತ ಬಳಕೆಗೆ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.
ಈ ಸಂಸ್ಥೆಗಳು ಸಲ್ಲಿಸಿದ್ದ ದತ್ತಾಂಶ ಹಾಗೂ ಇನ್ನಿತರ ಮಾಹಿತಿಗಳನ್ನು ಪರಿಶೀಲಿಸಿದ ತಜ್ಞರ ಸಮಿತಿ, ಕೋವಿಶೀಲ್ಡ್ ಬಳಕೆಗೆ ಅನುಮತಿ ನೀಡಿದೆ. ನಮ್ಮಲ್ಲಿ ಪ್ರಸ್ತುತ7.5 ಕೋಟಿ ಡೋಸ್ ಲಸಿಕೆ ಲಭ್ಯವಿದ್ದು, ಜನವರಿ ಮೊದಲ ವಾರಕ್ಕೆ 10 ಕೋಟಿ ಡೋಸ್ ಲಭ್ಯವಾಗಲಿದೆ ಎಂದು ಎಸ್‌ಐಐ ನಿರ್ದೇಶಕ ಉಮೇಶ್ ಶಾಲಿಗ್ರಾಮ್ ಹೇಳಿದ್ದರು. ಅರ್ಜೆಂಟೀನಾ ಹಾಗೂ ಬ್ರಿಟನ್‌ನಲ್ಲಿ ಈಗಾಗಲೇ ಲಸಿಕೆಯ ಬಳಕೆಗೆ ಅನುಮತಿ ನೀಡಲಾಗಿದೆ.
Courtesyg: Google (photo)