ಆಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಕೋವಿಡ್–೧೯ ತಡೆಗೆ ಅಭಿವೃದ್ಧಿಪಡಿಸಿರುವ ಲಸಿಕೆ ಕೋವಿಶೀಲ್ಡ್‌ನ ಪ್ರತಿ ಡೋಸ್‌ಗೆ 3ರಿಂದ 4 ಡಾಲರ್ (219–292ರೂ) ದರ ನಿಗದಿ ಮಾಡಲಾಗಿದೆ. ಈ ದರದಲ್ಲಿ ಸರ್ಕಾರಕ್ಕೆ ಲಸಿಕೆ ಪೂರೈಸಲಾಗುವುದು. ಆದರೆ, ಮಾರುಕಟ್ಟೆಗೆ ಲಸಿಕೆ ಪೂರೈಕೆ ಆರಂಭವಾದರೆ, ದರವು ದುಪ್ಪಟ್ಟಾಗಲಿದೆ ಎಂದು ತಯಾರಿಕಾ ಸಂಸ್ಥೆಯು ಸೋಮವಾರ ತಿಳಿಸಿದೆ.
ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆಯಾಗಿರುವ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಈ ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಒಪ್ಪಂದ ಮಾಡಿಕೊಂಡಿದೆ. ಲಸಿಕೆಯ 5 ಕೋಟಿ ಡೋಸ್ ಈಗಾಗಲೇ ತಯಾರಾಗಿದೆ. ಸರ್ಕಾರ ಹಾಗೂ ಜಿಎವಿಐ ದೇಶಗಳಿಗೆ ಮೊದಲ ಹಂತದಲ್ಲಿ ಲಸಿಕೆಗಳನ್ನು ಮಾರಾಟ ಮಾಡಲಾಗುವುದು ಎಂದು ಸೆರಂ ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ ತಿಳಿಸಿದ್ದಾರೆ. ಕೋವಿಶೀಲ್ಡ್, ಭಾರತ್ ಬಯೊಟೆಕ್ನ ಕೋವ್ಯಾಕ್ಸಿನ್ ಲಸಿಕೆಗಳ ನಿರ್ಬಂಧಿತ, ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಕರು ಭಾನುವಾರ ಅನುಮೋದನೆ ನೀಡಿದ್ದಾರೆ.
ಮಾರುಕಟ್ಟೆಯಲ್ಲಿ ದರ ದುಪ್ಪಟ್ಟು:-ಮಾರುಕಟ್ಟೆಯಲ್ಲಿ ಲಸಿಕೆಯ ಒಂದು ಡೋಸ್ ಬೆಲೆ 6-8 ಡಾಲರ್ (438ರಿಂದ 584ರೂ). ಲಸಿಕೆ ತಯಾರಿಕೆಗೆ ಅನುಮತಿ ಸಿಕ್ಕಿದ್ದು, ಪ್ರಕ್ರಿಯೆಗಳು ಮುಗಿಯಲು ೭–10 ದಿನ ಹಿಡಿಯಲಿದೆ, ಬಾಂಗ್ಲಾದೇಶ, ಮ್ಯಾನ್ಮಾರ್, ಮೊರಾಕ್ಕೊದಂತಹ ದೇಶಗಳ ಜೊತೆ ಸೆರಂ ಸಂಸ್ಥೆಯು ಲಸಿಕೆ ಪೂರೈಕೆಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದೆ, 2-3 ತಿಂಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ಪಡೆದರೆ ಅದು ಪರಿಣಾಮಕಾರಿ–ಸೆರಂ, ಮೊದಲ ಆದ್ಯತೆ ಭಾರತದ ಮಾರುಕಟ್ಟೆ. ನಂತರ ಒಪ್ಪಂದ ಮಾಡಿಕೊಂಡ ದೇಶಗಳು. ಮಾರ್ಚ್–ಏಪ್ರಿಲ್ ಹೊತ್ತಿಗೆ ಲಸಿಕೆ ರಫ್ತಿಗೆ ಅನುಮತಿ ಸಿಗಬಹುದು ಎಂದು ಅದಾರ್ ಪೂನಾವಾಲಾ ಸೆರಂ ಸಂಸ್ಥೆ ಸಿಇಒ ತಿಳಿಸಿದ್ದಾರೆ.
Courtesyg: Google (photo)