ಒಡಿಶಾದ ಕರಾವಳಿಯಲ್ಲಿರುವ ಚಂಡೀಪುರ ಉಡಾವಣಾ ಕೇಂದ್ರದಿAದ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಕ್ಷಿಪಣಿ ವ್ಯವಸ್ಥೆ(ಕ್ಯೂಆರ್ಎಸ್ಎಎಂ)ಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕಳೆದ ಐದು ದಿನಗಳಲ್ಲಿ ಕ್ಷಿಪಣಿಯ ಎರಡನೇ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಇದಾಗಿದ್ದು, ಆಕಾಶದಲ್ಲಿದ್ದ ಗುರಿಯನ್ನು ಧ್ವಂಸಗೊಳಿಸಿದೆ. 30 ಕಿಮೀ ವ್ಯಾಪ್ತಿಯಲ್ಲಿರುವ ಯುದ್ಧ ವಿಮಾನ, ಡ್ರೋನ್ ಅಥವಾ ಯುಎವಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಕ್ಷಿಪಣಿಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದರು.
Courtesyg: Google (photo)