ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರ ಗರಿಷ್ಠ ಶೇ.1.48ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಸಗಟು ದರ ಸೂಚ್ಯಂಕ(ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಶೇ.1.32 ಇತ್ತು. ಅಕ್ಟೋಬರ್ 2019ರಲ್ಲಿ ಶೂನ್ಯ, ಫೆಬ್ರವರಿ 2020ರಲ್ಲಿ ಶೇ.2.26ರಷ್ಟಿತ್ತು. ಆನಂತರ ಗರಿಷ್ಠ ಮಟ್ಟ ಅಕ್ಟೋಬರ್ 2020ರಲ್ಲಿ ದಾಖಲಾಗಿದೆ. ಆಹಾರ ಉತ್ಪನ್ನಗಳ ಬೆಲೆ ತುಸು ಇಳಿಕೆ ಆಗಿದ್ದರೂ, ತಯಾರಿಸಿದ ಆಹಾರ ಉತ್ಪನ್ನಗಳ ಬೆಲೆ ಏರಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ಶೇ.8.17 ಇದ್ದ ಆಹಾರ ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇ.6.37ರಷ್ಟಿದೆ. ತರಕಾರಿ ಮತ್ತು ಆಲೂಗಡ್ಡೆ ಬೆಲೆ ಏರಿಕೆ ಕ್ರಮವಾಗಿ ಶೇ.25.23 ಮತ್ತು ಶೇ.107.70. ಗ್ರಾಹಕ ದರ ಸೂಚ್ಯಂಕ(ಸಿಪಿಐ) ಆಧರಿತ ಹಣದುಬ್ಬರ ಮುಂದಿನ ಕೆಲವು ತಿಂಗಳು ಏರುಮುಖವಾಗಿಯೇ ಇರಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ. ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದ ಬಳಿಕ ಬೇಡಿಕೆ ಹೆಚ್ಚಳವಾಗುತ್ತಿರುವುದನ್ನು ಸಿಪಿಐ ಹಣದುಬ್ಬರ ಸೂಚಿಸುತ್ತಿದೆ. ಆದರೆ, ಬಹುಪಾಲು ಬೇಡಿಕೆ ಹಬ್ಬಗಳಿಗೆ ಸಂಬಂಧಿಸಿರುವುದರಿಂದ, ಇದು ಸಹಜವಾದ ಚೇತರಿಕೆ ಎನ್ನಲಾಗುವುದಿಲ್ಲ ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ನ ಮುಖ್ಯ ಆರ್ಥಿಕ ತಜ್ಞ ಡಿ.ಕೆ. ಪಂತ್ ತಿಳಿಸಿದ್ದಾರೆ.
Courtesyg: Google (photo)