ಚಂದ್ರನ ಮೇಲ್ಮೈಯಿಂದ ಕಲ್ಲು ತರಲು ಸಿದ್ಧವಾದ ಚೀನಾ

ಚಂದ್ರನ ಮೇಲ್ಮೈಯಿಂದ ಕಲ್ಲುಗಳನ್ನು ತರಲು ಮಾನವರಹಿತ ನೌಕೆಯೊಂದನ್ನು ಚೀನಾ ನ.25ರಂದು ಉಡಾವಣೆಗೊಳಿಸಲಿದೆ. ಕಳೆದ ನಾಲ್ಕು ದಶಕಗಳ ಬಳಿಕ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ತರುವ ಮೊದಲ ಯೋಜನೆ ಇದಾಗಿದೆ.  2022ರೊಳಗಾಗಿ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸುವ ಗುರಿ ಹೊಂದಿರುವ ಚೀನಾ ಮಾನವಸಹಿತ ಚಂದ್ರಯಾನದ ಯೋಜನೆಯನ್ನೂ ಹಾಕಿಕೊಂಡಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚುಮಾಡಿದೆ. ಚಂದ್ರನ ಮೇಲ್ಮೈಯಲ್ಲಿರುವ ಜ್ವಾಲಾಮುಖಿಯ ಚಟುವಟಿಕೆ, ಚಂದ್ರನ ರಚನೆಯನ್ನು ಅಧ್ಯಯನ ನಡೆಸುವ ಉದ್ದೇಶದಿಂದ ಮೇಲ್ಮೈಯಲ್ಲಿರುವ ಕಲ್ಲುಗಳು, ಮಣ್ಣನ್ನು(ಎರಡು ಕೆ.ಜಿ) ಚಾಂಗ್‌ಇ–5 ಪ್ರೊಬ್ ಹೊತ್ತು ತರಲಿದೆ. ಮಂಗಳವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 4 ರಿಂದ 5 ಗಂಟೆಗೆ ಉಡಾವಣೆಗೊಂಡರೆ, ನವೆಂಬರ್ ಅಂತ್ಯದಲ್ಲಿ ಈ ಪ್ರೊಬ್ ಚಂದ್ರನಲ್ಲಿಗೆ ತಲುಪಲಿದೆ. ಮಾದರಿಗಳನ್ನು ಹೊತ್ತ ಪ್ರೊಬ್ ಡಿಸೆಂಬರ್‌ನಲ್ಲಿ ಚೀನಾದ ಮಂಗೋಲಿಯಾ ಪ್ರದೇಶದಲ್ಲಿ ಇಳಿಯಲಿದೆ. 2017ರಲ್ಲಿ ಈ ರಾಕೆಟ್ ಉಡಾವಣೆಗೊಳಿಸಲು ಚೀನಾ ನಿರ್ಧರಿಸಿತ್ತು. ಆದರೆ ಲಾಂಗ್ ಮಾರ್ಕ್ ೫ ರಾಕೆಟ್‌ನ ಎಂಜಿನ್‌ನಲ್ಲಿ ದೋಷ ಕಂಡುಬಂದಿದ್ದರಿಂದ, ಉಡಾವಣೆ ಮುಂದೂಡಲಾಗಿತ್ತು. ಯೋಜನೆ ಯಶಸ್ವಿಯಾದಲ್ಲಿ, ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಿದ ವಿಶ್ವದ ಮೂರನೇ ರಾಷ್ಟ್ರವಾಗಿ ಚೀನಾ ಗುರುತಿಸಿಕೊಳ್ಳಲಿದೆ. 1960ರಲ್ಲಿ ಹಾಗೂ 1970ರಲ್ಲಿ ಕ್ರಮವಾಗಿ ಅಮೆರಿಕ ಹಾಗೂ ಸೋವಿಯತ್ ಯೂನಿಯನ್ ಚಂದ್ರ ನಿಂದ ಮಾದರಿಗಳನ್ನು ಸಂಗ್ರಹಿಸಿತ್ತು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top