ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಆಗುವ ಹಾನಿಯ ಕುರಿತು ಹೊಸದಾಗಿ ರೂಪಿಸಿರುವ ಎಚ್ಚರಿಕೆಯ ಸಂದೇಶವನ್ನು ತಂಬಾಕು ಉತ್ಪನ್ನಗಳ ಮೇಲೆ ಚಿತ್ರಸಹಿತ ಪ್ರಕಟಿಸುವುದನ್ನು ಖಾತರಿಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ.
ಎಚ್ಚರಿಕೆ ಸಂದೇಶ ತಂಬಾಕು ಸೇವನೆಯ ಗಂಭೀರ ಮತ್ತು ವ್ಯತಿರಿಕ್ತ ಆರೋಗ್ಯದ ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಲಿದೆ. ಅದರಲ್ಲೂ ಮುಖ್ಯವಾಗಿ ಯುವಜನ, ಮಕ್ಕಳು ಮತ್ತು ಅನಕ್ಷರಸ್ಥರ ಜಾಗೃತಿಗೆ ಅಗತ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.
Courtesyg: Google (photo)