ರೂಪಾಂತರ ಕೊರೊನಾ ವೈರಸ್ನಿಂದ ಯುರೋಪಿನ ಹಲವು ದೇಶಗಳಲ್ಲಿ ಲಾಕ್ಡೌನ್ ಆಗುತ್ತಿದೆ. ಹೀಗಿದ್ದರೂ, ದೇಶÀದ ಅರ್ಥ ವ್ಯವಸ್ಥೆಯ ಪ್ರಮುಖ ಸೂಚಕಗಳು ಚೇತರಿಕೆ ಕಂಡಿವೆ. ತಯಾರಿಕೆ, ಉಕ್ಕು ಬೇಡಿಕೆ, ವಾಹನಗಳ ನೋಂದಣಿ, ಇ ವೇ ಬಿಲ್, ಜಿಎಸ್ಟಿ ಸಂಗ್ರಹ, ಪೆಟ್ರೋಲ್ ಬಳಕೆ ಮತ್ತು ರಫ್ತು ಏರಿಕೆ ಆಗುತ್ತಿದೆ. ಇವುಗಳಲ್ಲಿ ಕೆಲವು ಡಿಸೆಂಬರ್ನಲ್ಲಿ ಕೋವಿಡ್ ಹಿಂದಿನ ಹಂತ ತಲುಪಿವೆ.
ಹಿಂಗಾರು ಬಿತ್ತನೆ ಶೇ.3ರಷ್ಟು ಹೆಚ್ಚಳ ಆಗಿದೆ. ಟ್ರ್ಯಾಕ್ಟರ್ ಮಾರಾಟ ಅಧಿಕಗೊಂಡಿದೆ. ನರೇಗಾ ಯೋಜನೆಯಡಿ ಕೂಲಿಗೆ ಬೇಡಿಕೆ ಡಿಸೆಂಬರ್ನಲ್ಲಿ ಶೇ. 57ರಷ್ಟು ಹೆಚ್ಚಳವಾಗಿದೆ. ರೈಲ್ವೆ ಸರಕು ಸಾಗಣೆ ಶೇ.8.5 ರಷ್ಟು ಏರಿಕೆ ಹಾಗೂ ಪ್ರಯಾಣಿಕರ ಬುಕಿಂಗ್ನಿAದ 1,432 ಕೋಟಿ ರೂ. ಸಂಗ್ರಹವಾಗಿದೆ. ಡಿಸೆಂಬರ್ನಲ್ಲಿ ಯುಪಿಐ ಆಧಾರಿತ ಪಾವತಿ 223 ಕೋಟಿಗೆ ತಲುಪಿದೆ. ಯುಪಿಐ ಮೂಲಕ 4.16 ಲಕ್ಷ ಕೋಟಿ ರೂ. ಮೌಲ್ಯದ ವಹಿವಾಟು ನಡೆದಿದೆ. ಅಕ್ಟೋಬರ್ನಲ್ಲಿ ಎರಡು ಅಂಕಿಗಳ ಬೆಳವಣಿಗೆ ದಾಖಲಿಸಿದ್ದ ವಿದ್ಯುತ್ ಬೇಡಿಕೆ, ನವೆಂಬರ್ನಲ್ಲಿ ಶೇ.3.5 ಹಾಗೂ ಡಿಸೆಂಬರ್ನಲ್ಲಿ ಶೇ.5.2ಕ್ಕೆ ನಿಂತಿದೆ. ಡೀಸೆಲ್ ಬೇಡಿಕೆ ಕಳೆದ ವರ್ಷದ ಮಟ್ಟಕ್ಕೆ ಹೋಲಿಸಿದರೆ ಡಿಸೆಂಬರ್ನಲ್ಲಿ ಶೇ. ೩ರಷ್ಟು ಕಡಿಮೆ ಆಗಿತ್ತು. ಸಿಮೆಂಟ್ ಮತ್ತು ನೈಸರ್ಗಿಕ ಅನಿಲ ಬಳಕೆಯಲ್ಲಿ ಹೆಚ್ಚಳ ಆಗುತ್ತಿಲ್ಲ ಎಂದು ಅಂಕಿ–ಅAಶಗಳು ಹೇಳುತ್ತಿವೆ. ಇ ವೇ ಬಿಲ್ಗಳಲ್ಲಿ ಡಿಸೆಂಬರ್ನಲ್ಲಿ ಶೇ.17.5ರಷ್ಟು ಹೆಚ್ಚಳ, ಹೆದ್ದಾರಿಗಳಲ್ಲಿ ದಿನವೊಂದಕ್ಕೆ ಸರಾಸರಿ 74.31 ಕೋಟಿ ರೂ. ಟೋಲ್ ಸಂಗ್ರಹ ಆಗುತ್ತಿದ್ದು, ಕೋವಿಡ್ ಹಿಂದಿನ ಮಟ್ಟ ದಾಟಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಂಕಿ–ಅAಶಗಳು ಹೇಳಿವೆ.
Courtesyg: Google (photo)